ಚೆನ್ನೈನಲ್ಲಿ CSK Vs RR ಮ್ಯಾಚ್ ವೇಳೆ ‘ಸವಿ ಸವಿ ನೆನಪು..’ ಸಾಂಗ್? ಇಲ್ಲಿದೆ ಅಸಲಿಯತ್ತು
‘ಮೈ ಆಟೋಗ್ರಾಫ್’ ಸಿನಿಮಾ ಸಖತ್ ಭಾವನಾತ್ಮಕವಾಗಿ ಈ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರಕ್ಕೆ ಭಾರದ್ವಾಜ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಸವಿ ಸವಿ ನೆನಪು..’ ಹಾಡು ಗಮನ ಸೆಳೆದಿದೆ. ಈಗಲೂ ಕೇಳುಗರ ಫೇವರಿಟ್ ಎನಿಸಿಕೊಂಡಿದೆ. ಇದನ್ನು ಚೆನ್ನೈ ಸ್ಟೇಡಿಯಂನಲ್ಲಿ ಪ್ಲೇ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಆರ್ (RR Movie) ನಡುವಿನ ಪಂದ್ಯ ಚೆನ್ನೈನಲ್ಲಿ ನಡೆದಿದೆ. ಭಾನುವಾರ (ಮೇ 12) ಈ ಮ್ಯಾಚ್ ನಡೆದಿದ್ದು, ಚೆನ್ನೈ ಗೆದ್ದು ಬೀಗಿದೆ. ಆರ್ಆರ್ ನೀಡಿದ 141 ರನ್ಗಳ ಸ್ಕೋರ್ನ ಕೇವಲ ಐದು ವಿಕೆಟ್ ನಷ್ಟಕ್ಕೆ ಹೊಡೆದು ಮುಗಿಸಿದೆ ಸಿಎಸ್ಕೆ. ಓವರ್ಗಳ ಮಧ್ಯೆ ಸಾಂಗ್ ಹಾಕಲಾಗುತ್ತದೆ. ‘ಮೈ ಆಟೋಗ್ರಾಫ್’ ಸಿನಿಮಾದ ‘ಸವಿ ಸವಿ ನೆನಪು’ ಹಾಡನ್ನು ಹಾಕಲಾಗಿದೆ ಎಂದು ಕೆಲವು ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಅಸಲಿಯತ್ತು ಬೇರೆಯೇ ಇದೆ.
2006ರಲ್ಲಿ ‘ಮೈ ಆಟೋಗ್ರಾಫ್’ ಸಿನಿಮಾ ರಿಲೀಸ್ ಆಯಿತು. ಸುದೀಪ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಹಲವು ಬ್ರೇಕಪ್ಗಳನ್ನು ಕಂಡಿರೋ ಕಥಾ ನಾಯಕ ನಂತರ ಮದುವೆ ಸಂದರ್ಭದಲ್ಲಿ ಮಾಜಿ ಗೆಳೆತಿಯರಿಗೆ ವಿವಾಹ ಆಮಂತ್ರಣಪತ್ರ ನೀಡಲು ತೆರಳುತ್ತಾರೆ. ಈ ರೀತಿಯಲ್ಲಿ ಸಿನಿಮಾ ಸಾಗುತ್ತದೆ. ಸಖತ್ ಭಾವನಾತ್ಮಕವಾಗಿ ಈ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರಕ್ಕೆ ಭಾರದ್ವಾಜ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಸವಿ ಸವಿ ನೆನಪು..’ ಹಾಡು ಗಮನ ಸೆಳೆದಿದೆ. ಈಗಲೂ ಕೇಳುಗರ ಫೇವರಿಟ್ ಎನಿಸಿಕೊಂಡಿದೆ. ಇದನ್ನು ಚೆನ್ನೈ ಸ್ಟೇಡಿಯಂನಲ್ಲಿ ಪ್ಲೇ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಆರ್ಸಿಬಿ ಹೋಂ ಗ್ರೌಂಡ್ನಲ್ಲಿ ಮ್ಯಾಚ್ ನಡೆಯುವಾಗ ಕನ್ನಡದ ಸಾಂಗ್ಗಳನ್ನು ಪ್ಲೇ ಮಾಡಲಾಗುತ್ತದೆ. ಚೆನ್ನೈ ಗ್ರೌಂಡ್ನಲ್ಲಿ ತಮಿಳು ಸಾಂಗ್ ಬದಲು ಕನ್ನಡದ ಹಾಡು ಹಾಕಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಅಸಲಿಗೆ ಅಲ್ಲಿ ಪ್ಲೇ ಆಗಿದ್ದು ‘ಸವಿ ಸವಿ ನೆನಪು’ ಹಾಡು ಅಲ್ಲವೇ ಅಲ್ಲ.
View this post on Instagram
‘ಮೈ ಆಟೋಗ್ರಾಫ್’ ಸಿನಿಮಾ ತಮಿಳಿನ ‘ಆಟೋಗ್ರಾಫ್’ ಚಿತ್ರದ ರಿಮೇಕ್. ಚೇರನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದರು, ಜೊತೆಗೆ ನಿರ್ದೇಶಿಸಿದ್ದರು. ಈ ಚಿತ್ರದ ‘ಜ್ಞಾಬಗಂ ವರುದೆ..’ ಹಾಡು. ಇದನ್ನು ಚೆನ್ನೈ ಸ್ಟೇಡಿಯಂನಲ್ಲಿ ಪ್ಲೇ ಮಾಡಲಾಗಿತ್ತು. ಇದನ್ನು ಕೆಲವರು ತಪ್ಪಾಗಿ ಕೇಳಿಸಿಕೊಂಡು ‘ಚೆನ್ನೈನಲ್ಲಿ ಕನ್ನಡ ಸಾಂಗ್’ ಎಂದು ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ವೋಟ್ ಮಾಡದೆ ಮನೆಯಲ್ಲಿ ಕುಳಿತವರ ಬಗ್ಗೆ ಕಿಚ್ಚ ಸುದೀಪ್ ಅಸಮಾಧಾನ
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:52 am, Mon, 13 May 24