‘ನನ್ನ ಹೀರೋ, ನನ್ನ ಗೆಳೆಯ’: ಕಮಲ್ ಹಾಸನ್​ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಖುಷ್ಬೂ ಸುಂದರ್

ಕಮಲ್ ಹಾಸನ್ ಹಾಗೂ ಖುಷ್ಬೂ ಇಬ್ಬರೂ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಾ ಇದ್ದವರು. ಹಲವು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಗೆಳೆತನವಿದೆ.

‘ನನ್ನ ಹೀರೋ, ನನ್ನ ಗೆಳೆಯ’: ಕಮಲ್ ಹಾಸನ್​ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಖುಷ್ಬೂ ಸುಂದರ್
Edited By:

Updated on: Jun 19, 2022 | 2:56 PM

ನಟಿ ಖುಷ್ಬೂ ಸುಂದರ್ ಅವರು (Kushboo Sundar) ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಂತ ಅವರು ಚಿತ್ರರಂಗದ ಜತೆಗೆ ನಂಟು ಕಳೆದುಕೊಂಡಿಲ್ಲ. ಸಿನಿಮಾ ಕೆಲಸಗಳಲ್ಲೂ ಖುಷ್ಬೂ ತೊಡಗಿಕೊಂಡಿದ್ದಾರೆ. ಸಿನಿಮಾ ನಿರ್ಮಾಣದಲ್ಲೂ ಬ್ಯುಸಿ ಆಗಿದ್ದಾರೆ. ಈಗ ಖುಷ್ಬೂ ಅವರು ನಟ ಕಮಲ್ ಹಾಸನ್ (Kamal Haasan) ಜತೆಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ‘ನನ್ನ ಹೀರೋ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಅಭಿಮಾನಿಗಳು ಇವರ ಗೆಳೆತನ ಕಂಡು ಖುಷಿಪಟ್ಟಿದ್ದಾರೆ.

ಕಮಲ್ ಹಾಸನ್ ನಟಿಸಿ, ನಿರ್ಮಿಸಿರುವ ‘ವಿಕ್ರಮ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದ ಮೂಲಕ ಅವರು ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ನೂರಾರು ಕೋಟಿ ರೂಪಾಯಿ ಲಾಭ ಆಗಿದೆ. ಈ ಖುಷಿಯಲ್ಲಿ ಕಮಲ್ ಹಾಸನ್ ಅವರು ಚಿತ್ರರಂಗದ ಅನೇಕರನ್ನು ಭೇಟಿ ಮಾಡುತ್ತಿದ್ದಾರೆ. ಗೆಳೆಯರನ್ನು ಮೀಟ್ ಮಾಡಿ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಕಮಲ್ ಹಾಸನ್ ಹಾಗೂ ಖುಷ್ಬೂ ಇಬ್ಬರೂ ಭೇಟಿ ಆಗಿದ್ದಾರೆ.

ಇದನ್ನೂ ಓದಿ
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು
ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿಗೆ ನಮಿಸಿದ ಅಲ್ಲು ಅರ್ಜುನ್​; ಇಲ್ಲಿದೆ ವಿಡಿಯೋ
ಅಣ್ಣಾವ್ರ ಮನೆ 2 ಭಾಗ ಆದಾಗ ಪಾರ್ವತಮ್ಮ ಹೇಳಿದ್ದೇನು? ಮುಖ್ಯವಾದ ವಿಚಾರ ತಿಳಿಸಿದ ರಾಘಣ್ಣ

ಕಮಲ್ ಹಾಸನ್ ಹಾಗೂ ಖುಷ್ಬೂ ಇಬ್ಬರೂ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಾ ಇದ್ದವರು. ಹಲವು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಗೆಳೆತನವಿದೆ. ಈಗ ‘ವಿಕ್ರಮ್​’ ಸಿನಿಮಾ ಗೆದ್ದ ಖುಷಿಯಲ್ಲಿ ಇಬ್ಬರೂ ಪರಸ್ಪರ ಭೇಟಿ ಆಗಿದ್ದಾರೆ.

ಕಮಲ್ ಹಾಸನ್ ಜತೆಗಿನ ಫೋಟೋ ಹಂಚಿಕೊಂಡಿರುವ ಖುಷ್ಬೂ ಅವರು, ‘ನಿಮ್ಮ ಮೇಲೆ ನಂಬಿಕೆ ಇಡಿ. ನಿಮ್ಮ ಕೆಲಸವನ್ನು ನಂಬಿ. ನಿಮ್ಮ ಪ್ರತಿಭೆಯನ್ನು ನಂಬಿ. ಪ್ರಪಂಚ ಹಾಕಿಕೊಟ್ಟ ಮಾನದಂಡಗಳನ್ನು ಬದಿಗಿಟ್ಟು, ತನ್ನ ಪ್ರತಿಭೆಯನ್ನು ನಂಬುವ, ತನ್ನ ಕೆಲಸವನ್ನು ಪೂಜಿಸುವ ವ್ಯಕ್ತಿ ಅವನ ಕೆಲಸದಿಂದ ಯಶಸ್ವಿಯಾಗುತ್ತಾನೆ. ನನ್ನ ನಾಯಕ. ನನ್ನ ಗೆಳೆಯ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ.

‘ರಣಧೀರ’, ‘ಅಂಜದ ಗಂಡು’, ‘ಯುಗಪುರುಷ’, ‘ಶಾಂತಿ ಕ್ರಾಂತಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಮಿತಿ ಮೀರಿದ್ದ ಅವರ ದೇಹದ ತೂಕ ಇಳಿಕೆ ಆಗಿದೆ. ಅವರು ಬರೋಬ್ಬರಿ 15 ಕೆಜಿಗೂ ಅಧಿಕ ದೇಹತೂಕ ಇಳಿಸಿಕೊಂಡಿದ್ದಾರೆ. ಇದು ಅವರ ಫ್ಯಾನ್ಸ್​ಗೆ ಅಚ್ಚರಿ ಮೂಡಿಸಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.