ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಸೆನ್ಸೇಷನ್ ಸೃಷ್ಟಿಸಿದೆ. ನಟಿಯರಿಗೆ ಲೈಂಗಿಕ ಕಿರುಕುಳ, ಶೋಶಣೆ ಮುಂದುವರಿದಿದೆ ಎನ್ನುವ ಆರೋಪ ಇದರಲ್ಲಿ ಇದೆ. ಇದರಿಂದ ಮಲಯಾಳಂ ಚಿತ್ರರಂಗ ಮುಜುಗರ ಎದುರಿಸುವಂತೆ ಆಗಿದೆ. ಈ ಬಗ್ಗೆ ಅನೇಕ ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಗ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಮಾತನಾಡಿದ್ದಾರೆ. ದೀರ್ಘವಾಗಿ ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಹೇಮಾ ಸಮಿತಿಯ ವರದಿ ಬಗ್ಗೆ ಖುಷ್ಬೂ ಮೆಚ್ಚುಗೆ ಸೂಚಿಸಿದ್ದಾರೆ. ‘ಶೋಷಣೆ, ಲೈಂಗಿಕ ದೌರ್ಜನ್ಯ, ಲಾಭಕ್ಕಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುವುದು ಎಲ್ಲಾ ಕಡೆಗಳಲ್ಲೂ ಇದೆ. ಮಹಿಳೆ ಏಕಾಂಗಿಯಾಗಿ ಇದನ್ನು ಎದುರಿಸಬೇಕು. ಪುರುಷರು ಸಹ ಇದನ್ನು ಎದುರಿಸುತ್ತಾರೆ. ಆದರೆ, ಮಹಿಳೆಯರು ಇದರ ಭಾರವನ್ನು ಹೊರುತ್ತಾರೆ’ ಎಂದಿದ್ದಾರೆ ಅವರು.
‘ಈ ವಿಚಾರದ ಬಗ್ಗೆ ನಾನು ನನ್ನ ಮಕ್ಕಳ ಜೊತೆ ಮಾತನಾಡುತ್ತಿದ್ದೆ. ಅವರು ಸಂತ್ರಸ್ತರ ಪರವಾಗಿ ಮಾತನಾಡಿದರು. ಸಂತ್ರಸ್ತೆಯರು ಇವತ್ತು ಮಾತನಾಡುತ್ತಾರೋ ಅಥವಾ ನಾಳೆ ಮಾತನಾಡುತ್ತಾರೋ ಅನ್ನೋದು ಮುಖ್ಯವಲ್ಲ. ತಕ್ಷಣಕ್ಕೆ ಹೇಳಿದರೆ ತನಿಖೆಗೆ ಹೆಚ್ಚು ಸಹಾಯ ಆಗುತ್ತದೆ’ ಎಂಬುದು ಅವರ ಅಭಿಪ್ರಾಯ.
💔 This moment of #MeToo prevailing in our industry breaks you. Kudos to the women who have stood their ground and emerged victorious. ✊ The #HemaCommittee was much needed to break the abuse. But will it?
Abuse, asking for sexual favors, and expecting women to compromise to…
— KhushbuSundar (@khushsundar) August 28, 2024
‘ಸಂಸ್ತ್ರಸ್ತೆ ನಮಗೆ ಅಥವಾ ನಿಮಗೆ ಅಪರಿಚಿತ ವ್ಯಕ್ತಿ ಆಗಿರಬಹುದು. ಅವರಿಗೆ ನಿಮ್ಮ ಬೆಂಬಲ ಬೇಕಿರುತ್ತದೆ. ಕೇಳುವ ಕಿವಿಗಳು ಬೇಕಾಗುತ್ತವೆ. ಈ ಮೊದಲೇ ಏಕೆ ಹೇಳಿಲ್ಲ ಎಂದು ಕೇಳುವ ಬದಲು, ಎಲ್ಲರಿಗೂ ಆ ಸಂದರ್ಭದಲ್ಲಿ ಹೇಳುವ ಶಕ್ತಿ ಇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಆ ರೀತಿಯ ಸಿನಿಮಾಗಳಿಗೆ ದಕ್ಷಿಣದಲ್ಲಿ ಬೇಡಿಕೆಯೇ ಇಲ್ಲ’; ಖುಷ್ಬೂ ಸುಂದರ್
ಖುಷ್ಬೂ ಸುಂದರ್ ಅವರು ಇತ್ತೀಚೆಗೆ ನಟನೆಗಿಂತ ರಾಜಕೀಯದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.