‘ಗುಂಟೂರು ಸಿನಿಮಾ’ ಬಜೆಟ್ಗಿಂತಲೂ ಮಹೇಶ್ ಬಾಬು ಸಂಭಾವನೆ ಹೆಚ್ಚು!
Mahesh Babu: ‘ಗುಂಟೂರು ಖಾರಂ’ ಸಿನಿಮಾದ ಬಜೆಟ್ ಎಷ್ಟು? ಆ ಸಿನಿಮಾಕ್ಕೆ ಮಹೇಶ್ ಬಾಬು ಪಡೆದ ಸಂಭಾವನೆ ಎಷ್ಟು?
ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಸಿನಿಮಾ’ (Gunturu Kaaram) ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಭಾರಿ ಪ್ರಮಾಣದ ಕಲೆಕ್ಷನ್ ಅನ್ನು ಸಿನಿಮಾ ಮಾಡಿಲ್ಲವಾದರೂ ಸಿನಿಮಾ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ಅಂತೂ, ಸಿನಿಮಾ ಯಶಸ್ವಿಯಾಗಿರುವ ಖುಷಿಗೆ ಚಿತ್ರತಂಡಕ್ಕೆ ತಮ್ಮ ಮನೆಯಲ್ಲಿ ಪಾರ್ಟಿ ಸಹ ನೀಡಿದ್ದಾರೆ. ಅಂದಹಾಗೆ ಈ ಸಿನಿಮಾ ನಿರ್ಮಾಣಕ್ಕೆ ಖರ್ಚಾದ ಒಟ್ಟು ಮೊತ್ತದಲ್ಲಿ ಅರ್ಧದಷ್ಟು ಮೊತ್ತವನ್ನು ಮಹೇಶ್ ಬಾಬು ಒಬ್ಬರಿಗೇ ಸಂಭಾವನೆ ರೂಪದಲ್ಲಿ ನೀಡಲಾಗಿದೆಯಂತೆ.
‘ಗುಂಟೂರು ಖಾರಂ’ ಪ್ರಚಾರ ಎಲ್ಲ ಸೇರಿಸಿ ಸುಮಾರು 200 ಕೋಟಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ವಿಕಿಪೀಡಿಯಾನಲ್ಲಿದೆ. ಇದರಲ್ಲಿ ಮಹೇಶ್ ಬಾಬು ಸೇರಿದಂತೆ ಇತರೆ ನಟರ ಸಂಭಾವನೆಯೂ ಸೇರಿದೆ. ಯಾವುದೇ ಭಾರಿ ಲೊಕೇಶನ್ಗಳಲ್ಲಿ, ದೊಡ್ಡ ಸೆಟ್ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿಲ್ಲ, ವಿಎಫ್ಎಕ್ಸ್ಗಳು ಸಹ ಸಿನಿಮಾದಲ್ಲಿಲ್ಲ. ಹಾಗಾಗಿ ಸಿನಿಮಾದ ಬಜೆಟ್ 200 ಕೋಟಿ ಅಲ್ಲ ಬದಲಿಗೆ 150 ರಿಂದ 160 ಆಗಿರಬಹುದೆಂಬ ಲೆಕ್ಕಾಚಾರವೂ ಇದೆ.
ಇನ್ನು ಈ ಸಿನಿಮಾಕ್ಕೆ ಮಹೇಶ್ ಬಾಬು ಭಾರಿ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ. ಮಾಹಿತಿಯಂತೆ ಸುಮಾರು 80 ಕೋಟಿ ರೂಪಾಯಿ ಸಂಭಾವನೆಯನ್ನು ಮಹೇಶ್ ಬಾಬು ಈ ಸಿನಿಮಾಕ್ಕೆ ಪಡೆದುಕೊಂಡಿದ್ದಾರಂತೆ. ಇದು ಸಿನಿಮಾದ ಒಟ್ಟು ಬಜೆಟ್ನ ಅರ್ಧದಷ್ಟು ಮೊತ್ತ. ಇತರೆ ನಟರ ಸಂಭಾವನೆ, ಪ್ರಚಾರವನ್ನು ಕೈಬಿಟ್ಟರೆ, ಸಿನಿಮಾದ ಚಿತ್ರೀಕರಣಕ್ಕೆ ಎಷ್ಟು ಖರ್ಚಾಗಿದೆಯೋ ಅದಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ಮಹೇಶ್ ಬಾಬು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಖಾಸಗಿ ಜೆಟ್, ಐಷಾರಾಮಿ ಮನೆ, ಸ್ವಂತ ಥಿಯೇಟರ್; ಮಹೇಶ್ ಬಾಬು ಒಟ್ಟೂ ಆಸ್ತಿ ಎಷ್ಟು?
ಮಹೇಶ್ ಬಾಬು, ಭಾರಿ ಸಂಖ್ಯೆಯ ಅಭಿಮಾನಿಗಳಿರುವ ನಟರಲ್ಲಿ ಒಬ್ಬರು. ಅದರಲ್ಲಿಯೂ ಮಹೇಶ್ ಬಾಬುಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಮಹೇಶ್ ಬಾಬು ಸಿನಿಮಾಕ್ಕೆ ಮಹಿಳೆಯರು, ಕುಟುಂಬಸ್ಥರು ಚಿತ್ರಮಂದಿರಕ್ಕೆ ಆಗಮಿಸುತ್ತಾರೆಂಭ ನಂಬಿಕೆ ಇದೆ. ಅಲ್ಲದೆ ಇತರೆ ನಟರ ಸಿನಿಮಾಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಮಹೇಶ್ ಬಾಬು ಸಿನಿಮಾಗಳ ಸ್ಯಾಟಲೈಟ್ ಹಕ್ಕು ಮಾರಾಟವಾಗುತ್ತದೆ ಎಂಬ ಮಾತು ಸಹ ಇದೆ. ಹಾಗಾಗಿ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಸ್ಟಾರ್ ಎಂದು ಇನ್ನೂ ಅನ್ನಿಸಿಕೊಳ್ಳದಿದ್ದರೂ ಸಹ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ.
ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಈ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಲು ತಯಾರಾಗುತ್ತಿದ್ದಾರೆ. ರಾಜಮೌಳಿ ಜೊತೆಗಿನ ಸಿನಿಮಾಕ್ಕೆ ಮಹೇಶ್ ಬಾಬು ಸುಮಾರು 200 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬುಗಿಂತಲೂ ಹೆಚ್ಚು ಸಂಭಾವನೆಯನ್ನು ರಾಜಮೌಳಿ ಪಡೆಯಲಿದ್ದಾರೆ ಎಂಬ ಮಾತು ಸಹ ಇದೆ. ಒಂದೊಮ್ಮೆ ಇದು ನಿಜವಾದರೆ ಸ್ಟಾರ್ ನಟನಿಗಿಂತಲೂ ನಿರ್ದೇಶಕ ಹೆಚ್ಚು ಸಂಭಾವನೆ ಪಡೆದಂತಾಗುತ್ತದೆ. ಇದು ಭಾರತ ಚಿತ್ರರಂಗದ ಅಪರೂಪದ ಘಟನೆಯಾಗಲಿದೆ.
‘ಗುಂಟೂರು ಖಾರಂ’ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ರಮ್ಯಕೃಷ್ಣ, ಪ್ರಕಾಶ್ ರೈ ಇನ್ನೂ ಹಲವು ನಟರು ಈ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ನಿರ್ಮಾಣ ಮಾಡಿದ್ದು ದಿಲ್ ರಾಜು ವಿತರಣೆ ಮಾಡಿದ್ದರು. ಸಿನಿಮಾದ ಕಲೆಕ್ಷನ್ 200 ಕೋಟಿಯನ್ನು ದಾಟಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ