
ಕೀರ್ತಿ ಸುರೇಶ್, ದಕ್ಷಿಣದ ಜನಪ್ರಿಯ ಮತ್ತು ಬೇಡಿಕೆಯ ನಟಿ. ನಟನೆ, ಸೌಂದರ್ಯ, ನೃತ್ಯ ಎಲ್ಲವೂ ಕೆಲವೇ ಪರಿಪೂರ್ಣ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್. ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಸಹ ಪಡೆದಿರುವ ಕೀರ್ತಿ ಸುರೇಶ್, ತಮಿಳು, ಮಲಯಾಳಂ, ತೆಲುಗು, ಹಿಂದಿ ಭಾಷೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕಳೆದ 13 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೀರ್ತಿ ಸುರೇಶ್, ಹಲವಾರು ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ತಮ್ಮ ಯಾವ ಸಿನಿಮಾ ಸಹ ನೋಡದ ನಟಿಯೊಬ್ಬರಿಗೆ ತಮ್ಮ ಎರಡು ಸಿನಿಮಾಗಳನ್ನಷ್ಟೆ ನೋಡುವಂತೆ ಕೀರ್ತಿ ಸುರೇಶ್ ಸಲಹೆ ನೀಡಿದ್ದಾರೆ.
ಕೀರ್ತಿ ಸುರೇಶ್ ಪ್ರಸ್ತುತ ‘ಅಕ್ಕ’ ಹೆಸರಿನ ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟಿ ರಾಧಿಕಾ ಆಪ್ಟೆ ಜೊತೆಗೆ ನಟನೆ ಮಾಡಿದ್ದಾರೆ. ಆ ವೆಬ್ ಸರಣಿಯ ಪ್ರಚಾರಕ್ಕಾಗಿ ಇತ್ತೀಚೆಗೆ ರಾಧಿಕಾ ಆಪ್ಟೆ ಮತ್ತು ಕೀರ್ತಿ ಸುರೇಶ್ ಜಂಟಿಯಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕೀರ್ತಿ ಸುರೇಶ್ ಅವರು ರಾಧಿಕಾ ಆಪ್ಟೆ ನಟಿಸಿದ ಸಿನಿಮಾಗಳಲ್ಲಿ ತಮಗಿಷ್ಟವಾದ ಸಿನಿಮಾಗಳನ್ನು ಹೆಸರಿಸಿ, ‘ಅಂದಾಧುನ್’, ‘ಕಬಾಲಿ’, ‘ಸೇಕ್ರೆಡ್ ಗೇಮ್ಸ್’, ‘ಬದ್ಲಾಪುರ್’ ಇನ್ನೂ ಕೆಲವು ಸಿನಿಮಾಗಳನ್ನು ಹೆಸರಿಸಿದರು. ಆದರೆ ರಾಧಿಕಾ ಆಪ್ಟೆ ತಾವು ಕೀರ್ತಿ ನಟನೆಯ ಯಾವ ಸಿನಿಮಾ ಅನ್ನೂ ಸಹ ನೋಡಿಲ್ಲ ಎಂದರು.
ಆಗ ಕೀರ್ತಿ ಸುರೇಶ್, ನಿಮಗೆ ಸಾಕಷ್ಟು ಸಮಯ ಇದೆ, ನೀವು ಲಂಡನ್ಗೆ ಹೋದ ಮೇಲೆ ನೀವು ಆರಾಮವಾಗಿ ನೋಡಿ’ ಎಂದರು. ‘ನಿಮ್ಮ ನಟನೆಯ ಯಾವ ಸಿನಿಮಾ ನೋಡಲಿ’ ಎಂದು ರಾಧಿಕಾ ಕೇಳಿದ್ದಕ್ಕೆ, ‘ನನ್ನ ಎರಡು ಸಿನಿಮಾಗಳನ್ನು ನೋಡಿ ನೀವು ಸಾಕು. ಮೊದಲನೇಯದ್ದು, ‘ಮಹಾನಟಿ’ ಕೆಲ ವರ್ಷಗಳ ಹಿಂದೆ ಅದು ಬಿಡುಗಡೆ ಆಗಿತ್ತು. ಇನ್ನೊಂದು ಇತ್ತೀಚೆಗಷ್ಟೆ ರಿಲೀಸ್ ಆಗಿರು ‘ಡೋರ್ತಿ’ ಈ ಎರಡೂ ಸಿನಿಮಾ ನೋಡಿ. ವಿಶೇಷವಾಗಿ ‘ಡೋರ್ತಿ’ ಸಿನಿಮಾ ನಿಮಗೆ ಬಹಳ ಇಷ್ಟವಾಗುತ್ತದೆ ಸಮಯ ಮಾಡಿಕೊಂಡು ನೋಡಿ’ ಎಂದರು. ಅದಕ್ಕೆ ರಾಧಿಕಾ ಆ ಎರಡೂ ಸಿನಿಮಾಗಳ ಹೆಸರನ್ನು ಮೆಸೇಜ್ ಮಾಡಿಬಿಡಿ ನಾನು ಮರೆತುಬಿಡುತ್ತೇನೆ. ಆದರೆ ಖಂಡಿತ ನೋಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕೀರ್ತಿ ಸುರೇಶ್ ಹೊಸ ಸಿನಿಮಾ ವಿರುದ್ಧ ಅಸಮಾಧಾನ ಏಕೆ?
ಅಂದಹಾಗೆ ‘ಮಹಾನಟಿ’ ಸಿನಿಮಾಕ್ಕೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಆ ಸಿನಿಮಾನಲ್ಲಿ ಅವರು ಖ್ಯಾತ ನಟಿ ಸಾವಿತ್ರಿ ಅವರ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಅವರದ್ದು ಅದ್ಭುತವಾದ ಅಭಿನಯ. ಇನ್ನು ಇತ್ತೀಚೆಗೆ ರಿಲೀಸ್ ಆದ ‘ಡೋರ್ತಿ’ ಸಿನಿಮಾ ಬಹಳ ಭಿನ್ನವಾದ ಕತೆ ಹೊಂದಿದೆ. ಸಿನಿಮಾನಲ್ಲಿ ಎಲ್ಜಿಬಿಟಿಕ್ಯು ವಿಷಯದ ಕುರಿತಾಗಿ ಚರ್ಚೆ ಮಾಡಲಾಗಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಕೆಲವೆಡೆ ವಿರೋಧವೂ ಸಹ ವ್ಯಕ್ತವಾಗಿದೆ. ಜೊತೆಗೆ ರಜನೀಕಾಂತ್, ಕನ್ನಡದ ಉಪೇಂದ್ರ, ತಮಿಳು ನಟ ಸೂರ್ಯ, ತೆಲುಗಿನ ರಾಣಾ ದಗ್ಗುಬಾಟಿ ಇನ್ನೂ ಹಲವಾರು ಮಂದಿ ಸಿನಿಮಾ ವೀಕ್ಷಿಸಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ