
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಹಲವು ಕಡೆಗಳಲ್ಲಿ ಭಾರೀ ಪ್ರತಿಭಟನೆ ಮಾಡಲಾಗುತ್ತಿದೆ. ಮಂಗಳವಾರ (ಸೆಪ್ಟೆಂಬರ್ 26) ಬಂದ್ಗೆ ಕರೆ ನೀಡಲಾಗಿದೆ. ಈಗಾಗಲೇ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಇದರ ಜೊತೆಗೆ ಪ್ರದರ್ಶಕ ಸಂಘದವರು ಸಿನಿಮಾ ಪ್ರದರ್ಶನ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಬೆಂಗಳೂರು ಬಂದ್ಗೆ (Bangalore Bandh) ಬೆಂಬಲ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರದರ್ಶಕ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮಾತನಾಡಿದ್ದಾರೆ. ‘ಅಧ್ಯಕ್ಷರು ಪದಾಧಿಕಾರಿಗಳ ಜೊತೆ ಕೂತು ಚರ್ಚೆ ಮಾಡಿದ್ದೇವೆ. ನೀರಿನ ವಿಷಯ, ಭಾಷೆಯ ವಿಷಯಕ್ಕೆ ಇಡೀ ಚಿತ್ರೋದ್ಯಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ನೀರಿನ ವಿಚಾರದಲ್ಲಿ ಕರೆ ನೀಡಿದ ಬಂದ್ಗೆ ಚಿತ್ರಮಂದಿರಗಳು ಬೆಂಬಲಕ್ಕೆ ಸದಾ ಸಿದ್ಧ. ಬಂದ್ಗೆ ಚಿತ್ರೋದ್ಯಮ ಬೆಂಬಲ ನೀಡುತ್ತಿದೆ. ನಾಡಿನ ಹಿತಕ್ಕಾಗಿ ಚಿತ್ರೋದ್ಯಮ ಎಂದಿಗೂ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
‘ಕಾವೇರಿ ವಿಚಾರ ಗಂಭೀರವಾದ ವಿಚಾರ. ನಮ್ಮ ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಕಲಾವಿದರನ್ನ ಭೇಟಿ ಮಾಡಬೇಕು. ಸಮಯದ ಅಭಾವ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ನೀರಿನ ಸಮಸ್ಯೆ ಆ ಸಮಸ್ಯೆಗೆ ಸ್ಪಂದಿಸೋದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದ್ರೆ ಸಮಯವಕಾಶ ಬೇಕು. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ’ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಂದ್ಗೆ ಕಿರುತೆರೆ ಬೆಂಬಲ, ಮಂಗಳವಾರ ಚಿತ್ರೀಕರಣ ಇಲ್ಲ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಘಟನೆ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್ಗೆ ಬೆಂಬಲ ನೀಡಿದೆ. ಮಂಗಳವಾರದಂದು ಕಿರುತೆರೆಗೆ ಸಂಬಂಧಿಸಿದ ಯಾವುದೇ ಚಿತ್ರೀಕರಣ ನಡೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಗಣೇಶ್ ರಾವ್ ಕೇಸರ್ಕರ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Mon, 25 September 23