Ajith Kumar’s Father Death: ಅಜಿತ್​ ಕುಮಾರ್​ ತಂದೆ ಪಿ.​ ಸುಬ್ರಮಣಿಯಂ ನಿಧನ; ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಸಂತಾಪ

| Updated By: Digi Tech Desk

Updated on: Mar 24, 2023 | 12:24 PM

Ajith Kumar: ನಟ ಅಜಿತ್​ ಕುಮಾರ್ ಅವರ ತಂದೆ ಪಿ.​ ಸುಬ್ರಮಣಿಯಂ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನಲ್ಲಿ ನಿಧನರಾದರು.

Ajith Kumars Father Death: ಅಜಿತ್​ ಕುಮಾರ್​ ತಂದೆ ಪಿ.​ ಸುಬ್ರಮಣಿಯಂ ನಿಧನ; ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಸಂತಾಪ
ಅಜಿತ್ ಕುಮಾರ್ ಕುಟುಂಬ
Follow us on

ಖ್ಯಾತ ತಮಿಳು ನಟ ಅಜಿತ್​ ಕುಮಾರ್​ (Ajith Kumar) ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅವರ ತಂದೆ ಪಿ.​ ಸುಬ್ರಮಣಿಯಂ (P Subramaniam) ಅವರು ಇಂದು (ಮಾರ್ಚ್​ 24) ಮುಂಜಾನೆ ಕೊನೆಯುಸಿರು ಎಳೆದಿದ್ದಾರೆ. ತಂದೆಯನ್ನು ಕಳೆದುಕೊಂಡ ಅಜಿತ್​ ಕುಮಾರ್​ ಅವರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಪಿ.​ ಸುಬ್ರಮಣಿಯಂ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಚೆನ್ನೈನ ಬೇಸಂತ್​ ನಗರ್​ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಪಿ.​ ಸುಬ್ರಮಣಿಯಂ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಅಜಿತ್​ ಕುಮಾರ್​ ಅವರು ಪತ್ನಿ ಮತ್ತು ಮಕ್ಕಳ ಜೊತೆ ವಿದೇಶಕ್ಕೆ ತೆರಳಿದ್ದಾರೆ. ತಂದೆ ನಿಧನ ಆಗಿದ್ದರಿಂದ ಅವರು ಶೀಘ್ರದಲ್ಲೇ ಚೆನ್ನೈಗೆ ಮರಳಲಿದ್ದಾರೆ. ಪಿ.​ ಸುಬ್ರಮಣಿಯಂ ಮರಣ ವಾರ್ತೆಯನ್ನು ಕುಟುಂಬದವರು ಸೋಶಿಯಲ್​ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ.

ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…

ಇದನ್ನೂ ಓದಿ
Pradeep Sarkar Death: ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ
Sameer Khakhar: ಹಿರಿಯ ನಟ ಸಮೀರ್ ಖಕ್ಕಡ್ ನಿಧನ, ಗಣ್ಯರ ಅಶ್ರುತರ್ಪಣ
Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ
Subi Suresh Death: ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್​ ನಿಧನ; ಪ್ರಾಣಕ್ಕೆ ಮುಳುವಾಯ್ತು ಲಿವರ್​ ಸಮಸ್ಯೆ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Fri, 24 March 23