ನಟ ಕಮಲ್ ಹಾಸನ್ (Kamal Haasan) ಅವರಿಗೆ ಈಗ 69 ವರ್ಷ. ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ನಟನೆಯಿಂದ, ನಿರ್ಮಾಣದಿಂದ ಸಾಕಷ್ಟು ಹಣ ಮಾಡಿದ್ದಾರೆ. ಅವರಲ್ಲಿ ಈಗ ಯಾವುದೇ ಆಸೆ ಎನ್ನುವುದು ಉಳಿದುಕೊಂಡಿಲ್ಲವಂತೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಚಾಟ್ ಶೋ ಒಂದರಲ್ಲಿ ಕಮಲ್ ಹಾಸನ್ ಹಾಗೂ ಅವರ ಮಗಳು ಶ್ರುತಿ ಹಾಸನ್ ಆಗಮಿಸಿದ್ದರು. ‘ನಿಮ್ಮ ಪೂರ್ಣಗೊಳ್ಳದ ಆಸೆಗಳೇನಾದರೂ ಇದೆಯಾ’ ಎಂದು ಶ್ರುತಿ ಅವರು ಕಮಲ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಕಮಲ್ ತಮ್ಮದೇ ಸ್ಟೈಲ್ನಲ್ಲಿ ಉತ್ತರಿಸಿದ್ದಾರೆ.
‘ನನಗೆ ಅದು ಬೇಕು, ಇದು ಬೇಕು ಎನಿಸುತ್ತದೆ. ಆಗ ನನಗೆ ನಾನು ಸಣ್ಣವನಿದ್ದಾಗ ಉಳಿದುಕೊಂಡ ಸಣ್ಣ ಮನೆ ನೆನಪಾಗುತ್ತದೆ. ನನ್ನ ತಂದೆ ನನಗೆ ಉಳಿದುಕೊಳ್ಳಲು ಸಣ್ಣ ರೂಂ ಕೊಡುತ್ತಿದ್ದರು. ಅದರಲ್ಲಿ ಎರಡು ಪಿಯಾನೋ ಹಿಡಿಯುವಷ್ಟೇ ಜಾಗ ಇತ್ತು. ಮನೆ ಟೆರೇಸ್ ಮೇಲಿತ್ತು. ಹೀಗಾಗಿ ಸಾಕಷ್ಟು ಬಿಸಿ ಹೊಡೆಯುತ್ತಿತ್ತು. ನನ್ನ ತಂದೆಗೆ ಪ್ರತಿ ತಿಂಗಳು 10 ಸಾವಿರ ಸಿಕ್ಕರೆ ಎಂದು ಕನಸು ಕಾಣುತ್ತಿದ್ದರು. ಏನನ್ನು ಖರೀದಿಸಬೇಕು ಎಂದು ತಂದೆ ಲಿಸ್ಟ್ ಮಾಡುತ್ತಿದ್ದರು’ ಎಂದಿದ್ದಾರೆ ಕಮಲ್ ಹಾಸನ್.
‘ನನಗೆ ಸ್ಕೂಟರ್ ಖರೀದಿಸಬೇಕು ಎಂದಿತ್ತು, ಆ ಬಳಿಕ ಕಾರು. ಈಗ ಹಣ ಇದೆ. ಆದರೆ, ಈಗ ನನಗೆ ನಿಜಕ್ಕೂ ಏನು ಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ನನಗೆ ಇದನ್ನೇ ಖರೀದಿಸಬೇಕು ಎನ್ನುವ ಯಾವುದೇ ಪಟ್ಟಿ ಇಲ್ಲ. ನನಗೆ ವಿಮಾನ ಬೇಕು ಎಂದು ಅನಿಸಬಹುದು. ಆದರೆ, ಅದರಲ್ಲಿ ಎಷ್ಟು ದಿನ ಓಡಾಡುತ್ತೇನೆ? ಕೊಡೆಕೆನಲ್ನಲ್ಲಿ ಒಂದು ದೊಡ್ಡ ಮನೆ ಖರೀದಿಸಿದರೆ ಅಲ್ಲಿ ಎಷ್ಟು ಸಮಯ ಕಳೆಯಬಹುದು? ಮತ್ತೆ ಇಲ್ಲಿಯೇ ಓಡಿ ಬರಬೇಕು’ ಎಂದಿದ್ದಾರೆ ಕಮಲ್.
ಇದನ್ನೂ ಓದಿ: ಶಾರುಖ್ ಖಾನ್ ಮಗನೊಂದಿಗೆ ಐಶ್ವರ್ಯಾ ಮಗಳ ಮದುವೆ? ವೈರಲ್ ಫೋಟೋಗೆ ಫ್ಯಾನ್ಸ್ ಆಕ್ರೋಶ
ಶಾರುಖ್ ಖಾನ್ ಅವರು ಇತ್ತೀಚೆಗೆ ವಿಮಾನ ಖರೀದಿ ಮಾಡೋ ಬಗ್ಗೆ ಮಾತನಾಡಿದ್ದರು. ಮಣಿರತ್ನಂ ಜೊತೆ ಸಿನಿಮಾ ಮಾಡೋ ಆಸೆ ಶಾರುಖ್ಗೆ ಇದೆ. ಇದಕ್ಕಾಗಿ ಪ್ಲೇನ್ ಬೇಕಿದ್ದರೂ ಖರೀದಿಸುತ್ತೇನೆ ಎಂದು ಶಾರುಖ್ ಖಾನ್ ಅವರು ಹೇಳಿದ್ದರು. ಈ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ ಸೂಚಿಸಿದ್ದಾರೆ. ಶಾರುಖ್ ಖಾನ್ಗೆ ಕನಿಷ್ಠ ಒಂದು ಆಸೆಯಾದರೂ ಇದೆಯಲ್ಲ, ನನಗೆ ಅದೂ ಇಲ್ಲ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Tue, 30 April 24