ವಿಜಯ್ ದೇವರಕೊಂಡ ಫ್ಯಾನ್ಸ್​ಗೆ ಖುಷಿ ಸುದ್ದಿ ಕೊಟ್ಟ ‘ಕಿಂಗ್ಡಮ್’ ನಿರ್ದೇಶಕ; ಬರಲಿದೆ ಎರಡನೇ ಪಾರ್ಟ್

‘ಕಿಂಗ್ಡಮ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ, ನಿರ್ದೇಶಕ ಗೌತಮ್ ತಿನ್ನನುರಿ ಅವರು ಕಿಂಗ್ಡಮ್ 2 ಮತ್ತು ಒಂದು ಸ್ಪಿನ್ ಆಫ್ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ. ಮೊದಲ ಭಾಗದಲ್ಲಿ ಪರಿಚಯಿಸಲಾದ ಸೇತು ಪಾತ್ರವನ್ನು ಕೇಂದ್ರೀಕರಿಸಿ ಒಟಿಟಿಗಾಗಿ ಒಂದು ಪ್ರೀಕ್ವೆಲ್ ಕೂಡ ತಯಾರಾಗಲಿದೆ. ಭವಿಷ್ಯದಲ್ಲಿ ಕಿಂಗ್ಡಮ್ 3 ಕೂಡ ಬರಬಹುದು ಎಂಬ ಸುಳಿವು ನೀಡಿದ್ದಾರೆ.

ವಿಜಯ್ ದೇವರಕೊಂಡ ಫ್ಯಾನ್ಸ್​ಗೆ ಖುಷಿ ಸುದ್ದಿ ಕೊಟ್ಟ ‘ಕಿಂಗ್ಡಮ್’ ನಿರ್ದೇಶಕ; ಬರಲಿದೆ ಎರಡನೇ ಪಾರ್ಟ್
ವಿಜಯ್

Updated on: Aug 04, 2025 | 12:48 PM

‘ಕಿಂಗ್ಡಮ್’ ಸಿನಿಮಾ ಯಶಸ್ಸಿನ ಬಳಿಕ ನಿರ್ದೇಶಕ ಗೌತಮ್ ತಿನ್ನನುರಿ ಅವರು ಒಂದು ಭರ್ಜರಿ ಅಪ್​ಡೇಟ್ ಕೊಟ್ಟಿದ್ದಾರೆ. ಈ ಸಿನಿಮಾ ಗೆಲುವಿನ ಬೆನ್ನಲ್ಲೇ ‘ಕಿಂಗ್ಡಮ್ 2’ (Kingdom Movie ) ಬರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಇದೇ ಕಥೆ ಇಟ್ಟುಕೊಂಡು ಒಂದು ಸ್ಪಿನ್ ಆಫ್ ಮಾಡುವ ಆಲೋಚನೆ ಕೂಡ ನಿರ್ದೇಶಕರಿಗೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೊಂದು ದಿನ ‘ಕಿಂಗ್ಡಮ್ 3’ ಕೂಡ ಮೂಡಿ ಬರಲಿದೆಯಂತೆ.

‘ಕಿಂಗ್ಡಮ್’ ಸಿನಿಮಾ ಜುಲೈ 31ರಂದು ರಿಲೀಸ್ ಆಯಿತು. ಮೊದಲ ದಿನವೇ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 33 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಳ್ಳದಿದ್ದ ಕಾರಣ ಪ್ರಚಾರದಲ್ಲಿ ಗೌತಮ್ ಭಾಗಿ ಆಗಿರಲಿಲ್ಲ. ಈಗ ಸಿನಿಮಾ ಬಳಿಕ ಅವರು ಅಪ್​ಡೇಟ್ ಒಂದನ್ನು ನೀಡಿದ್ದಾರೆ.

‘ಕಿಂಗ್ಡಮ್’ ಸಿನಿಮಾ ಎರಡು ಭಾಗದಲ್ಲಿ ಮಾಡುವ ಆಲೋಚನೆ ಗೌತಮ್​ಗೆ ಇತ್ತು. ಮೊದಲ ಪಾರ್ಟ್​​ನ ಕೊನೆಯಲ್ಲಿ ಸೇತು ಹೆಸರಿನ ವಿಲನ್ ಪಾತ್ರ ಪರಿಚಯಿಸಲಾಗಿದೆ. ಈತ ವಿಲನ್​ನ ಅಣ್ಣ. ಎರಡನೇ ಪಾರ್ಟ್​ನಲ್ಲಿ ಸೂರಿ (ವಿಜಯ್ ದೇವರಕೊಂಡ) ಹಾಗೂ ಸೇತು ನಡುವಿನ ತಿಕ್ಕಾಟವನ್ನು ಹೈಲೈಟ್ ಮಾಡಲಾಗುತ್ತದೆ. ಈ ಸಿನಿಮಾ ಮಾಡುವುದಕ್ಕೂ ಮೊದಲು ಸೇತು ಪಾತ್ರವನ್ನು ಕೇಂದ್ರೀಕರಿಸಿ ಒಟಿಟಿಗಾಗಿ ಗೌತಮ್ ಒಂದು ಸಿನಿಮಾ ಮಾಡಲಿದ್ದಾರೆ.

ಇದನ್ನೂ ಓದಿ
ಸಿನಿಮಾ ಗೆಲ್ಲದಿದ್ದರೂ 500 ಕೋಟಿ ರೂ. ಒಡೆಯ ಅರ್ಬಾಜ್ ಖಾನ್
ಲಾಭದಲ್ಲೇ ಇದೆ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ?
ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಮೊದಲ ಪಾರ್ಟ್​​ನಲ್ಲಿ ಸಮಯದ ಅಭಾವದಿಂದ ಅನೇಕ ದೃಶ್ಯಗಳನ್ನು ಟ್ರಿಮ್ ಮಾಡಲಾಗಿದೆ. ಹೀಗಾಗಿ, ಒಟಿಟಿ ಪ್ರೀಕ್ವೆಲ್ ಈ ಗ್ಯಾಪ್​ನ ಮುಚ್ಚಲಿದೆ. ಹೀಗಾಗಿ, ಎರಡನೇ ಪಾರ್ಟ್​ ಮಾಡುವುದಕ್ಕೂ ಮೊದಲು ಒಟಿಟಿಗಾಗಿ ಒಂದು ವಿಶೇಷ ಸಿನಿಮಾ ರೆಡಿ ಆಗಲಿದೆ. ನಿರ್ಮಾಪಕ ನಾಗ ವಂಶಿ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆದರೆ, ಸೇತು ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಚಾರ ಇನ್ನೂ ರಿವೀಲ್ ಆಗಿಲ್ಲ.

ಇದನ್ನೂ ಓದಿ:‘ಕಿಂಗ್ಡಮ್’ ಪರಿಣಾಮ, ನಟಿ ಭಾಗ್ಯಶ್ರೀಗೆ ಸಿಕ್ಕಿತು ಮತ್ತೊಂದು ದೊಡ್ಡ ಅವಕಾಶ 

ಈ ಚಿತ್ರಕ್ಕೆ ಮೂರು ಪಾರ್ಟ್ ಮಾಡುವ ಆಲೋಚನೆ ಕೂಡ ಇದೆಯಂತೆ. ಇದು ಪ್ರೀಕ್ವೆಲ್ ಆಗಿರಲಿದೆ. ‘ಕಿಂಗ್ಡಮ್’ ಹೇಗೆ ಹುಟ್ಟಿತು ಎಂಬಿತ್ಯಾದಿ ಕಥೆಗಳ ಮೇಲೆ ಸಿನಿಮಾ ಸಾಗಲಿದೆ. ಆದರೆ, ಇನ್ನೂ ಯಾವುದೂ ಫೈನಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.