‘ಇಂಡಿಯನ್ 2’ ರಿಲೀಸ್ಗೂ ಮೊದಲೇ ಬಂಪರ್ ಉಡುಗೊರೆ ಪಡೆದ ಶಂಕರ್; ಕಮಲ್ ಹಾಸನ್ ಕೊಟ್ಟ ದುಬಾರಿ ಗಿಫ್ಟ್ ಏನು?
ಸಿನಿಮಾ ದೃಶ್ಯಗಳನ್ನು ನೋಡಿದ ಬಳಿಕ ಕಮಲ್ ಭಯ ದೂರ ಆಗಿದೆ. ಈ ಕಾರಣಕ್ಕೆಕಮಲ್ ಹಾಸನ್ ಅವರು ಶಂಕರ್ಗೆ ದುಬಾರಿ ವಾಚ್ನ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

ಒಂದು ಸಿನಿಮಾ ಹಿಟ್ ಆದ ಬಳಿಕ ಅದಕ್ಕೆ ಸೀಕ್ವೆಲ್ ಸಿದ್ಧಪಡಿಸಲಾಗುತ್ತದೆ. ಆದರೆ, ಇದಕ್ಕೆ ಯಾವುದೇ ಕಾಲಮಿತಿ ಇಲ್ಲ. ಮೊದಲ ಪಾರ್ಟ್ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಎರಡನೇ ಪಾರ್ಟ್ ರಿಲೀಸ್ ಆದ ಉದಾಹರಣೆ ಇದೆ. ಅದೇ ರೀತಿ ಹಲವು ವರ್ಷ ಗ್ಯಾಪ್ ಆದ ಉದಾಹರಣೆಯೂ ಇದೆ. 1996ರಲ್ಲಿ ರಿಲೀಸ್ ಆದ ‘ಇಂಡಿಯನ್’ (Indian 2) ಚಿತ್ರಕ್ಕೆ ಸೀಕ್ವೆಲ್ ಸಿದ್ಧಗೊಳ್ಳುತ್ತಿದೆ. ಶಂಕರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕಮಲ್ ಹಾಸನ್ (Kamal Haasan) ಹೀರೋ. ಅವರು ಸಿನಿಮಾದ ದೃಶ್ಯಗಳನ್ನು ನೋಡಿ ಕಮಲ್ ಖುಷಿಯಾಗಿದ್ದಾರೆ. ಈ ಕಾರಣಕ್ಕೆ ಶಂಕರ್ಗೆ ಒಂದು ವಿಶೇಷ ವಾಚ್ ಗಿಫ್ಟ್ ಮಾಡಿದ್ದಾರೆ. ಇದರ ಬೆಲೆ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
‘ಇಂಡಿಯನ್’ 1996ರಲ್ಲಿ ತೆರೆಗೆ ಬಂದು ಹಿಟ್ ಆಯಿತು. ಶಂಕರ್ ಅವರ ನಿರ್ದೇಶನ ಈ ಚಿತ್ರಕ್ಕಿತ್ತು. ಹೀರೋ ಆಗಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದರು. ಸುಮಾರು 28 ವರ್ಷಗಳ ಬಳಿಕ ಇದಕ್ಕೆ ಸೀಕ್ವೆಲ್ ಸಿದ್ಧಗೊಳ್ಳುತ್ತಿದೆ. ಇಷ್ಟು ದೀರ್ಘ ಗ್ಯಾಪ್ ಆಗಿರುವುದರಿಂದ ಈ ಸಿನಿಮಾನ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಚಿತ್ರತಂಡದವರಿಗೆ ಇರುತ್ತದೆ. ಆದರೆ, ಸಿನಿಮಾ ದೃಶ್ಯಗಳನ್ನು ನೋಡಿದ ಬಳಿಕ ಕಮಲ್ ಭಯ ದೂರ ಆಗಿದೆ. ಈ ಕಾರಣಕ್ಕೆ ಶಂಕರ್ಗೆ 8 ಲಕ್ಷ ರೂಪಾಯಿ ವಾಚ್ನ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಪಾನೆರಾಯ್ ಲ್ಯೂಮಿನರ್ ಸಂಸ್ಥೆಯ ವಾಚ್ ಇದಾಗಿದೆ.
ಶಂಕರ್ಗೆ ವಾಚ್ ತೊಡಿಸುತ್ತಿರುವ ಫೋಟೋನ ಕಮಲ್ ಹಾಸನ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು ಉದ್ದನೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಇಂದು ನಾನು ‘ಇಂಡಿಯನ್ 2′ ಚಿತ್ರದ ಪ್ರಮುಖ ದೃಶ್ಯಗಳನ್ನು ವೀಕ್ಷಿಸಿದೆ. ಶಂಕರ್ ನಿಮಗೆ ನನ್ನ ಶುಭಾಶಯ. ಇದೇ ನಿಮ್ಮ ಉತ್ತಂಗ ಆಗದಿರಲಿ ಎಂಬುದು ನನ್ನ ಸಲಹೆ. ಇದು ನಿಮ್ಮ ಕಲಾ ಜೀವನದ ಅತ್ಯುನ್ನತ ಹಂತ. ಹೊಸ ಎತ್ತರಗಳನ್ನು ಏರಿ’ ಎಂದು ಕಮಲ್ ವಿಶ್ ಮಾಡಿದ್ದಾರೆ..
‘இந்தியன் 2’ படத்தின் பிரதான காட்சிகளை இன்று பார்த்தேன். என் உளமார்ந்த வாழ்த்துகள் @shankarshanmugh
இதுவே உங்கள் உச்சமாக இருக்கக் கூடாது என்பதும் என் அவா. காரணம், இதுதான் உங்கள் கலை வாழ்வின் மிக உயரமான நிலை. இதையே உச்சமாகக் கொள்ளாமல் திமிறி எழுங்கள். பல புதிய உயரங்கள் தேடி.… pic.twitter.com/Mo6vDq7s8B
— Kamal Haasan (@ikamalhaasan) June 28, 2023
ಇದನ್ನೂ ಓದಿ:ಕಮಲ್ ಹಾಸನ್ ಜೊತೆ ನಟಿಸಲು ಷರತ್ತು ಇರಿಸಿದ್ದ ಶಾರುಖ್ ಖಾನ್: ಕಮಲ್ರನ್ನು ಕಾಪಾಡಿದ್ದು ಅದೇ ಷರತ್ತು
‘ವಿಕ್ರಮ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ಕಮಲ್ ಹಾಸನ್ ಅವರು ಗೆದ್ದು ಬೀಗಿದರು. ಈ ಕಾರಣಕ್ಕೆ ಪ್ರೇಕ್ಷಕರಿಗೆ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




