Subi Suresh Death: ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ; ಪ್ರಾಣಕ್ಕೆ ಮುಳುವಾಯ್ತು ಲಿವರ್ ಸಮಸ್ಯೆ
Anchor Subi Suresh: ನಟಿ, ನಿರೂಪಕಿ ಸುಬಿ ಸುರೇಶ್ ನಿಧನದಿಂದ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವುಂಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ (Mollywood) ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದ ನಟಿ, ನಿರೂಪಕಿ ಸುಬಿ ಸುರೇಶ್ ಅವರು ಕೊನೆಯುಸಿರು ಎಳೆದಿದ್ದಾರೆ. ಲಿವರ್ ಸಂಬಂಧಿತ (Liver Related Diseases) ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಸುಬಿ ಸುರೇಶ್ (Subi Suresh) ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿ ಆಗದ ಕಾರಣ ಅವರು ಬದುಕಿ ಉಳಿಯಲಿಲ್ಲ. ಬುಧವಾರ (ಫೆಬ್ರವರಿ 22) ಬೆಳಗ್ಗೆ ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಸಂತಾಪ ಸೂಚಿಸಿದ್ದಾರೆ.
ಸುಬಿ ಸುರೇಶ್ ಅವರು ಮೊದಲು ಕಾಣಿಸಿಕೊಂಡಿದ್ದು ಕಿರುತೆರೆಯ ಕಾರ್ಯಕ್ರಮಗಳಲ್ಲಿ. ಹಾಸ್ಯ ಪಾತ್ರಗಳ ಮೂಲಕ ಅವರು ಜನಮೆಚ್ಚುಗೆ ಪಡೆದಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ಲಿವರ್ ಸಮಸ್ಯೆಯಿಂದ ನಿಧನರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
Liver Cancer: ಲಿವರ್ ಕ್ಯಾನ್ಸರ್ನ ವಿಧಗಳು, ಲಕ್ಷಣಗಳು, ಚಿಕಿತ್ಸೆಗಳ ವಿವರ ಇಲ್ಲಿದೆ
ನಿರೂಪಕಿಯಾಗಿಯೂ ಸುಬಿ ಸರೇಶ್ ಅವರು ಫೇಮಸ್ ಆಗಿದ್ದರು. ಅವರು ‘ಸಿನಿಮಾಲಾ’ ಕಾರ್ಯಕ್ರಮ ನಡೆಸಿಕೊಡುವ ಶೈಲಿ ವೀಕ್ಷಕರಿಗೆ ಇಷ್ಟ ಆಗಿತ್ತು. ‘ಸೂರ್ಯ ಟಿವಿ’ಯಲ್ಲಿ ‘ಕುಟ್ಟಿಪಟ್ಟಲಂ’ ಎಂಬ ಮಕ್ಕಳ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ ಬಳಿಕ ಮಲಯಾಳಿ ಕಿರುತೆರೆ ಪ್ರೇಕ್ಷಕರ ವಯಲದಲ್ಲಿ ಸುಬಿ ಸುರೇಶ್ ಅವರ ಜನಪ್ರಿಯತೆ ಹೆಚ್ಚಾಗಿತ್ತು.
RIP #SubiSuresh ?
Cinema- Serial Artist & Television Anchor. She was in treatment for Liver Disease. Really Shocking ? pic.twitter.com/AzzRlEri0o
— Nithin Krishna (@NithinK67232605) February 22, 2023
ಸುಬಿ ಸುರೇಶ್ ನಟಿಸಿದ ಮೊದಲ ಸಿನಿಮಾ ‘ಕನಕ ಸಿಂಹಾಸನಂ’. ಆ ಚಿತ್ರ 2006ರಲ್ಲಿ ತೆರೆಕಂಡಿತ್ತು. ಬಳಿಕ ‘ಹ್ಯಾಪಿ ಹಸ್ಬೆಂಡ್ಸ್’, ‘ಎಲ್ಸಮ್ಮ ಎನ್ನ ಅನ್ಕುಟ್ಟಿ’ ಮುಂತಾದ ಸಿನಿಮಾಗಳಲ್ಲಿ ಸುಬಿ ಸುರೇಶ್ ನಟಿಸಿದ್ದರು. ಸುಬಿ ಸುರೇಶ್ ನಿಧನದಿಂದ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವುಂಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:31 am, Wed, 22 February 23