ಬ್ರ್ಯಾಂಡ್ ಪ್ರಚಾರದಿಂದ ಎಷ್ಟು ಸಂಭಾವನೆ ಪಡೆಯುತ್ತಾರೆ ಮಹೇಶ್ ಬಾಬು ಮಗಳು ಸಿತಾರಾ

| Updated By: ರಾಜೇಶ್ ದುಗ್ಗುಮನೆ

Updated on: Jan 23, 2024 | 12:07 PM

ಸಿತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸಿತಾರಾ 20 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬ್ರ್ಯಾಂಡ್‌ಗಳನ್ನು ಪ್ರಚಾರ  ಮಾಡುತ್ತಾರೆ. ಇದಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಾರೆ.

ಬ್ರ್ಯಾಂಡ್ ಪ್ರಚಾರದಿಂದ ಎಷ್ಟು ಸಂಭಾವನೆ ಪಡೆಯುತ್ತಾರೆ ಮಹೇಶ್ ಬಾಬು ಮಗಳು ಸಿತಾರಾ
ಸಿತಾರಾ
Follow us on

ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಹೇಶ್ ಬಾಬು ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ‘ಗುಂಟೂರು ಖಾರಂ’ ಚಿತ್ರದ ಮೂಲಕ ಮಹೇಶ್‌ ಬಾಬುಗೆ ಯಶಸ್ಸು ಸಿಕ್ಕಿತು. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾ ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಬಿಡುಗಡೆಯಾದ ಈ ಸಿನಿಮಾ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಮಹೇಶ್ ಬಾಬು ರೀತಿಯೇ ಅವರ ಮಗಳು ಸಿತಾರಾ ಘಟ್ಟಮನೇನಿಗೆ ಪ್ರತ್ಯೇಕ ಫ್ಯಾನ್ ಫಾಲೋಯಿಂಗ್ ಇದೆ. ಸಿತಾರಾ ನಾಯಕಿ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಹೇಶ್ ಬಾಬು ಸಾಂಗ್​ಗಳಿಗೆ ಡ್ಯಾನ್ಸ್ ಮಾಡುತ್ತಾರೆ. ಈ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆ ವಿಡಿಯೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತವೆ. ಸಾವಿರಾರು ಕಾಮೆಂಟ್‌ಗಳು, ಲಕ್ಷಗಟ್ಟಲೆ ಲೈಕ್ಸ್ ಸಿಗುತ್ತವೆ. ಇತ್ತೀಚೆಗೆ ಜ್ಯುವೆಲ್ಲರಿ ಜಾಹೀರಾತಿನಲ್ಲಿ ನಟಿಸಿದ್ದಾರೆ. ಆ ಜಾಹೀರಾತಿನ ಸಂಭಾವನೆಯನ್ನು ಸಿತಾರಾ ಚಾರಿಟಿಗೆ ನೀಡಿದರು. ಈ ಮೂಲಕ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇನ್​ಸ್ಟಾಗ್ರಾಮ್​ನಲ್ಲಿ ಸಿತಾರಾ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದರೆ, 20 ಲಕ್ಷ ಜನರು ಸಿತಾರಾ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅಲ್ಲದೆ, ಸಿತಾರಾ ಅವರ ಯೂಟ್ಯೂಬ್ ಚಾನೆಲ್ 2.79 ಲಕ್ಷ ಹೆಚ್ಚು ಚಂದಾದಾರರನ್ನು ಹೊಂದಿದೆ. ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಬ್ರ್ಯಾಂಡ್‌ಗಳನ್ನು ಪ್ರಚಾರ  ಮಾಡುತ್ತಾರೆ. ಇದಕ್ಕೆ ತಿಂಗಳಿಗೆ 30 ಲಕ್ಷ ರೂಪಾಯಿವರೆಗೂ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.

ಸಿತಾರಾ ಅವರು ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಟ’ ಸಿನಿಮಾದ ಪ್ರಮೋಷನಲ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಸಿತಾರಾ ಅವರು ಸಿನಿಮಾ ರಂಗಕ್ಕೆ ಕಾಲಿಡುವ ಆಲೋಚನೆಯಲ್ಲಿ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಗುಂಟೂರು ಸಿನಿಮಾ’ ಬಜೆಟ್​ಗಿಂತಲೂ ಮಹೇಶ್ ಬಾಬು ಸಂಭಾವನೆ ಹೆಚ್ಚು!

ಸಿತಾರಾಗೆ ಈಗಿನ್ನೂ 12 ವರ್ಷ ವಯಸ್ಸು. ಅವರು ಈಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಡಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಅದು ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅವರು ಸದ್ಯ ಶಿಕ್ಷಣದ ಕಡೆ ಗಮನಹರಿಸುತ್ತಿದ್ದಾರೆ. ಸಿತಾರಾ ಅವರು ಮಹೇಶ್ ಬಾಬು ಜೊತೆ ಆಗಾಗ ವಿದೇಶ ಪ್ರಯಾಣ ಬೆಳೆಸುತ್ತಾರೆ. ಸಿತಾರಾ ಕೂಡ ಸಾಥ್ ನೀಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Tue, 23 January 24