AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬಂತು ವಿವಾದಕ್ಕೆ ಎಬ್ಬಿಸಿದ್ದ ಕೀರ್ತಿ ಸುರೇಶ್ ಸಿನಿಮಾ

ಕೀರ್ತಿ ಸುರೇಶ್, ರಿಷಿಕಾಂತ್ ಮತ್ತು ಸನಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿರುವ ತಮಿಳಿನ ‘ಡೊರೊತಿ’ ಕೆಲ ವಾರಗಳ ಹಿಂದ ಸೆಪ್ಟೆಂಬರ್ 25ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು. ಸಿನಿಮಾ ಸಾಕಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಿದ್ದು, ಸಿನಿಮಾನಲ್ಲಿ ಎಲ್​​ಜಿಬಿಟಿಕ್ಯು ಹಕ್ಕುಗಳ ಕುರಿತಾದ ಕತೆಯಿತ್ತು. ಇದೇ ಕಾರಣಕ್ಕೆ ಈ ಸಿನಿಮಾ ಮೆಚ್ಚುಗೆ ಗಳಿಸುವ ಜೊತೆಗೆ ಸಾಕಷ್ಟು ಟೀಕೆ, ಪ್ರತಿಭಟನೆಯನ್ನೂ ಎದುರಿಸಬೇಕಾಯ್ತು. ಈ ಸಿನಿಮಾ ಈಗ ಒಟಿಟಿಗೆ ಬಂದಿದೆ.

ಒಟಿಟಿಗೆ ಬಂತು ವಿವಾದಕ್ಕೆ ಎಬ್ಬಿಸಿದ್ದ ಕೀರ್ತಿ ಸುರೇಶ್ ಸಿನಿಮಾ
Doroty Movie
ಮಂಜುನಾಥ ಸಿ.
|

Updated on: Oct 18, 2026 | 8:42 PM

Share

ಮುಖ್ಯಾಂಶಗಳು

  • ನಟಿ ಕೀರ್ತಿ ಸುರೇಶ್ ಹೊಸ ತಮಿಳು ಸಿನಿಮಾ
  • ವಿವಾದಕ್ಕೆ ಕಾರಣವಾಗಿದ್ದ ಸಿನಿಮಾ ‘ಡೋರತಿ’
  • ‘ಡೋರತಿ’ ಸಿನಿಮಾ ಈಗ ಒಟಿಟಿಗೆ ಬಿಡುಗಡೆ ಆಗುತ್ತಿದೆ

ದಕ್ಷಿಣ ಭಾರತದ ಸಿನಿಮಾಗಳು ವಿವಾದಗಳಿಗೆ ಈಡಾಗುವುದು ಬಹಳ ಅಪರೂಪ. ದಕ್ಷಿಣದಲ್ಲಿ ಸಾಮಾನ್ಯವಾಗಿ ಕಮರ್ಶಿಯಲ್ ಮಾಸ್ ಎಂಟರ್ಟೈನರ್ ಅಥವಾ ಕುಟುಂಬವೆಲ್ಲ ಕೂತು ನೋಡುವ ಸಿನಿಮಾಗಳನ್ನೇ ನಿರ್ಮಿಸುವುದು ಹೆಚ್ಚು. ಆದರೆ ಇತ್ತೀಚೆಗಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ಒಂದು ಸಿನಿಮಾದ ವಿಷಯದ ಕಾರಣಕ್ಕೆ ಸುದ್ದಿಯಾಗಿತ್ತು. ಕೆಲವರು ಸಿನಿಮಾದ ವಿರುದ್ಧ ಪ್ರತಿಭಟನೆಯನ್ನೂ ಮಾಡಿದರು.ಕೆಲರು ಹೇಳಿಕೆ ನೀಡಿ, ಸಿನಿಮಾ ಅನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. ಆ ಸಿನಿಮಾ ‘ಡೊರತಿ’. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.

ಕೀರ್ತಿ ಸುರೇಶ್, ರಿಷಿಕಾಂತ್ ಮತ್ತು ಸನಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿರುವ ತಮಿಳಿನ ‘ಡೊರೊತಿ’ ಕೆಲ ವಾರಗಳ ಹಿಂದ ಸೆಪ್ಟೆಂಬರ್ 25ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು. ಸಿನಿಮಾ ಸಾಕಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಿದ್ದು, ಸಿನಿಮಾನಲ್ಲಿ ಎಲ್​​ಜಿಬಿಟಿಕ್ಯು ಹಕ್ಕುಗಳ ಕುರಿತಾದ ಕತೆಯಿತ್ತು. ಇದೇ ಕಾರಣಕ್ಕೆ ಈ ಸಿನಿಮಾ ಮೆಚ್ಚುಗೆ ಗಳಿಸುವ ಜೊತೆಗೆ ಸಾಕಷ್ಟು ಟೀಕೆ, ಪ್ರತಿಭಟನೆಯನ್ನೂ ಎದುರಿಸಬೇಕಾಯ್ತು. ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸು ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾಗಲು ದಿನಾಂಕ ಕೂಡಿಬಂದಿದೆ. ಈ ಚಿತ್ರವು ಶೀಘ್ರದಲ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

ನೆಟ್‌ಫ್ಲಿಕ್ಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ‘ಡೊರೊತಿ’ ಸಿನಿಮಾವು 2026ರ ಅಕ್ಟೋಬರ್ 23 ರಂದು ಡಿಜಿಟಲ್ ಲೋಕಕ್ಕೆ ಕಾಲಿಡಲಿದೆ. ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಷೆಗಳಲ್ಲಿ ಸ್ಟ್ರೀಮಿಂಗ್ ಲಭ್ಯವಾಗಲಿದ್ದು, ಪ್ರೇಕ್ಷಕರು ಬಹುಭಾಷೆಗಳಲ್ಲಿ ಈ ಕಥೆಯನ್ನು ವೀಕ್ಷಿಸಬಹುದಾಗಿದೆ. ಚಿತ್ರವು ‘ಎ’ (A) ಪ್ರಮಾಣಪತ್ರವನ್ನು ಪಡೆದುಕೊಂಡಿದೆ, ಆದ್ದರಿಂದ ವೀಕ್ಷಕರು ಇದನ್ನು ವೀಕ್ಷಿಸುವ ಮೊದಲು ವಯಸ್ಕರ ಪ್ರಮಾಣಪತ್ರದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ:‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದ ಈ ಸಿನಿಮಾ ಬೋಲ್ಡ್ ಆದ ಕತೆಯನ್ನು ಒಳಗೊಂಡಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಚೆನ್ನೈನಲ್ಲಿ ಕೆಲವರು ಸಿನಿಮಾದ ವಿರುದ್ಧ ಪ್ರತಿಭಟನೆಯನ್ನು ಸಹ ನಡೆಸಿದರು. ಅಂತೆಯೇ ಕೆಲವರು ಸಿನಿಮಾ ಅನ್ನು ಕೊಂಡಾಡಿದ್ದೂ ಸಹ ಇದೆ. ಕನ್ನಡದ ಸ್ಟಾರ್ ನಟ ಉಪೇಂದ್ರ ಅವರು ‘ಡೋರತಿ’ ಸಿನಿಮಾ ವೀಕ್ಷಿಸಿ, ಸಿನಿಮಾದ ಕತೆಯನ್ನು ಮತ್ತು ಕಾರ್ತಿಕ್ ಸುಬ್ಬರಾಜು ಅವರನ್ನು ಹೊಗಳಿದರು. ಇನನೂ ಕೆಲವರು ಸ್ಟಾರ್ ನಟ ಮತ್ತು ನಟಿಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ