‘ಉಪ್ಪೇನಾ’ (Uppena) ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು ನಟಿ ಕೃತಿ ಶೆಟ್ಟಿ (Krithi Shetty). ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ನಿರ್ವಹಿಸಿದ್ದ ಬೇಬಮ್ಮ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಹೀರೋಯಿನ್ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ ಹಿಟ್ ಆದ ನಂತರದಲ್ಲಿ ಸಾಲುಸಾಲು ಆಫರ್ಗಳು ಬರೋದು ಸಾಮಾನ್ಯ. ಅದೇ ರೀತಿ, ಕೃತಿ ಶೆಟ್ಟಿಗೆ ಹಲವು ಸಿನಿಮಾ ಆಫರ್ಗಳು ಬಂದಿವೆ. ಸದ್ಯ, ಅವರ ಕೈಯಲ್ಲಿ ಬರೋಬ್ಬರಿ ಐದು ಚಿತ್ರಗಳಿವೆ. ಕೇವಲ 18ನೇ ವಯಸ್ಸಿನಲ್ಲಿ ಸ್ಟಾರ್ ನಟಿ ಆಗಿದ್ದಾರೆ ಕೃತಿ. ಅವರ ಖ್ಯಾತಿ ನಿತ್ಯ ಹೆಚ್ಚುತ್ತಲೇ ಇದೆ. ಈಗ ನಾಗ ಚೈತನ್ಯ ಅವರು ಕೃತಿಗೆ ಬೆಂಬಲ ನೀಡಿದ್ದಾರೆ. ಈ ವಿಚಾರ ಅವರಿಗೆ ಖುಷಿ ನೀಡಿದೆ. ಅಷ್ಟಕ್ಕೂ ಏನಿದು ಸಮಾಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಬಂಗರಾಜು’ ಸಿನಿಮಾದಲ್ಲಿ ಕೃತಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಯಾವ ಅವತಾರ ತಾಳಬಹುದು ಎನ್ನುವ ಕುತೂಹಲ ಪ್ರೇಕ್ಷಕರದ್ದಾಗಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ನಾಗ ಚೈತನ್ಯ ಅವರು ಕೃತಿ ಅವರ ಹೊಸ ಲುಕ್ ಅನಾವರಣ ಮಾಡಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಷ್ಟೇ ಅಲ್ಲ, ಕೃತಿ ಸೌಂದರ್ಯ ಎಲ್ಲರ ಗಮನ ಸೆಳೆದಿದೆ.
ಕೃತಿ ಅವರು ‘ಬಂಗರಾಜು’ ಚಿತ್ರದಲ್ಲಿ ನಾಗಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ನಾಗ ಚೈತನ್ಯ ಅನಾವರಣ ಮಾಡಿದ್ದಾರೆ. ಕೃತಿ ಅವರು ಹಸಿರು ಬಣ್ಣದ ಸೀರೆ ತೊಟ್ಟಿದ್ದಾರೆ. ಕತ್ತಿಗೆ ಗುಲಾಬಿ ಹೂವಿನ ಹಾರ ಹಾಕಿಕೊಂಡಿದ್ದಾರೆ. ಕೈಯಲ್ಲಿ ಕನ್ನಡಕ ಹಿಡಿದಿದ್ದಾರೆ. ಕಿವಿಗೆ ದೊಡ್ಡದಾದ ಕಿವಿಯೋಲೆ ಹಾಕಿದ್ದಾರೆ. ಅವರ ಲುಕ್ ನೋಡಿ ಪ್ರೇಕ್ಷಕರು ಮನ ಸೋತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಾಗ ಚೈತನ್ಯ, ‘ನಾಗಲಕ್ಷ್ಮೀ ಆಗಿ ಕೃತಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಫಸ್ಟ್ ಲುಕ್ ಇಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕೃತಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾಗ ಚೈತನ್ಯ ಅವರೇ ನಾಗಲಕ್ಷ್ಮೀಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದ. ಈ ಪಾತ್ರ ಸಾಕಷ್ಟು ಖುಷಿ ನೀಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
#Bangarraju is coming soon …ladies first 🙂 introducing @IamKrithiShetty as our Nagalakshmi .. Here’s the first look @iamnagarjuna @IamKrithiShetty @kalyankrishna_k @AnnapurnaStdios @ZeeStudios_ pic.twitter.com/13hsyH0ff4
— chaitanya akkineni (@chay_akkineni) November 18, 2021
‘ಬಂಗರಾಜು’ ಸಿನಿಮಾವನ್ನು ಕಲ್ಯಾಣ್ ಕೃಷ್ಣ ಅವರು ನಿರ್ದೆಶನ ಮಾಡುತ್ತಿದ್ದಾರೆ. ಅವರಿಗೆ ಈ ಮೊದಲು ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಇದೆ. ಅನ್ನಪೂರ್ಣ ಸ್ಟುಡಿಯೋಸ್ ಹಾಗೂ ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಶೀಘ್ರವೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್ ಡಿಮ್ಯಾಂಡ್
Published On - 1:48 pm, Thu, 18 November 21