‘ಕೈದಿ 2’ ಚಿತ್ರದ ಬಗ್ಗೆ ಸಿಕ್ತು ಹೊಸ ಅಪ್​ಡೇಟ್​; ನಟ ಕಾರ್ತಿ ನೀಡಿದ್ರು ವಿಶೇಷ ಮಾಹಿತಿ

ಲೋಕೇಶ್ ಕನಗರಾಜ್ ಅವರು ‘ಕೈದಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೈದಿ ಪಾತ್ರ ಮಾಡಿದ್ದ ಕಾರ್ತಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದರು. ಈಗ ‘ಕೈದಿ 2’ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

‘ಕೈದಿ 2’ ಚಿತ್ರದ ಬಗ್ಗೆ ಸಿಕ್ತು ಹೊಸ ಅಪ್​ಡೇಟ್​; ನಟ ಕಾರ್ತಿ ನೀಡಿದ್ರು ವಿಶೇಷ ಮಾಹಿತಿ
ಕಾರ್ತಿ
TV9kannada Web Team

| Edited By: Rajesh Duggumane

Nov 22, 2022 | 8:10 AM

ತಮಿಳು ನಟ ಕಾರ್ತಿ (Karthi) ಅವರು ಬ್ಯಾಕ್ ಟು ಬ್ಯಾಕ್ ಯಶಸ್ಸು ಕಾಣುತ್ತಿದ್ದಾರೆ. 2019ರಲ್ಲಿ ತೆರೆಗೆ ಬಂದ ‘ಕೈದಿ’ ಚಿತ್ರ ಸೂಪರ್ ಹಿಟ್ ಆಯಿತು. ಒಂದು ರಾತ್ರಿಯಲ್ಲಿ ನಡೆಯುವ ಸಿನಿಮಾದ ಕಥೆಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತು. ಇತ್ತೀಚೆಗೆ ತೆರೆಗೆ ಬಂದ ಸೂಪರ್ ಹಿಟ್ ಸಿನಿಮಾ ‘ವಿಕ್ರಮ್’ (Vikram Movie)ಚಿತ್ರಕ್ಕೂ ‘ಕೈದಿ’ಗೂ ನಂಟು ಕೊಡಲಾಗಿತ್ತು. ಈಗ ‘ಕೈದಿ 2’ ಚಿತ್ರದ ಬಗ್ಗೆ ನಟ ಕಾರ್ತಿ ಮಾತನಾಡಿದ್ದಾರೆ. ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಲೋಕೇಶ್ ಕನಗರಾಜ್ ಅವರು ‘ಕೈದಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೈದಿ ಪಾತ್ರ ಮಾಡಿದ್ದ ಕಾರ್ತಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದರು. ಈಗ ‘ಕೈದಿ 2’ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ‘ವಿಕ್ರಮ್’ ಚಿತ್ರದ ಮುಂದುವರಿದ ಭಾಗ ‘ಕೈದಿ 2’ ಆಗಿರಲಿದೆಯೇ ಎಂಬ ಕುತೂಹಲವೂ ಇದೆ. ಈ ಪೈಕಿ ಕೆಲ ಪ್ರಶ್ನೆಗಳಿಗೆ ಕಾರ್ತಿ ಉತ್ತರಿಸಿದ್ದಾರೆ.

‘ಕೈದಿ ಚಿತ್ರ ಖಂಡಿತವಾಗಿಯೂ ನನ್ನ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದು. ಆರಂಭದಲ್ಲಿ ಒಂದು ಸಣ್ಣ ಚಿತ್ರ ಎಂದುಕೊಂಡಿದ್ದೆ. ಆದರೆ ಕಥೆ ಕೇಳಿದ ನಂತರ ನನಗೆ ಇದು ದೊಡ್ಡ ಆ್ಯಕ್ಷನ್ ಚಿತ್ರ ಎಂದು ತಿಳಿಯಿತು. ಡಿಲ್ಲಿ ಪಾತ್ರಕ್ಕಾಗಿ ನಾವು ಸಾಕಷ್ಟು ಸಂಶೋಧನೆ ನಡೆಸಿದ್ದೆವು. ಡಿಲ್ಲಿ ಕೈದಿ ಆಗಿದ್ದ. ಕೈದಿಗಳು ಯಾವಾಗಲೂ ಯಾರ ಜತೆಯೂ ಕಣ್ಣುಗಳನ್ನು ನೋಡಿ ಮಾತನಾಡುತ್ತಿರಲಿಲ್ಲ. ಡಿಲ್ಲಿ ಪಾತ್ರ ಕೂಡ ಅದೇ ರೀತಿ ಇತ್ತು’ ಎಂದು ಐಎಂಡಿಬಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ ಕಾರ್ತಿ.

‘ಡಿಲ್ಲಿಗೆ 10 ವರ್ಷದಿಂದ ಮೂರು ಹೊತ್ತು ಊಟಕ್ಕೆ ಕೇವಲ ಸಾಂಬಾರ ಹಾಗೂ ಅನ್ನ ಸಿಕ್ಕಿರುತ್ತದೆ. ಅವನು ಬಿರಿಯಾನಿ ಕಂಡಾಗ ಸಾಕಷ್ಟು ಖುಷಿಪಡುತ್ತಾನೆ. ಅದು ಚಿತ್ರದ ವಿಶೇಷ ದೃಶ್ಯ ಕೂಡ ಹೌದು. ಸಿನಿಮಾದ ಆ್ಯಕ್ಷನ್, ಕೊರಿಯೋಗ್ರಫಿ, ನಿರ್ದೇಶನ, ಸಂಗೀತ ಎಲ್ಲವೂ ಅದ್ಭುತವಾಗಿತ್ತು. ಸೀಕ್ವೆಲ್​​ಗೆ ಸಿದ್ಧತೆ ನಡೆದಿದೆ. ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ’ ಎಂದಿದ್ದಾರೆ ಕಾರ್ತಿ. ಆದರೆ, ‘ವಿಕ್ರಮ್ 2’ಗೂ ‘ಕೈದಿ 2’ಗೂ ಕನೆಕ್ಷನ್ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿಲ್ಲ.

ಇದನ್ನೂ ಓದಿ

‘ಕೈದಿ 2’ಗೂ ಮೊದಲು ಲೋಕೇಶ್ ಅವರು ದಳಪತಿ ವಿಜಯ್ ಜತೆ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೂ ‘ಕೈದಿ 2’ ಹಾಗೂ ‘ವಿಕ್ರಮ್ 2’ಗೂ ನಂಟು ಇರಲಿದೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada