ರಾಜಮೌಳಿಯಿಂದ ಪಾಸ್​ಪೋರ್ಟ್ ವಾಪಸ್ ಪಡೆದ ಮಹೇಶ್ ಬಾಬು

Mahesh Babu: ರಾಜಮೌಳಿ ಸಿನಿಮಾನಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಶುರುವಾಗುತ್ತಲೇ ಮಹೇಶ್ ಬಾಬು ಅವರ ಪಾಸ್​ಪೋರ್ಟ್ ಅನ್ನು ರಾಜಮೌಳಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮಹೇಶ್ ಬಾಬು, ರಾಜಮೌಳಿ ಅವರಿಂದ ತಮ್ಮ ಪಾಸ್​ಪೋರ್ಟ್ ಅನ್ನು ಮರಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಮೌಳಿಯಿಂದ ಪಾಸ್​ಪೋರ್ಟ್ ವಾಪಸ್ ಪಡೆದ ಮಹೇಶ್ ಬಾಬು
Mahesh Babu Rajamouli

Updated on: Apr 06, 2025 | 3:44 PM

ರಾಜಮೌಳಿ (Rajamouli) ಸಿನಿಮಾ ವಿಷಯಕ್ಕೆ ಬಂದರೆ ಬಹಳ ಶಿಸ್ತು. ಶೂಟಿಂಗ್ (Shooting) ಸಮಯದಲ್ಲಿ ನಟ-ನಟಿಯರು ಸೇರಿದಂತೆ ಇಡೀ ಚಿತ್ರತಂಡದ ಮೇಲೆ ಕಠಿಣವಾದ ನಿಯಮಗಳನ್ನು ಹೇರಿರುತ್ತಾರೆ. ಇದೀಗ ರಾಜಮೌಳಿ, ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಿದ್ದು, ಮಹೇಶ್ ಬಾಬು, ಸಿನಿಮಾ ಮುಗಿವ ವರೆಗೆ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸದಂತೆ ತಡೆದಿದ್ದಾರೆ. ಅಲ್ಲದೆ ಮಹೇಶ್ ಬಾಬು ಅವರ ಪಾಸ್​ಪೋರ್ಟ್ ಅನ್ನು ಸಹ ರಾಜಮೌಳಿಯೇ ಇರಿಸಿಕೊಂಡಿದ್ದರು. ಈ ಬಗ್ಗೆ ವಿಡಿಯೋ ಒಂದನ್ನು ಸಹ ರಾಜಮೌಳಿ ಅಪ್​ಲೋಡ್ ಮಾಡಿದ್ದರು.

ಮಹೇಶ್ ಬಾಬು ಜೊತೆಗೆ ಸಿನಿಮಾ ಪ್ರಾರಂಭ ಮಾಡಿದಾಗ ರಾಜಮೌಳಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಾವು ಮಹೇಶ್ ಬಾಬು ಅವರ ಪಾಸ್​ಪಫೋರ್ಟ್ ಅನ್ನು ಕಿತ್ತಿರಿಸಿಕೊಂಡಿರುವಾಗಿ, ಮಹೇಶ್ ಅವರ ಪಾಸ್​ಪೋರ್ಟ್ ಅನ್ನು ತೋರಿಸಿದ್ದರು. ಆದರೆ ಇದೀಗ ಮಹೇಶ್ ಬಾಬು, ಆ ಪಾಸ್​ಪೋರ್ಟ್ ಅನ್ನು ಮತ್ತೆ ರಾಜಮೌಳಿಯಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು, ಏರ್​ಪೋರ್ಟ್​ನಲ್ಲಿ ಕಾಯುತ್ತಿದ್ದ ಪಾಪರಾಟ್ಜಿಗಳಿಗೆ ತಮ್ಮ ಪಾಸ್​ಪೋರ್ಟ್ ಅನ್ನು ತೋರಿಸಿದ್ದಾರೆ. ಆ ಮೂಲಕ ತಾವು, ರಾಜಮೌಳಿಯಿಂದ ಪಾಸ್​ಪೋರ್ಟ್ ಅನ್ನು ಮರಳಿ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಮಹೇಶ್ ಬಾಬು, ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ಪ್ರವಾಸಕ್ಕೆ ತೆರಳಿದ್ದಾರೆ. ಹಾಗಾಗಿ ಅವರು ಪಾಸ್​ಪೋರ್ಟ್ ಅನ್ನು ವಾಪಸ್ ಪಡೆದಿದ್ದಾರೆ.

ಇದನ್ನೂ ಓದಿ
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?

ಮಹೇಶ್ ಬಾಬು ಮತ್ತು ಅವರ ಪುತ್ರಿ ಸಿತಾರಾ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸಿತಾರಾ ಹಾಗೂ ಮಹೇಶ್ ಬಾಬು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡರು. ಅದರ ಬೆನ್ನಲ್ಲೆ ಇಬ್ಬರೂ ಸಹ ಪ್ರವಾಸಕ್ಕೆ ತೆರಳಿದ್ದಾರೆ. ಅಸಲಿಗೆ ಮಹೇಶ್ ಬಾಬು, ತಮ್ಮ ಕುಟುಂಬದ ಜೊತೆಗೆ ಆಗಾಗ್ಗೆ ಪ್ರವಾಸಕ್ಕೆ ಹೋಗುತ್ತಲೇ ಇರುತ್ತಾರೆ. ವರ್ಷಕ್ಕೆ ಸುಮಾರು ನಾಲ್ಕೈದಾದರೂ ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ ಮಹೇಶ್ ಬಾಬು.

ಸಿನಿಮಾ ವಿಷಯಕ್ಕೆ ಮರಳುವುದಾದರೆ ಮಹೇಶ್ ಬಾಬು ನಟಿಸಿ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್. ಸಿನಿಮಾ, ಟ್ರಾವೆಲ್ ಅಡ್ವೇಂಚರ್ ಕತೆ ಒಳಗೊಂಡಿದೆ. ಸಿನಿಮಾದ ಬಹುಭಾಗ ಅರಣ್ಯದಲ್ಲಿ ಚಿತ್ರೀಕರಣಗೊಳ್ಳಲಿದೆ. ಹಲವು ದೇಶಗಳಲ್ಲಿ ಸಿನಿಮಾದ ಕತೆ ನಡೆಯಲಿದ್ದು, ವಿಶ್ವದ ಹಲವು ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗಷ್ಟೆ ಅಸ್ಸಾಂನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಮುಂದಿನ ಹಂತದ ಚಿತ್ರೀಕರಣ ವಿದೇಶದಲ್ಲಿ ನಡೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sun, 6 April 25