‘ಸುದೀಪ್ ಸರ್ ಯಾಕೆ ಹೀಗೆ ಮಾಡಿದ್ರಿ?’; ಕಿಚ್ಚನಿಗೆ ಪ್ರಶ್ನೆ ಮಾಡಿದ ಅನುಪಮಾ ಗೌಡ
ಕಳೆದ ವಾರ ರೂಪೇಶ್ ರಾಜಣ್ಣ ಅವರಿಗೆ ಕಿಚ್ಚ ಸುದೀಪ್ ಅವರು ಒಂದು ಟಾಸ್ಕ್ ನೀಡಿದ್ದರು. ಟಾಸ್ಕ್ನ ಅನುಸಾರ ಪೂರ್ತಿ ಒಂದು ದಿನ ರೂಪೇಶ್ ರಾಜಣ್ಣ ಅವರು ಅಡುಗೆ ಮಾಡಬೇಕು.
‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) 9ನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಮನೆಯಲ್ಲಿ ಈಗ 11 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಬಾಕಿ ಉಳಿದಿರುವುದು ಕೆಲವೇ ವಾರಗಳು ಮಾತ್ರ. ಈ ಕಾರಣಕ್ಕೆ ಸ್ಪರ್ಧಿಗಳು ಹೆಚ್ಚು ಅಲರ್ಟ್ ಆಗಿ ಆಡುತ್ತಿದ್ದಾರೆ. ಈ ವಾರ ಎಲ್ಲಾ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ಮಧ್ಯೆ ಸುದೀಪ್ ಅವರು ಕೊಟ್ಟ ಟಾಸ್ಕ್ಗೆ ಅನುಪಮಾ ಗೌಡ (Anupama Gowda) ಬೇಸರ ಮಾಡಿಕೊಂಡಿದ್ದಾರೆ.
ಕಳೆದ ವಾರ ರೂಪೇಶ್ ರಾಜಣ್ಣ ಅವರಿಗೆ ಕಿಚ್ಚ ಸುದೀಪ್ ಅವರು ಒಂದು ಟಾಸ್ಕ್ ನೀಡಿದ್ದರು. ಟಾಸ್ಕ್ನ ಅನುಸಾರ ಪೂರ್ತಿ ಒಂದು ದಿನ ರೂಪೇಶ್ ರಾಜಣ್ಣ ಅವರು ಅಡುಗೆ ಮಾಡಬೇಕು. ಅಡುಗೆ ಮಾಡುವ ವೇಳೆ ಅವರು ಯಾರನ್ನೂ ಕೇಳುವಂತಿಲ್ಲ. ಹಾಗೆ ಕೇಳಿದರೆ ಕೊಟ್ಟ ವಸ್ತುಗಳನ್ನು ಬಿಗ್ ಬಾಸ್ ಮರಳಿ ಪಡೆಯುತ್ತಾರೆ.
ಮುಂಜಾನೆ ಎದ್ದ ಕೂಡಲೇ ರೂಪೇಶ್ ರಾಜಣ್ಣ ಅವರು ಟೀ ಮಾಡಿದ್ದಾರೆ. ಅವರು ನೀರಿಗೆ ಸಕ್ಕರೆ ಹಾಕುವ ಪರಿ ನೋಡಿ ಮನೆ ಮಂದಿ ಕಂಗಾಲಾಗಿದ್ದಾರೆ. ಇನ್ನು, ರೂಪೇಶ್ ರಾಜಣ್ಣ ಅವರು ಚಪಾತಿ ಮಾಡುವುದನ್ನು ನೋಡಿಯೂ ಕೆಲವರು ಕಂಗಾಲಾಗಿದ್ದಾರೆ. ಅನುಪಮಾ ಗೌಡ ಅವರಂತೂ ಶಾಕ್ ಆಗಿದ್ದಾರೆ. ಸರಿಯಾಗಿ ಊಟ ಸಿಗುವುದಿಲ್ಲ ಎಂದು ಅವರು ಭಾವಿಸಿದ್ದರು.
ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿಗೆ ಹೊಸ ಬಿರುದು ಕೊಟ್ಟ ಕಿಚ್ಚ ಸುದೀಪ್; ಮನೆಯವರಿಗೆ ನಗುವೋ ನಗು
‘ಕಿಚ್ಚ ಸುದೀಪ್ ಸರ್ ನೀವು ಯಾಕೆ ಈ ರೀತಿ ಮಾಡಿದ್ರಿ? ನೋಡಿ ನಾವಿಲ್ಲಿ ಒದ್ದಾಡುತ್ತಿದ್ದೇವೆ’ ಎಂದು ಅನುಪಮಾ ಗೌಡ ಹೇಳಿದ್ದಾರೆ. ಅನುಪಮಾ ಮಾತನ್ನು ಕೇಳಿ ಕೆಲವರು ನಕ್ಕಿದ್ದಾರೆ. ಅಡುಗೆ ಬರದೆ ಇದ್ದರೂ ರೂಪೇಶ್ ರಾಜಣ್ಣ ಉತ್ತಮವಾಗಿ ಅಡುಗೆ ಮಾಡಿದರು ಎಂಬ ಅಭಿಪ್ರಾಯ ದೊಡ್ಮನೆಯವರಿಂದ ಬಂದಿದೆ. ಈ ಮೊದಲು ಬಿಗ್ ಬಾಸ್ ಒಟಿಟಿಯಲ್ಲಿ ಇದೇ ರೀತಿಯ ಟಾಸ್ಕ್ ಇತ್ತು. ವೀಕ್ಷಕರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ಅಡುಗೆ ಮಾಡಬೇಕಿತ್ತು. ಈ ವೇಳೆ ಅನೇಕ ಸ್ಪರ್ಧಿಗಳು ಅಡುಗೆ ಮಾಡಲು ಒದ್ದಾಟ ನಡೆಸಿದ್ದರು.