AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ‘ಪುಷ್ಪ 2’ ಅಬ್ಬರಿಸುವಾಗಲೇ ಚೀನಾದಲ್ಲಿ ಭರ್ಜರಿ ಗಳಿಕೆ ಮಾಡಿದ ದಕ್ಷಿಣದ ಮತ್ತೊಂದು ಸಿನಿಮಾ

Maharaja at China: ಪುಷ್ಪ 2 ಭಾರತದಲ್ಲಿ ಅಬ್ಬರಿಸುತ್ತಿರುವಾಗಲೇ, ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಚೀನಾದಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. 40,000 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ, 60 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಸಿದೆ. ಕಡಿಮೆ ಬಜೆಟ್‌ನ ಈ ಚಿತ್ರದ ಯಶಸ್ಸು ದಕ್ಷಿಣ ಭಾರತೀಯ ಚಲನಚಿತ್ರರಂಗಕ್ಕೆ ಹೊಸ ಆಯಾಮವನ್ನು ತೋರಿಸುತ್ತದೆ.

ಭಾರತದಲ್ಲಿ ‘ಪುಷ್ಪ 2’ ಅಬ್ಬರಿಸುವಾಗಲೇ ಚೀನಾದಲ್ಲಿ ಭರ್ಜರಿ ಗಳಿಕೆ ಮಾಡಿದ ದಕ್ಷಿಣದ ಮತ್ತೊಂದು ಸಿನಿಮಾ
ಪುಷ್ಪ-ಮಹಾರಾಜ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 10, 2024 | 6:45 PM

Share

‘ಪುಷ್ಪ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಪರಭಾಷೆಯಲ್ಲೂ ಈ ಚಿತ್ರ ದೊಡ್ಡ ಮೊಟ್ಟದ ಗಳಿಕೆ ಮಾಡುತ್ತಿದೆ. ವಿದೇಶದಲ್ಲೂ ಈ ಚಿತ್ರದ ಅಬ್ಬರವು ಜೋರಾಗಿದೆ. ಈ ಸಿನಿಮಾದ ಗಳಿಕೆ 800 ಕೋಟಿ ರೂಪಾಯಿ ದಾಟಿದೆ. ಭಾರತ ಒಂದರಲ್ಲೇ ಚಿತ್ರ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ದಕ್ಷಿಣದ ಭಾರತದ ಸಿನಿಪ್ರಿಯರಿಗೆ ಖುಷಿ ನೀಡಿದೆ. ನಮ್ಮ ಸಿನಿಮಾ ಇಷ್ಟು ಉತ್ತಮ ಕಲೆಕ್ಷನ್ ಮಾಡುತ್ತಿರುವುದಕ್ಕೆ ಫ್ಯಾನ್ಸ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ‘ಪುಷ್ಪ 2’ ಚಿತ್ರದ ಜೊತೆ ಮತ್ತೊಂದು ಸಿನಿಮಾ ಅಬ್ಬರಿಸುತ್ತಿದೆ. ಹಾಗಂತ ಅದು ಕರ್ನಾಟಕದಲ್ಲಿ ಅಲ್ಲ, ಬದಲಿಗೆ ವಿದೇಶದಲ್ಲಿ.

ವಿಜಯ್ ಸೇತುಪತಿ ನಟನೆಯ ‘ಮಹರಾಜ’ ಸಿನಿಮಾ ಚೀನಾದಲ್ಲಿ 40 ಸಾವಿರಕ್ಕೂ ಅಧಿಕ ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಈ ಮೂಲಕ ಬಾಕ್ಸ್ ಆಫೀಸ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಈ ಸಿನಿಮಾ ಸದ್ಯ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ. ಸಿನಿಮಾ ರಿಲೀಸ್ ಆಗಿ ಹಲವು ತಿಂಗಳು ಕಳೆದರೂ ಚಿತ್ರದ ಟಾಕ್ ನಿಂತಿಲ್ಲ. ಇತ್ತೀಚೆಗೆ ಚೀನಾ ಭಾಷೆಯಲ್ಲಿ ರಿಲೀಸ್ ಆದ ಚಿತ್ರದ ಗಳಿಕೆ ಅನೇಕರಿಗೆ ಅಚ್ಚರಿ ತಂದಿದೆ.

‘ಮಹರಾಜ’ ಸಿನಿಮಾದ ಚೀನಾದ ಗಳಿಕೆ 60 ಕೋಟಿ ರೂಪಾಯಿ ದಾಟುತ್ತಿದೆ. ಇದು ವಿಜಯ್ ಸೇತುಪತಿ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗೆ ಚೀನಾದಲ್ಲಿ ಅಬ್ಬರ ಮುಂದುವರಿದರೆ ಸಿನಿಮಾದ ಒಟ್ಟಾರೆ ಗಳಿಕೆ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ:ಸೋಮವಾರ ಬಾಕ್ಸ್ ಆಫೀಸ್​ನಲ್ಲಿ ‘ಪುಷ್ಪ 2’ ಪವಾಡ; ತೆಲುಗಿಗಿಂತ ಹಿಂದಿಯಲ್ಲಿ ಮೂರು ಪಟ್ಟು ಹೆಚ್ಚು ಕಲೆಕ್ಷನ್

‘ಮಹರಾಜ’ ಚಿತ್ರದ ಬಜೆಟ್ ಕೇವಲ 20 ಕೋಟಿ ರೂಪಾಯಿ. ನಿತಿಲನ್ ಸ್ವಾಮಿನಾಥನ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ 165 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ವಿದೇಶದ ಗಳಿಕೆ 88.15 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಗ್ರಾಸ್ ಕಲೆಕ್ಷನ್ 172 ಕೋಟಿ ರೂಪಾಯಿ ಆಗಿದೆ.

ಮನೆಯ ಕಸದಬುಟ್ಟಿ ಕಳುವಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವ ದೂರು ನೀಡುತ್ತಾನೆ. ನಂತರ ಏನಾಗುತ್ತದೆ ಎಂಬುದೇ ಸಿನಿಮಾದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ನಿರ್ದೇಶಕ ಅನುರಾಗ್ ಕಶ್ಯಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ