‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ

ಲೋಕೇಶ್ ಕನಗರಾಜ್ ಅವರ ಮುಂಬರುವ ಚಿತ್ರ 'ಕೂಲಿ' ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಅವರಂತಹ ಬಹುಭಾಷಾ ತಾರಾಗಣವನ್ನು ಒಳಗೊಂಡಿದೆ. ಚಿತ್ರವನ್ನು 6-8 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಲೋಕೇಶ್ ಅವರು ರಾಜಮೌಳಿ ಅವರ ಚಿತ್ರಗಳಿಗೆ ಹೋಲಿಸಿದರೆ ತಮ್ಮ ಚಿತ್ರಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ವಿಧಾನವನ್ನು ವಿವರಿಸಿದ್ದಾರೆ

‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ
‘ನಾನು ಕಲಾವಿದರ ಮೂರು ವರ್ಷ ಕೂರಿಸಲ್ಲ’; ರಾಜಮೌಳಿಗೆ ಟಾಂಗ್ ಕೊಟ್ಟ ‘ಕೂಲಿ’ ನಿರ್ದೇಶಕ
Edited By:

Updated on: May 17, 2025 | 1:23 PM

ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಒಂದೇ ಒಂದು ಫ್ಲಾಪ್ ಕೊಟ್ಟಿದ್ದಾರೆ. ಉಳಿದಂತೆ, ‘ಕೈದಿ’, ‘ವಿಕ್ರಮ್’ ಮೊದಲಾದವು ಹಿಟ್ ಸಿನಿಮಾಗಳು. ಇದು ಅವರ ಹೆಚ್ಚುಗಾರಿಕೆ. ಈ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿವೆ. ಈಗ ‘ಕೂಲಿ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ರಜನಿಕಾಂತ್ ನಟನೆಯ ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರವನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿದ್ದಾರೆ ಲೋಕೇಶ್. ಈ ಬಗ್ಗೆ ಮಾತನಾಡುವಾಗ ರಾಜಮೌಳಿ ಬಗ್ಗೆ ನೇರವಾಗಿ ಹೇಳಿದ್ದಾರೆ.

‘ಕೂಲಿ’ ಸಿನಿಮಾದಲ್ಲಿ ಕೇವಲ ರಜನಿಕಾಂತ್ ಮಾತ್ರ ಇಲ್ಲ. ಇದು ಮಲ್ಟಿಸ್ಟಾರರ್ ಸಿನಿಮಾ. ತೆಲುಗಿನಿಂದ ನಾಗಾರ್ಜುನ, ಹಿಂದಿಯಿಂದ ಆಮಿರ್ ಖಾನ್, ಕನ್ನಡದಿಂದ ಉಪೇಂದ್ರ, ಮಲಯಾಳಂನಿಂದ ಸೌಬಿನ್ ಶಾಹಿರ್, ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಇದ್ದಾರೆ. ಪ್ಯಾನ್ ಇಂಡಿಯಾ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಈ ಕಲಾವಿದರ ಆಯ್ಕೆ ನಡೆದಿದೆ. ಬಿಗ್ ಬಜೆಟ್ ಸಿನಿಮಾ ಬಗ್ಗೆ ಲೋಕೇಶ್ ಮಾತನಾಡಿದ್ದಾರೆ.

‘ನಾನು ಒಂದು ದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಮಾಡುತ್ತಿದ್ದರೂ, ನಟರನ್ನು 3 ವರ್ಷಗಳ ಕಾಲ ಕುಳಿತುಕೊಳ್ಳುವಂತೆ ಮಾಡುವ ‘ಆರ್​ಆರ್​ಆರ್​ ರೀತಿಯ ಸಿನಿಮಾಗಳನ್ನು ನಾನು ಮಾಡುವುದಿಲ್ಲ. ನಾನು ನನ್ನ ಸಿನಿಮಾಗಳನ್ನು 6-8 ತಿಂಗಳಲ್ಲಿ ಮುಗಿಸುತ್ತೇನೆ. ಆ ಸಮಯದಲ್ಲಿ ನಟರು ಈ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಏಕೆಂದರೆ, ಅವರ ಗೆಟಪ್​ಗೆ ಯಾವುದೇ ಅಡ್ಡಿ ಬರಬಾರದು ಎಂಬುದು ನನ್ನ ಒತ್ತಾಯ’ ಎಂದಿದ್ದಾರೆ ಲೋಕೇಶ್.

ಇದನ್ನೂ ಓದಿ
‘ಸದಾ ಹೃದಯದಲ್ಲಿರುತ್ತೀರಿ’; ರಾಕೇಶ್ ಸಾವಿಗೆ ರಕ್ಷಿತಾ ಭಾವುಕ ಪೋಸ್ಟ್
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
‘ಕಾಂತಾರ: ಚಾಪ್ಟರ್ 1’ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ
ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ

‘ಕೂಲಿ’ ಸಿನಿಮಾ ಶೂಟ್ ವೇಳೆ ಸೌಬಿನ್ ಅವರಿಗೆ ಏನಿಲ್ಲ ಎಂದರೂ 6-7 ಸಿನಿಮಾಗಳು ಬಂದಿದ್ದವಂತೆ. ಆದರೆ, ಅದನ್ನು ಅವರು ಒಪ್ಪಿಕೊಂಡಿಲ್ಲ. ಈ ಚಿತ್ರಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡರು. ಒಂದೊಮ್ಮೆ 3 ವರ್ಷಗಳ ಕಾಲ ಒಂದೇ ಸಿನಿಮಾ ಮಾಡಬೇಕು ಎಂದರೆ ಆ ಕಲಾವಿದನಿಗೆ 20-25 ಆಫರ್​ಗಳು ತಪ್ಪುತ್ತಿದ್ದವು.

ಇದನ್ನೂ ಓದಿ: ಜೂ ಎನ್​ಟಿಆರ್-ರಾಮ್ ಚರಣ್ ಜೊತೆ ಸೇರಿದ ಮಹೇಶ್ ಬಾಬು, ರಾಜಮೌಳಿ, ವಿಷಯ ಏನು?

ರಾಜಮೌಳಿ ಸಿನಿಮಾ ಮಾಡಿದರೆ ಈ ಚಿತ್ರದ ಪ್ರಮುಖ ಕಲಾವಿದರು ಯಾವಾಗಲೂ ಬೇರೆ ಸಿನಿಮಾ ಒಪ್ಪಿಕೊಳ್ಳಬಾರದು. ಇದನ್ನು ಅನೇಕ ಕಲಾವಿದರು ಪಾಲಿಸಿದ್ದಾರೆ. ಆದರೆ, ಇದೇ ವಿಚಾರದಲ್ಲಿ ರಾಜಮೌಳಿಗೆ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:03 pm, Mon, 12 May 25