Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​

| Updated By: ಮದನ್​ ಕುಮಾರ್​

Updated on: Jun 08, 2022 | 4:51 PM

Vikram Movie Box Office Collection: ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲಂಗಾಣ, ಆಂಧ್ರ ಮುಂತಾದ ಕಡೆಗಳಲ್ಲೂ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಇದರಿಂದ ಕಮಲ್​ ಹಾಸನ್​ ಸೇರಿದಂತೆ ಇಡೀ ತಂಡದ ಖುಷಿ ಹೆಚ್ಚಿದೆ.

Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
ಕಮಲ್ ಹಾಸನ್
Follow us on

ನಟ ಕಮಲ್​ ಹಾಸನ್​ (Kamal Haasan) ಅವರು ಭರಪೂರ ಖುಷಿಯಲ್ಲಿದ್ದಾರೆ. ಈ ಸಂತಸಕ್ಕೆ ಕಾರಣ ‘ವಿಕ್ರಮ್​’ (Vikram Movie) ಸಿನಿಮಾದ ಗೆಲುವು. ಹೌದು, ಜೂನ್​ 3ರಂದು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಪ್ರತಿ ದಿನವೂ ಬಹುಕೋಟಿ ರೂಪಾಯಿ ಬಾಚಿಕೊಂಡು ಈ ಸಿನಿಮಾ ಮುನ್ನುಗ್ಗುತ್ತಿದೆ. ಮೊದಲ ದಿನವೇ ತಮಿಳುನಾಡಿನಲ್ಲಿ ‘ವಿಕ್ರಮ್​’ ಚಿತ್ರ 20 ಕೋಟಿ ರೂಪಾಯಿ ಗಳಿಸಿತ್ತು. ನಂತರದ ದಿನಗಳಲ್ಲಿ ಕಲೆಕ್ಷನ್​ (Vikram Box Office Collection) ಹೆಚ್ಚಿತು. ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಬಾಯಿಮಾತಿನ ಪ್ರಚಾರದಿಂದ ಹೆಚ್ಚಿನ ಸಂಖ್ಯೆಯ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಪರಿಣಾಮವಾಗಿ ಈ ಚಿತ್ರ 5 ದಿನಕ್ಕೆ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿದೆ. ಈ ಬಗ್ಗೆ ಟ್ರೇಡ್​ ಅನಲಿಸ್ಟ್​ ರಮೇಶ್​ ಬಾಲ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಮಲ್​ ಹಾಸನ್​ ಅವರು ಈ ಒಂದು ಗೆಲುವಿಗಾಗಿ ಬಹುವರ್ಷದಿಂದ ಕಾದಿದ್ದರು. ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಚಿತ್ರದ ಗೆಲುವಿನಲ್ಲಿ ನಿರ್ದೇಶಕರ ಕೊಡುಗೆ ದೊಡ್ಡದಿದೆ. ಅದೇ ರೀತಿ ಪಾತ್ರವರ್ಗವೂ ಕೂಡ ಹೈಲೈಟ್​ ಆಗಿದೆ. ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​, ಸೂರ್ಯ ಮುಂತಾದವರು ನಟಿಸಿದ್ದಾರೆ. ಎಲ್ಲರ ಕಾಂಬಿನೇಷನ್​ನಿಂದ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ: Vikram: ಕಮಲ್​ ಹಾಸನ್​ಗೆ 50 ಕೋಟಿ ರೂ. ಸಂಬಳ; ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ಗೆ ಎಷ್ಟು?

ಇದನ್ನೂ ಓದಿ
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
‘ವಿಕ್ರಮ್’ ಸಿನಿಮಾ ನಿರ್ದೇಶಕ ಲೋಕೇಶ್​ ಕನಗರಾಜ್​ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
Vikram: ಕಮಲ್​ ಹಾಸನ್​ಗೆ 50 ಕೋಟಿ ರೂ. ಸಂಬಳ; ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ಗೆ ಎಷ್ಟು?
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲಂಗಾಣ, ಆಂಧ್ರ ಮುಂತಾದ ಕಡೆಗಳಲ್ಲೂ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಸಿನಿಮಾದಲ್ಲಿನ ಸಾಹಸ ದೃಶ್ಯಗಳನ್ನು ಜನರು ಇಷ್ಟಪಟ್ಟಿದ್ದಾರೆ. 67ನೇ ವಯಸ್ಸಿನಲ್ಲೂ ಕಮಲ್​ ಹಾಸನ್​ ಭರ್ಜರಿ ಸಾಹಸ ಮೆರೆದಿರುವುದಕ್ಕೆ ಅಭಿಮಾನಿಗಳು ಭೇಷ್​ ಎಂದಿದ್ದಾರೆ. ಹಾಗೆಯೇ ಕಥೆಯಲ್ಲಿನ ಟ್ವಿಸ್ಟ್​ಗಳು ಕೂಡ ಗಮನ ಸೆಳೆದಿವೆ.

ಕಮಲ್​ ಹಾಸನ್​ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ. ಅವರದೇ ನಿರ್ಮಾಣ ಸಂಸ್ಥೆಯಾದ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಮೂಲಕ ಈ ಚಿತ್ರ ಮೂಡಿಬಂದಿದೆ. ಬಂಡವಾಳ ಹೂಡಿರುವ ಕಮಲ್​ ಹಾಸನ್​ ಅವರಿಗೆ ಭರ್ಜರಿ ಲಾಭ ಆಗಿದೆ. ಹಾಗಾಗಿ ಸಿನಿಮಾದ ಗೆಲುವಿಗೆ ಕಾರಣರಾದ ನಿರ್ದೇಶಕ ಲೋಕೇಶ್​ ಕನಗರಾಜ್ ಅವರಿಗೆ ದುಬಾರಿ ಬೆಲೆಯ ಕಾರನ್ನು ಅವರು ಉಡುಗೊರೆಯಾಗಿ ನೀಡಿದ್ದಾರೆ. ಅದೇ ರೀತಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅವರಿಗೆ ರೊಲೆಕ್ಸ್​ ವಾಚನ್ನು ಗಿಫ್ಟ್​ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.