‘ಸ್ಕಂದ’ ಸಿನಿಮಾ ಮೂಲಕ ಮತ್ತೆ ತೆಲುಗಿನಲ್ಲಿ ಮಿಂಚಲು ರೆಡಿ ಆದ ಕನ್ನಡದ ಡ್ಯಾನಿ ಕುಟ್ಟಪ್ಪ
ಕನ್ನಡದ ಹಲವು ಸಿನಿಮಾಗಳಲ್ಲಿ ಡ್ಯಾನಿ ಕುಟ್ಟಪ್ಪ ನಟಿಸಿದ್ದಾರೆ. ಅವರಿಗೆ ಟಾಲಿವುಡ್ ಹೊಸದಲ್ಲ. ‘ಬಾಹುಬಲಿ’ ಮೊದಲಾದ ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ‘ಸ್ಕಂದ’ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಲು ಅವರು ರೆಡಿ ಆಗಿದ್ದಾರೆ.

ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ಸಿನಿಮಾ (Skanda Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಬೋಯಾಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ರಾಮ್ ಪೋತಿನೇನಿ ಹಾಗೂ ಶ್ರೀಲೀಲಾ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಕಲಾವಿದ ಡ್ಯಾನಿ ಕುಟ್ಟಪ್ಪ (Danny Kuttappa) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಕನ್ನಡದ ಹಲವು ಸಿನಿಮಾಗಳಲ್ಲಿ ಡ್ಯಾನಿ ಕುಟ್ಟಪ್ಪ ನಟಿಸಿದ್ದಾರೆ. ಅವರಿಗೆ ಟಾಲಿವುಡ್ ಹೊಸದಲ್ಲ. ‘ಬಾಹುಬಲಿ’ ಮೊದಲಾದ ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ‘ಸ್ಕಂದ’ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಲು ಅವರು ರೆಡಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಅದರಲ್ಲಿ ಚಿತ್ರದ ಪಾತ್ರ ಪರಿಚಯ ಇದೆ.
ಬೋಯಾಪಾಟಿ ಶ್ರೀನು ಅವರಿಗೆ ಡ್ಯಾನಿ ಕುಟ್ಟಪ್ಪ ನಟನೆ ಬಗ್ಗೆ ಸಾಕಷ್ಟು ಮೆಚ್ಚುಗೆ ಇದೆ. ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಡ್ಯಾನಿ ಬಹಳ ಉತ್ತಮವಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ’ ಎಂದು ಎಲ್ಲರ ಎದುರು ಹೊಗಳಿದರು. ಬೋಯಾಪಾಟಿ ಶ್ರೀನು ಅವರಿಗೆ ಟಾಲಿವುಡ್ನಲ್ಲಿ ಭರ್ಜರಿ ಬೇಡಿಕೆ ಇದೆ. ತೆಲುಗಿನಲ್ಲಿ ‘ಅಖಂಡ’, ‘ಲೆಜೆಂಡ್’ ಮೊದಲಾದ ಹಲವು ಯಶಸ್ವಿ ಆ್ಯಕ್ಷನ್ ಚಿತ್ರಗಳನ್ನು ಅವರು ನಿರ್ದೇಶಿಸಿ ಗಮನ ಸೆಳೆದಿದ್ದಾರೆ.
‘ಬೋಯಾಪಾಟಿ ಶ್ರೀನು ಪ್ರತಿ ಪಾತ್ರಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಪಾತ್ರವನ್ನು ಹೇಗೆ ಮಾಡಬೇಕು? ಅದನ್ನು ಯಾರು ಮಾಡಬೇಕು ಹೀಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಪಾತ್ರಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಸ್ಫೂರ್ತಿ ಬರುತ್ತದೆ’ ಎಂದಿದ್ದಾರೆ ಡ್ಯಾನಿ.
‘ಸ್ಕಂದ’ ಸಿನಿಮಾಗಾಗಿ 20 ದಿನ ಕಾಲ್ಶೀಟ್ ನೀಡಿದ್ದರು ಡ್ಯಾನಿ ಕುಟ್ಟಪ್ಪ. ರಾಮೋಜಿ ಫಿಲ್ಮ್ ಸಿಟಿ ಸೇರಿ ಅನೇಖ ಕಡೆಗಳಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಆ್ಯಕ್ಷನ್ ದೃಶ್ಯಗಳನ್ನು ಕೂಡ ಅವರು ಮಾಡಿದ್ದಾರೆ. ಅವರ ಪಾತ್ರ ಸಖತ್ ರಫ್ ಆಗಿದೆ. ಈ ಚಿತ್ರದಿಂದ ಅವರಿಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮತ್ತೊಮ್ಮೆ ಡ್ಯಾನ್ಸ್ ಫ್ಲೋರ್ಗೆ ಬೆಂಕಿ ಹಚ್ಚಿದ ಶ್ರೀಲೀಲಾ ಸ್ಕಂದ ಸಿನಿಮಾ ಹಾಡು ಬಿಡುಗಡೆ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕನ್ನಡ ಸಿನಿಮಾಗಳನ್ನು ಮಾಡಲು ಡ್ಯಾನಿ ಕುಟ್ಟಪ್ಪ ನಿರ್ಧರಿಸಿದ್ದಾರೆ. ಅವರಿಗೆ ಹೊಸಬರು, ಹಳಬರು ಸಿನಿಮಾ ಎನ್ನುವ ಭೇದಭಾವ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




