Liger: ಡಿಗ್ರಿ ಓದಿ ಟೀ ಮಾರುತ್ತಿರುವ ಯುವತಿಯ ಅಂಗಡಿಯಲ್ಲಿ ಚಹಾ ಸವಿದ ‘ಲೈಗರ್’​ ನಟ ವಿಜಯ್ ದೇವರಕೊಂಡ

| Updated By: ಮದನ್​ ಕುಮಾರ್​

Updated on: Aug 08, 2022 | 8:16 AM

Graduate Chaiwali | Priyanka Gupta: ‘ಗ್ರಾಜ್ಯುಯೇಟ್​ ಚಾಯ್​ವಾಲಿ’ ಖ್ಯಾತಿಯ ಪ್ರಿಯಾಂಕಾ ಗುಪ್ತಾ ಅವರ ಜೊತೆ ವಿಜಯ್​ ದೇವರಕೊಂಡ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ.

Liger: ಡಿಗ್ರಿ ಓದಿ ಟೀ ಮಾರುತ್ತಿರುವ ಯುವತಿಯ ಅಂಗಡಿಯಲ್ಲಿ ಚಹಾ ಸವಿದ ‘ಲೈಗರ್’​ ನಟ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ, ಪ್ರಿಯಾಂಕಾ ಗುಪ್ತಾ
Follow us on

ಟಾಲಿವುಡ್​ ಸ್ಟಾರ್​ ನಟ ವಿಜಯ್​ ದೇವರಕೊಂಡ (Vijay Devarakonda) ಅವರು ಈಗ ಊರೂರು ಸುತ್ತುತ್ತಿದ್ದಾರೆ. ಅವರ ಹೊಸ ಸಿನಿಮಾ ‘ಲೈಗರ್​’ (Liger) ಪ್ರಚಾರದ ಸಲುವಾಗಿ ಅನೇಕ ಕಡೆಗಳಿಗೆ ತೆರಳಿ ಜನರನ್ನು ಭೇಟಿ ಮಾಡುತ್ತಿದ್ದಾರೆ. ವಿಜಯ್​ ದೇವರಕೊಂಡ ಹೋದಲ್ಲೆಲ್ಲ ಫ್ಯಾನ್ಸ್​ ಮುತ್ತಿಗೆ ಹಾಕಿಕೊಳ್ಳುತ್ತಿದ್ದಾರೆ. ಅವರಿಗೆ ರಾಷ್ಟ್ರ ವ್ಯಾಪಿ ಜನಪ್ರಿಯತೆ ಸಿಕ್ಕಿದೆ. ‘ಲೈಗರ್​’ ಸಿನಿಮಾದ ಬಿಡುಗಡೆಗೂ ಮುನ್ನವೇ ವಿಜಯ್​ ದೇವರಕೊಂಡ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಇತ್ತೀಚಿಗೆ ಅವರು ಬಿಹಾರದ ಪಾಟ್ನಾ ನಗರಕ್ಕೆ ತೆರಳಿ ಸಿನಿಮಾ ಪ್ರಚಾರ ಮಾಡಿದರು. ಈ ವೇಳೆ ವಿಶೇಷವಾದ ಟೀ ಅಂಗಡಿಗೆ ಭೇಟಿ ನೀಡಿದ್ದಾರೆ. ಹೌದು, ಅರ್ಥಶಾಸ್ತ್ರ ಪದವಿಧರೆ ಪ್ರಿಯಾಂಕಾ ಗುಪ್ತಾ (Priyanka Gupta) ನಡೆಸುತ್ತಿರುವ ಟೀ ಅಂಗಡಿಯಲ್ಲಿ ವಿಜಯ್ ದೇವರಕೊಂಡ ಚಹಾ ಸವಿದಿದ್ದಾರೆ.

ಊರಿನಲ್ಲಿ ಇರುವ ಎಲ್ಲ ಸ್ಟಾರ್​ ಹೋಟೆಲ್​ಗಳನ್ನು ಬಿಟ್ಟು ಪ್ರಿಯಾಂಕಾ ಗುಪ್ತಾ ಅವರ ಟೀ ಅಂಗಡಿಗೆ ವಿಜಯ್​ ದೆವರಕೊಂಡ ಬಂದಿದ್ದರ ಹಿಂದೆ ಒಂದು ಕಾರಣ ಇದೆ. ಪ್ರಿಯಾಂಕಾ ಅವರ ಜರ್ನಿಯೇ ಸ್ಫೂರ್ತಿದಾಯಕವಾಗಿದೆ. ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದ ಅವರಿಗೆ ಕೆಲಸ ಸಿಗಲಿಲ್ಲ. ಹಾಗಾಗಿ ಅವರು ‘ಗ್ರಾಜ್ಯುಯೇಟ್​ ಚಾಯ್​ವಾಲಿ’ ಎಂಬ ಟೀ ಅಂಗಡಿ ಆರಂಭಿಸಿ ಫೇಮಸ್​ ಆದರು. ಹಾಗಾಗಿ ಅವರ ಬಳಿ ತೆರಳಿ ವಿಜಯ್​ ದೇವರಕೊಂಡ ಟೀ ಕುಡಿದಿದ್ದಾರೆ.

ಇದನ್ನೂ ಓದಿ
‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಜತೆ ಡೇಟ್ ಮಾಡಲು ಸಾರಾ-ಜಾನ್ವಿ ನಡುವೆ ಸ್ಪರ್ಧೆ
‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
Vijay Devarakonda: ಹುಡುಗಿ ಬೆನ್ನಲ್ಲಿ ವಿಜಯ್​ ದೇವರಕೊಂಡ ಟ್ಯಾಟೂ; ನೆಚ್ಚಿನ ಹೀರೋ ಮುಂದೆ ಯುವತಿ ಆನಂದಭಾಷ್ಪ

ಪ್ರಿಯಾಂಕಾ ಗುಪ್ತಾ ಅವರ ಜೊತೆ ವಿಜಯ್​ ದೇವರಕೊಂಡ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋ ಮತ್ತು ವಿಡಿಯೋಗಳನ್ನು ಪ್ರಿಯಾಂಕಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವು ಸಖತ್​ ವೈರಲ್​ ಆಗಿವೆ. ವಿಜಯ್​ ದೇವರಕೊಂಡ ಹೋದಲೆಲ್ಲ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಆ ಮೂಲಕ ‘ಲೈಗರ್​’ ಸಿನಿಮಾ ಬಗ್ಗೆ ಜನರಿಗೆ ಎಷ್ಟು ಕ್ರೇಜ್​ ಇದೆ ಎಂಬುದು ತಿಳಿಯುತ್ತಿದೆ.

‘ಲೈಗರ್​’ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡಿದ್ದಾರೆ. ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ತೆಲುಗು, ಹಿಂದಿ, ಕನ್ನಡ, ಮಲಯಾಳಂ, ತಮಿಳು ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆಗಸ್ಟ್​ 25ರಂದು ಅದ್ದೂರಿಯಾಗಿ ತೆರೆಕಾಣಲಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೇಲರ್​ನಿಂದ ‘ಲೈಗರ್​’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:14 am, Mon, 8 August 22