ಲಿಯಾಂಡರ್​ ಪೇಸ್​-ಕಿಮ್​ ಶರ್ಮಾ ಪ್ರೀತಿಗೆ ಸಿಕ್ತು ಫೋಟೋ ಸಾಕ್ಷಿ; ಮೌನವಾಗಿ ಎಲ್ಲವನ್ನೂ ಒಪ್ಪಿಕೊಂಡ ಜೋಡಿ

| Updated By: ಮದನ್​ ಕುಮಾರ್​

Updated on: Sep 06, 2021 | 3:04 PM

ಲಿಯಾಂಡರ್​ ಪೇಸ್​ ಅವರನ್ನು ತಬ್ಬಿಕೊಂಡಿರುವ ಕಿಮ್​ ಶರ್ಮಾ ಅವರು ಕ್ಯಾಮರಾ ಕಡೆಗೆ ತಿರುಗಿ ಪೋಸ್​ ನೀಡಿದ್ದಾರೆ. ಪ್ರೇಯಸಿಯನ್ನು ಕಣ್ತುಂಬಿಕೊಳ್ಳುತ್ತಿರುವ ಲಿಯಾಂಡರ್​ ಪೇಸ್​ ಅವರು ಮನಸಾರೆ ನಗು ಚೆಲ್ಲಿದ್ದಾರೆ.

ಲಿಯಾಂಡರ್​ ಪೇಸ್​-ಕಿಮ್​ ಶರ್ಮಾ ಪ್ರೀತಿಗೆ ಸಿಕ್ತು ಫೋಟೋ ಸಾಕ್ಷಿ; ಮೌನವಾಗಿ ಎಲ್ಲವನ್ನೂ ಒಪ್ಪಿಕೊಂಡ ಜೋಡಿ
ಕಿಮ್​ ಶರ್ಮಾ - ಲಿಯಾಂಡರ್​ ಪೇಸ್​
Follow us on

ಮಾಜಿ ಟಿನಿಸ್​ ಆಟಗಾರ ಲಿಯಾಂಡರ್​ ಪೇಸ್​ ಮತ್ತು ನಟಿ ಕಿಮ್​ ಶರ್ಮಾ ನಡುವಿನ ಸಂಬಂಧ ಈಗ ಗುಟ್ಟಾಗಿ ಉಳಿದಿಲ್ಲ. ಅವರಿಬ್ಬರು ತುಂಬ ಆಪ್ತವಾಗಿ ಕಾಣಿಸಿಕೊಂಡ ಫೋಟೋಗಳು ಈ ಹಿಂದೆಯೇ ವೈರಲ್ ಆಗಿದ್ದವು. ಆದರೂ ಕೂಡ ಈ ಜೋಡಿ ತಮ್ಮ ರಿಲೇಷನ್​ಶಿಪ್​ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಈಗ ಅವರಿಬ್ಬರ ಪ್ರೇಮ್​ ಕಹಾನಿಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಘಟನೆ ನಡೆದಿದೆ. ಆ ಮೂಲಕ ಕಿಮ್​ ಶರ್ಮಾ ಮತ್ತು ಲಿಯಾಂಡರ್​ ಪೇಸ್​ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಈ ಪ್ರಯಣಪಕ್ಷಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಒಂದೇ ರೀತಿಯ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸಿವೆ.

ಈ ಫೋಟೋದಲ್ಲಿ ಲಿಯಾಂಡರ್​ ಪೇಸ್​ ಅವರನ್ನು ತಬ್ಬಿಕೊಂಡಿರುವ ಕಿಮ್​ ಶರ್ಮಾ ಅವರು ಕ್ಯಾಮರಾ ಕಡೆಗೆ ತಿರುಗಿ ಪೋಸ್​ ನೀಡಿದ್ದಾರೆ. ಪ್ರೇಯಸಿಯನ್ನು ಕಣ್ತುಂಬಿಕೊಳ್ಳುತ್ತಿರುವ ಲಿಯಾಂಡರ್​ ಪೇಸ್​ ಅವರು ಮನಸಾರೆ ನಗು ಚೆಲ್ಲಿದ್ದಾರೆ. ಈ ಜೋಡಿಯ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕಿಮ್​ ಶರ್ಮಾ ಅವರು ಸೂಕ್ತವಾದ ಕ್ಯಾಪ್ಷನ್​ ನೀಡದೇ ಈ ಫೋಟೋ ಹಂಚಿಕೊಂಡು ಕೌತುಕ ಮೂಡಿಸಿದ್ದಾರೆ. ಆದರೆ ಲಿಯಾಂಡರ್​ ಪೇಸ್​ ಅವರು ‘ಮ್ಯಾಜಿಕ್​’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಈ ವರ್ಷ ಜುಲೈನಲ್ಲಿ ಕೂಡ ಈ ಜೋಡಿಯ ಕೆಲವು ಆತ್ಮೀಯ ಕ್ಷಣಗಳ ಫೋಟೋಗಳು ವೈರಲ್ ಆಗಿದ್ದವು. ಲಿಯಾಂಡರ್​ ಪೇಸ್​ ಮತ್ತು ಕಿಮ್​ ಶರ್ಮಾ ಬಗ್ಗೆ ಕಿಮ್​ ಅವರ ಮಾಜಿ ಪ್ರಿಯಕರ ಹರ್ಷವರ್ಧನ್​ ರಾಣೆ ಪ್ರತಿಕ್ರಿಯೆ ನೀಡಿದ್ದರು. ‘ಇವರಿಬ್ಬರ ಸಂಬಂಧದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೇ ಒಪ್ಪಿಕೊಂಡರೆ ಒಳ್ಳೆಯದು. ಅವರು ಡೇಟಿಂಗ್​ ಮಾಡುತ್ತಿರುವ ಸುದ್ದಿ ನಿಜವಾಗಿದ್ದರೆ ಅವರಿಬ್ಬರನ್ನು ಹಾಟೆಸ್ಟ್​ ಕಪಲ್​ ಅಂತ ಕರೆಯಬಹುದು’ ಎಂದು ಹರ್ಷವರ್ಧನ್​ ರಾಣೆ ಹೇಳಿದ್ದರು. 2019ರವರೆಗೂ ಹರ್ಷವರ್ಧನ್​ ರಾಣೆ ಜೊತೆಗೆ ಕಿಮ್​ ಶರ್ಮಾ ಡೇಟಿಂಗ್​ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್​ ಮಾಡಿಕೊಂಡಿದ್ದರು. ಈಗ ಲಿಯಾಂಡರ್​ ಪೇಸ್​ ಜೊತೆ ಕಿಮ್​ ಲವ್ವಿ-ಡವ್ವಿ ಜೋರಾಗಿದೆ.

ತೆಲುಗಿನ ಸೂಪರ್​ ಹಿಟ್​ ಸಿನಿಮಾ ‘ಮಗಧೀರ’ದಲ್ಲಿ ನಟಿ ಕಿಮ್​ ಶರ್ಮಾ ವಿಶೇಷ ಪಾತ್ರ ಮಾಡಿದ್ದರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು 2010ರಿಂದ ಈಚೆಗೆ ಕೊಂಚ ಸೈಲೆಂಟ್​ ಆಗಿದ್ದಾರೆ. ಕೈಯಲ್ಲಿ ಸಿನಿಮಾ ಇಲ್ಲದಿದ್ದರೂ ವೈಯಕ್ತಿಕ ಜೀವನದ ಕಾರಣಕ್ಕಾಗಿ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ.

ಇದನ್ನೂ ಓದಿ:

ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​; ಮಾಜಿ ಬಾಯ್​ಫ್ರೆಂಡ್​ ಹೇಳಿದ್ದೇನು?

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?