ಗರ್ಭಿಣಿಯರು ಈ ಸಿನಿಮಾ ನೋಡಬೇಡಿ: ‘ದಿಯಾ’ ನಟಿಯ ಹೊಸ ಚಿತ್ರ ‘ಪಿಂಡಂ’ ಬಗ್ಗೆ ಎಚ್ಚರಿಕೆ
ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ‘ಪಿಂಡಂ’ ಸಿನಿಮಾ ‘ಎ’ ಪ್ರಮಾಣ ಪತ್ರ ಪಡೆದಿದೆ. ಭಯಾನಕ ದೃಶ್ಯಗಳು ಈ ಸಿನಿಮಾದಲ್ಲಿ ಇವೆ ಎಂಬ ಕಾರಣಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಅಲ್ಲದೇ, ಇದು ಗರ್ಭಿಣಿಯರಿಗೆ ಸೂಕ್ತವಲ್ಲ ಎಂದು ಕೂಡ ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದಾರೆ.
ಕನ್ನಡದ ನಟಿ ಖುಷಿ ರವಿ (Kushee Ravi) ಅವರು ‘ದಿಯಾ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. ಆ ಬಳಿಕ ಅವರಿಗೆ ಪರಭಾಷೆಯಿಂದಲೂ ಅವಕಾಶಗಳು ಬರಲು ಆರಂಭಿಸಿದರು. ತೆಲುಗಿನಲ್ಲಿ ಅವರು ಅಭಿನಯಿಸಿದ್ದಾರೆ. ಖುಷಿ ರವಿ ನಟನೆಯ ಟಾಲಿವುಡ್ ಸಿನಿಮಾ ‘ಪಿಂಡಂ’ (Pindam Movie) ಈ ವಾರ ಬಿಡುಗಡೆ ಆಗಲಿದೆ. ಡಿಸೆಂಬರ್ 15ರಂದು ಈ ಚಿತ್ರ ತೆರೆಕಾಣಲಿದೆ. ಇದು ಹಾರರ್ ಸಿನಿಮಾ ಆಗಿದ್ದು, ಬಿಡುಗಡೆಗೂ ಮುನ್ನವೇ ಚಿತ್ರತಂಡದವರು ಒಂದು ಎಚ್ಚರಿಕೆ ನೀಡಿದ್ದಾರೆ. ಗರ್ಭಿಣಿಯರು (Pregnant ladies) ಈ ಸಿನಿಮಾ ನೋಡಬಾರದು ಎಂದು ವಿಶೇಷ ಸೂಚನೆ ನೀಡಲಾಗಿದೆ.
‘ಪಿಂಡಂ’ ಸಿನಿಮಾದಲ್ಲಿ ಶ್ರೀರಾಮ್, ಖುಷಿ ರವಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಹಾರರ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಪಿಂಡಂ’ ಭರ್ಜರಿ ಟ್ರೀಟ್ ನೀಡಲಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಆ ಕಾರಣದಿಂದಲೂ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
2️⃣Days to go for the scariest film ever!!#Pindam Movie Releasing on December 15th 2023 🔥
Disclaimer: Pregnant women are strictly not encouraged to watch@saikirandaida @yeshwanth_daggumati @ameaswarirao @kalaahimedia#TheScariestFilmEver #Pindamon15thDecember pic.twitter.com/FNiKbErQvn
— Kalaahi Media (@Kalaahi_Media) December 13, 2023
ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿರುವ ‘ಪಿಂಡಂ’ ಸಿನಿಮಾ ‘ಎ’ ಪ್ರಮಾಣ ಪತ್ರ ಪಡೆದಿದೆ. ಭಯಾನಕ ದೃಶ್ಯಗಳು ಈ ಸಿನಿಮಾದಲ್ಲಿ ಇವೆ ಎಂಬ ಕಾರಣಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇದು ಗರ್ಭಿಣಿಯರಿಗೆ ಸೂಕ್ತವಲ್ಲ ಎಂದು ಕೂಡ ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಈ ಕ್ಯಾಪ್ಷನ್ ನೋಡಿದ ಬಳಿಕ ಸಿನಿಪ್ರಿಯರ ಕೌತುಕ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್ ಅನುಭವ
‘ಅತಿ ಹೆಚ್ಚು ಹೆದರಿಸುವ ಸಿನಿಮಾ’ ಎಂಬ ಟ್ಯಾಗ್ ಲೈನ್ ಕೂಡ ‘ಪಿಂಡಂ’ ಸಿನಿಮಾದ ಪೋಸ್ಟರ್ನಲ್ಲಿ ಹೈಲೈಟ್ ಆಗಿದೆ. ಸಾಯಿಕಿರಣ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿವಿಧ ಕಾಲಘಟದಲ್ಲಿ ಈ ಸಿನಿಮಾದ ಕಥೆ ಸಾಗಲಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:41 pm, Wed, 13 December 23