ಲೀಕ್ ಆಯ್ತು ಮಹೇಶ್ ಬಾಬು-ರಾಜಮೌಳಿ ಸಿನಿಮಾ ಸೆಟ್ ಫೋಟೋ; ಹೇಗಿದೆ ನೋಡಿ ಲುಕ್

ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಮುಂದಿನ ಚಿತ್ರದ ಶೂಟ್ ಕೀನ್ಯಾದಲ್ಲಿ ನಡೆಯುತ್ತಿದೆ. ಶೂಟಿಂಗ್ ಸಮಯದಲ್ಲಿ ಸೆಟ್ ಫೋಟೋಗಳು ಲೀಕ್ ಆಗಿವೆ. ಇದು ರಾಜಮೌಳಿ ಅವರನ್ನು ಕಳವಳಗೊಳಿಸಿದೆ. ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನವೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಲೀಕ್ ಆದ ಫೋಟೋಗಳಲ್ಲಿ ಮಹೇಶ್ ಬಾಬು ಅವರ ಲುಕ್ ಕೂಡ ಬಹಿರಂಗಗೊಂಡಿದೆ.

ಲೀಕ್ ಆಯ್ತು ಮಹೇಶ್ ಬಾಬು-ರಾಜಮೌಳಿ ಸಿನಿಮಾ ಸೆಟ್ ಫೋಟೋ; ಹೇಗಿದೆ ನೋಡಿ ಲುಕ್
ಮಹೇಶ್ ಬಾಬು

Updated on: Sep 05, 2025 | 12:37 PM

ಮಹೇಶ್ ಬಾಬು ಹಾಗೂ ರಾಜಮೌಳಿ (SS Rajamouli) ಅವರು ತಮ್ಮ ಮುಂದಿನ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಕೀನ್ಯಾದಲ್ಲಿ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ನವೆಂಬರ್​​ನಲ್ಲಿ ಅಪ್​ಡೇಟ್ ಕೊಡೋದಾಗಿ ರಾಜಮೌಳಿ ಹೇಳಿದ್ದರು. ಅದಕ್ಕೂ ಮೊದಲೇ ಸಿನಿಮಾಗೆ ದೊಡ್ಡ ಹಿನ್ನಡೆ ಆಗಿದೆ. ಈ ಸಿನಿಮಾದ ಸೆಟ್ ಫೋಟೋ ಲೀಕ್ ಆಗಿದೆ. ಇದು ರಾಜಮೌಳಿ ಚಿಂತೆಗೆ ಕಾರಣ ಆಗಿದೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಶೂಟ್ ಆರಂಭ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ಸಿನಿಮಾದ ಟೈಟಲ್ ಕೂಡ ರಿವೀಲ್ ಆಗಿಲ್ಲ. ಹೀಗಿರುವಾಗಲೇ ಕೆಲವರು ಸಿನಿಮಾದ ಸೆಟ್ ಫೋಟೋಗಳನ್ನು ಕದ್ದು ಬಿಡುವ ಕೆಲಸ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣ ಆಗಿದೆ.

ಇದನ್ನೂ ಓದಿ
ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಸಿನಿಮಾ ಸೆಟ್​ಗಳಲ್ಲಿ ರಾಜಮೌಳಿ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಶೂಟ್ ವೇಳೆ ಯಾರೂ ಮೊಬೈಲ್ ತರದಂತೆ ಅವರು ಆಗ್ರಹಿಸುತ್ತಾರೆ. ಆದಾಗ್ಯೂ ಕೆಲವರು ಕದ್ದು ಮೊಬೈಲ್ ಬಳಕೆ ಮಾಡಿದ ಉದಾಹರಣೆ ಇದೆ. ಇದುವೇ ಈಗ ಸಿನಿಮಾ ತಂಡಕ್ಕೆ ಮುಳುವಾಗಿ ಪರಿಣಮಿಸಿದೆ.

ಮಹೇಶ್ ಬಾಬು ಅವರು ಕೀನ್ಯಾದಲ್ಲಿ ಸಿಂಹದ ಮುಂದೆ ಕೊಡಲಿ ಹಿಡಿದು ನಿಂತಿರೋದು ಫೋಟೋದಲ್ಲಿ ಇದೆ. ಇದರಲ್ಲಿ ಅವರ ಲುಕ್ ಕೂಡ ರಿವೀಲ್ ಆಗಿದೆ. ಕೆಲವರು ಇದನ್ನು ಎಐನಲ್ಲಿ ಎಡಿಟ್ ಕೂಡ ಮಾಡಿ, ಮಹೇಶ್ ಬಾಬು ಲುಕ್ ಹೇಗಿರಲಿದೆ ಎಂಬುದನ್ನು ಊಹಿಸಿ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: 120 ದೇಶಗಳಲ್ಲಿ ಬಿಡುಗಡೆ ಆಗಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ

ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರು ‘ಎಸ್​ಎಸ್​ಎಂಬಿ 29’ ಚಿತ್ರದಲ್ಲಿ ಇದ್ದಾರೆ. ಈ ಸಿನಿಮಾಗೆ ಇನ್ನೂ ಅಧಿಕೃತ ಟೈಟಲ್ ಘೋಷಣೆ ಆಗಿಲ್ಲ. ನವೆಂಬರ್​ನಲ್ಲಿ ಈ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ಹೇಳಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.