‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ (KGF Chapter 2 Box Office Collection) ಕಮಾಲ್ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಜನರು ಸಖತ್ ಇಷ್ಟಪಟ್ಟಿದ್ದಾರೆ. ಈ ಸಿನಿಮಾ ವಿಶ್ವಮಟ್ಟದಲ್ಲಿ ಸುಮಾರು 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಪೈಕಿ ಬಾಲಿವುಡ್ನಿಂದಲೇ 420 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಅನ್ನೋದು ವಿಶೇಷ. ಯಶ್ (Yash) ಚಿತ್ರವನ್ನು ತಮಿಳು ಮಂದಿ ಕೂಡ ಸ್ವೀಕರಿಸಿದ್ದಾರೆ. ಹಾಗಾದರೆ, ಈ ಸಿನಿಮಾ ತಮಿಳುನಾಡಿನಿಂದ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ತಮಿಳು ಮಂದಿ ಅಷ್ಟು ಸುಲಭದಲ್ಲಿ ಪರಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ತಮಿಳಿನ ದೊಡ್ಡ ಬಜೆಟ್ ಚಿತ್ರ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ಉಳಿದ ಭಾಷೆಯ ಸಿನಿಮಾ ರಿಲೀಸ್ ಆಗಿ ಅವರದ್ದೇ ನಾಡಲ್ಲಿ ಗೆಲ್ಲೋದು ಸುಲಭದ ಮಾತಲ್ಲ. ಹಾಗಿದ್ದರೂ, ‘ಕೆಜಿಎಫ್ 2’ ಸಿನಿಮಾ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಎದುರು ಗೆದ್ದು ಬೀಗಿದೆ. ‘ಕೆಜಿಎಫ್ 2’ ಚಿತ್ರಕ್ಕೆ ತಮಿಳು ಮಂದಿ ಫುಲ್ ಮಾರ್ಕ್ಸ್ ನೀಡಿದರು. ಹೀಗಾಗಿ, ತಮಿಳುನಾಡಿನಿಂದ ಈ ಸಿನಿಮಾ 100+ ಪ್ಲಸ್ ಕಲೆಕ್ಷನ್ ಮಾಡಿದೆ.
ಕೆಜಿಎಫ್ 2’ ತೆರೆಗೆ ಬಂದು ಒಂದು ತಿಂಗಳ ಮೇಲಾಗಿದೆ. ಈ ಸಿನಿಮಾ ಮೊದಲ ವಾರಾಂತ್ಯದಲ್ಲಿ ತಮಿಳುನಾಡು ಭಾಗದಲ್ಲಿ 59.84 ಕೋಟಿ ಕಲೆಕ್ಷನ್ ಮಾಡಿತು. ಎರಡನೇ ವಾರ 32.65 ಕೋಟಿ ರೂಪಾಯಿ, ಮೂರನೇ ವಾರ 21.30 ಕೋಟಿ ರೂಪಾಯಿ ಹಾಗೂ ನಾಲ್ಕನೇ ವಾರ 13.83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಐದನೇ ವಾರದ ಮೊದಲ ದಿನ 47 ಲಕ್ಷ ರೂಪಾಯಿ, ಎರಡನೇ ದಿನ 33 ಲಕ್ಷ ರೂಪಾಯಿ ಹಾಗೂ ಮೂರನೇ ದಿನ 91 ಲಕ್ಷ ರೂಪಾಯಿ ಚಿತ್ರಕ್ಕೆ ಹರಿದು ಬಂದಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 129.33 ಕೋಟಿ ರೂಪಾಯಿ ಆಗಿದೆ.
#KGFChapter2 TN Box Office
Week 1 – ₹ 59.84 cr
Week 2 – ₹ 32.65 cr
Week 3 – ₹ 21.30 cr
Week 4 – ₹ 13.83 cr
Week 5
Day 1 – ₹ 0.47 cr
Day 2 – ₹ 0.33 cr
Day 3 – ₹ 0.91 cr
Total – ₹ 129.33 crUNSTOPPABLE
— Manobala Vijayabalan (@ManobalaV) May 15, 2022
ತಮಿಳುನಾಡು ಒಂದರಲ್ಲಿ ‘ಬೀಸ್ಟ್’ ಸಿನಿಮಾ 120 ಕೋಟಿ ರೂಪಾಯಿ ಗಳಿಸಿದೆ. ‘ಕೆಜಿಎಫ್ 2’ ಸಿನಿಮಾ 129 ಕೋಟಿ ರೂ. ಗಳಿಸುವ ಮೂಲಕ ಈ ಕಲೆಕ್ಷನ್ಅನ್ನು ಹಿಂದಿಕ್ಕಿದಂತೆ ಆಗಿದೆ.
‘ಕೆಜಿಎಫ್ 2’ ಸಿನಿಮಾ ಒಟಿಟಿಗೆ ಕಾಲಿಡುವುದಕ್ಕೂ ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ಹೀಗಾಗಿ, ಇನ್ನೂ ಒಂದಷ್ಟು ದಿನಗಳ ಕಾಲ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಆ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಹೆಮ್ಮೆಯೇ ಸರಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.