‘ವಿಕ್ರಮ್’ ಸಿನಿಮಾ (Vikram Movie) ಕಮಲ್ ಹಾಸನ್ ಪಾಲಿಗೆ ಒಂದೊಳ್ಳೆಯ ಕಂಬ್ಯಾಕ್ ಸಿನಿಮಾ ಆಗಿದೆ. ಸ್ಟಾರ್ಗಳು ಯಾವ ರೀತಿ ಕಂಬ್ಯಾಕ್ ಮಾಡಬೇಕು ಎಂದುಕೊಂಡಿರುತ್ತಾರೋ ಅದಕ್ಕಿಂತ ಹೆಚ್ಚಿನದ್ದನ್ನೇ ‘ವಿಕ್ರಮ್’ ಸಿನಿಮಾ ನೀಡಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜತೆ ಕಮಲ್ ಹಾಸನ್ (Kamal Haasan) ಕೈ ಜೋಡಿಸಿದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಸಿನಿಮಾ ನಿಜ ಮಾಡಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಚಿತ್ರ ಹಲವು ದಾಖಲೆಗಳನ್ನು ಬರೆಯುತ್ತಿದೆ. ಇದು ತಂಡದ ಖುಷಿಯನ್ನು ಹೆಚ್ಚಿಸಿದೆ.
ಜೂನ್ 3ರಂದು ‘ವಿಕ್ರಮ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಚಿತ್ರಕ್ಕೆ ಯಾವ ರೀತಿ ವಿಮರ್ಶೆ ಸಿಗುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಿನಿಮಾ ಉತ್ತಮವಾಗಿದ್ದರೆ ಬಾಯಿ ಮಾತಿನಿಂದ ಪ್ರಚಾರ ಸಿಗುತ್ತದೆ. ಈಗ ‘ವಿಕ್ರಮ್’ ಸಿನಿಮಾಗೂ ದೊಡ್ಡ ಪ್ರಚಾರ ಸಿಗುತ್ತಿದೆ. ವೀಕೆಂಡ್ನಲ್ಲಿ ಚಿತ್ರವನ್ನು ಮುಗಿಬಿದ್ದು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ.
#Vikram TN Box Office
Day 1 – ₹ 20.61 cr
Day 2 – ₹ 14.47 cr
Total – ₹ 35.08 crEXCELLENT hold as it marches towards ₹50 cr milestone mark.
— Manobala Vijayabalan (@ManobalaV) June 5, 2022
ಲೋಕೇಶ್ ಕನಗರಾಜ್ ಅವರು ಒಂದು ರಿವೇಂಜ್ ಸ್ಟೋರಿ ಹೇಳಿದ್ದಾರೆ. ಈ ಕಥೆಗೆ ಕಮಲ್ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಜೀವ ತುಂಬಿದ್ದಾರೆ. ಈ ಕಲಾವಿದರ ಅಬ್ಬರದಿಂದ ಮೊದಲ ದಿನ ತಮಿಳುನಾಡಿನಲ್ಲಿ ಈ ಸಿನಿಮಾ 20.61 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ (ಜೂನ್ 4) 14.47 ಕೋಟಿ ರೂಪಾಯಿ ಬಾಚಿಕೊಂಡಿದೆ ಈ ಸಿನಿಮಾ. ಒಟ್ಟಾರೆ ತಮಿಳುನಾಡು ಕಲೆಕ್ಷನ್ 35 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ವಿಕ್ರಮ್’ ಚಿತ್ರಕ್ಕೆ ಭರ್ಜರಿ ಓಪನಿಂಗ್; ಮೊದಲ ದಿನ ಕಮಲ್ ಹಾಸನ್ ಸಿನಿಮಾ ಗಳಿಸಿದ್ದೆಷ್ಟು?
ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮೊದಲ ದಿನ 62 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರದ ಕಲೆಕ್ಷನ್ ಸೇರಿ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟಿದೆ. ಇದು ಕಮಲ್ ಹಾಸನ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಇಂದು (ಜೂನ್ 5) ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಸೋಮವಾರದ (ಜೂನ್ 6) ಪರೀಕ್ಷೆಯಲ್ಲಿ ಸಿನಿಮಾ ಯಾವ ರೀತಿಯ ಕಲೆಕ್ಷನ್ ಮಾಡಲಿದೆ ಅನ್ನೋದು ಸದ್ಯದ ಕುತೂಹಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.