ಅನಾರೋಗ್ಯಕ್ಕೆ ತುತ್ತಾಗಿದ್ದರೂ ಕಂಗನಾ ಇಂಥಾ ದೊಡ್ಡ ರಿಸ್ಕ್ ತೆಗೆದುಕೊಂಡ್ರಾ?

ಜಯಲಲಿತಾ ಪಾತ್ರಕ್ಕಾಗಿ ಕಂಗನಾ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಸ್ಲಿಮ್​ ಆಗಿದ್ದರು. ಸಿನಿಮಾಕ್ಕಾಗಿ ಅವರು ತೆಗೆದುಕೊಂಡ ಮತ್ತೊಂದು ರಿಸ್ಕ್​ನ ವಿಚಾರ ಈಗ ಹೊರಬಿದ್ದಿದೆ. 

ಅನಾರೋಗ್ಯಕ್ಕೆ ತುತ್ತಾಗಿದ್ದರೂ ಕಂಗನಾ ಇಂಥಾ ದೊಡ್ಡ ರಿಸ್ಕ್ ತೆಗೆದುಕೊಂಡ್ರಾ?
ಶೀಘ್ರವೇ ಹಾಲಿವುಡ್​ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ
Edited By:

Updated on: Apr 04, 2021 | 7:12 PM

ಕಂಗನಾ ರಣಾವತ್ ಪ್ರತಿ ಸಿನಿಮಾಗೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿನಿಮಾದಲ್ಲಿರುವ ಪಾತ್ರ ಯಾವ ಅಂಶ ಕೇಳುತ್ತದೆಯೋ ಅದನ್ನು ಈಡೇರಿಸುತ್ತಾರೆ. ತಲೈವಿ ಸಿನಿಮಾಗೆ ಕಂಗನಾ ತೆಗೆದುಕೊಂಡ ದೊಡ್ಡ ರಿಸ್ಕ್​ ವಿಚಾರ ಒಂದು ಈಗ ರಿವೀಲ್​ ಆಗಿದೆ. ಈ ವಿಚಾರ ಕೇಳಿದ ಅಭಿಮಾನಿಗಳು ಕಂಗನಾ ಅವರನ್ನು ಹೊಗಳುತ್ತಿದ್ದಾರೆ.

ಜಯಲಲಿತಾ ಪಾತ್ರಕ್ಕಾಗಿ ಕಂಗನಾ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಸ್ಲಿಮ್​ ಆಗಿದ್ದರು. ಆ ಟ್ರಾನ್ಸ್​ಫಾರ್ಮೇಷನ್​ ನೋಡಿ ಅನೇಕರು ಮೆಚ್ಚಿಕೊಂಡಿದ್ದರು. ಈಗ ಸಿನಿಮಾಕ್ಕಾಗಿ ಅವರು ತೆಗೆದುಕೊಂಡ ಮತ್ತೊಂದು ರಿಸ್ಕ್​ನ ವಿಚಾರ ಹೊರ ಬಿದ್ದಿದೆ.

ತಲೈವಿ ಸಿನಿಮಾದಲ್ಲಿ ಇಲಾ ಇಲಾ ಹೆಸರಿನ ಹಾಂಡೊಂದು ಬರುತ್ತದೆ. ಈ ಹಾಡಿನ ಬಹುತೇಕ ಶೂಟಿಂಗ್​ ನೀರಿನಲ್ಲೇ ನಡೆದಿದೆಯಂತೆ. ಈ ಹಾಡಿಗಾಗಿ 16 ಗಂಟೆಗಳ ಕಾಲ ಕಂಗನಾ ಒದ್ದೇಯಾಗೇ ಇದ್ದರು. ಈ ವೇಳೆ ಅವರು ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದನ್ನು ಲೆಕ್ಕಿಸದೇ ಅವರು ನೀರಿನಲ್ಲಿ ಇದ್ದಿದ್ದು ಚಿತ್ರತಂಡದವರಿಗೇ ಅಚ್ಚರಿ ತಂದಿತ್ತು.

ತಲೈವಿ ಸಿನಿಮಾದ ಈ ವಿಶೇಷ ಸಾಂಗ್​​ ಶೂಟ್​ ಮಾಡೋಕೆ ಚಿತ್ರತಂಡ ಸೆಟ್​ ಸಿದ್ಧಪಡಿಸಿಕೊಂಡಿತ್ತು. ಆದರೆ, ಕಂಗನಾಗೆ ಜ್ವರ ಕಾಡಿತ್ತು. ಹೀಗಾಗಿ ಚಿತ್ರತಂಡದವರು ಸಿನಿಮಾ ಶೂಟಿಂಗ್​ ಮುಂದೂಡಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಕಂಗನಾ ಒಪ್ಪಲಿಲ್ಲ. ನೇರವಾಗಿ ಅವರು ಸೆಟ್​ಗೆ ಬಂದು 16 ಗಂಟೆ ಕಾಲ ಒದ್ದೆಯಾಗೇ ಇದ್ದರು. ಈ ವೇಳೆ ಅವರ ದೇಹದ ತಾಪಮಾನ ಕೂಡ ಹೆಚ್ಚಾಗಿತ್ತು.

ತಲೈವಿ ಸಿನಿಮಾ ಜಯಲಲಿತಾ ಅವರ ಜೀವನದ ಕಥೆಯನ್ನು ಹೇಳಲಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಸಿನಿಮಾ ಟ್ರೇಲರ್​ ಭರವಸೆ ಮೂಡಿಸಿದೆ. ಎಂ.ಜಿ.ಆರ್​. ಪಾತ್ರದಲ್ಲಿ ಅರವಿಂದ್​ ಸ್ವಾಮಿ ಹಾಗೂ ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್​ ಬಣ್ಣ ಹಚ್ಚಿದ್ದಾರೆ. ಜಯಲಲಿತಾ ಪಾತ್ರಕ್ಕಾಗಿ ಕಂಗನಾ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು ಎನ್ನುವುದು ವಿಶೇಷ.

ಇದನ್ನೂ ಓದಿ: ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us