ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Mar 11, 2022 | 4:52 PM

ಖುಷ್ಬೂ ಅವರು ಇತ್ತೀಚೆಗೆ ಫಿಟ್​ನೆಸ್​ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಲವು ತಿಂಗಳ ಕಾಲ ಜಿಮ್​ನಲ್ಲಿ ಶ್ರಮ ಹಾಕಿ ತೆಳ್ಳಗೆ ಆಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ
ಕುಟುಂಬದ ಜತೆ ಖುಷ್ಬೂ
Follow us on

ನಟಿ ಖುಷ್ಬೂ ಸುಂದರ್ (Khushbu Sundar)​ ಸದ್ಯ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಆದರೆ, ರಾಜಕೀಯದಲ್ಲಿ ಸಖತ್ ಆ್ಯಕ್ಟೀವ್​ ಆಗಿದ್ದಾರೆ. ಇದರ ಜತೆಗೆ ಸೋಶಿಯಲ್​ ಮೀಡಿಯಾದಲ್ಲೂ (Social Media) ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರೋಕೆ ಖುಷ್ಬೂ ಪ್ರಯತ್ನಪಡುತ್ತಾರೆ. ಈಗ ಅವರ ದಾಂಪತ್ಯ ಜೀವನ ಹೊಸ ಮೈಲಿಗಲ್ಲನ್ನು ದಾಟಿ ಮುಂದೆ ಸಾಗುತ್ತಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಖುಷ್ಬೂ ಅವರ ದಾಂಪತ್ಯ ಜೀವನಕ್ಕೆ 22 ವರ್ಷ ತುಂಬಿದೆ. ಸುಂದರ್ ವೃತ್ತಿಯಲ್ಲಿ ನಿರ್ಮಾಪಕ. ಖುಷ್ಬೂ ಹಾಗೂ ಸುಂದರ್ ಒಟ್ಟಾಗಿ ‘ಅವ್ನಿ ಸಿನಿಮ್ಯಾಕ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗ ಸುಂದರ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ದಂಪತಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಜೀವಾ, ಜೈ, ಶ್ರೀಕಾಂತ್​, ಐಶ್ವರ್ಯಾ ದತ್ತ, ಅಮೃತಾ ಅಯ್ಯರ್, ಸಂಯುಕ್ತ ಕಾರ್ತಿಕ್​ ಹಾಗೂ ದಿವ್ಯ ದರ್ಶಿನಿ ನಟಿಸುತ್ತಿದ್ದಾರೆ. ಈ ಮಧ್ಯೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಖುಷ್ಬೂ ಅವರು ಸೋಶಿಯಲ್​ ಮೀಡಿಯಾದಲ್ಲಿ ಸುಂದರ್ ಜತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ’22 ವರ್ಷ ತುಂಬಿದೆ ಮತ್ತು ಮುಂದೆ ಸಾಗುತ್ತಿದ್ದೇವೆ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಖುಷ್ಬೂಗೆ ಶುಭಕೋರಿದ್ದಾರೆ.


ಖುಷ್ಬೂ ಅವರು ಇತ್ತೀಚೆಗೆ ಫಿಟ್​ನೆಸ್​ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಲವು ತಿಂಗಳ ಕಾಲ ಜಿಮ್​ನಲ್ಲಿ ಶ್ರಮ ಹಾಕಿ ತೆಳ್ಳಗೆ ಆಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರಹಾಕುತ್ತಿದ್ದಾರೆ. ಮತ್ತೆ ಚಿತ್ರರಂಗಕ್ಕೆ ಬರುವಂತೆ ಅವರಿಗೆ ಅನೇಕರು ಬೇಡಿಕೆ ಕೂಡ ಇಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರು ಆ ಬಗ್ಗೆ ಆಲೋಚನೆ ಮಾಡಿದಂತಿಲ್ಲ.

ಖುಷ್ಬೂ ಅವರು ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ಇಲ್ಲಿಯ ನಟ-ನಟಿಯರ ಜತೆ ಅವರಿಗೆ ಒಳ್ಳೆಯ ಒಡನಾಟವಿದೆ. ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ ನಂತರ ಅವರು ಬೆಂಗಳೂರಿಗೆ ಆಗಮಿಸಿ ಶಿವರಾಜ್​ಕುಮಾರ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಇದನ್ನೂ ಓದಿ: ಲಂಡನ್​​​ನಲ್ಲಿ ಖುಷ್ಬೂ; ಅವರ ಸ್ಲಿಮ್​ ಬಾಡಿ ನೋಡಿ ಅಚ್ಚರಿ ಹೊರ ಹಾಕಿದ ಫ್ಯಾನ್ಸ್​

ಪದೇಪದೇ ಕರೆ ಮಾಡಿ ಪತಿ ಸುಂದರ್​ಗೆ ತೊಂದರೆ ಕೊಡಬೇಡಿ; ಖುಷ್ಬೂಗೆ ಯುವನಟಿಯ ಎಚ್ಚರಿಕೆ