AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ರಿಷಬ್ ಶೆಟ್ಟಿ

‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 2ಕ್ಕೆ ತೆರೆಕಾಣಲಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಅನೇಕ ಅಪಾಯಕಾರಿ ಸ್ಟಂಟ್‌ಗಳನ್ನು ಸ್ವತಃ ಮಾಡಿದ್ದಾರೆ ಎಂದು ಚಿತ್ರದ ಸ್ಟಂಟ್ ಕೊರಿಯೋಗ್ರಾಫರ್ ಅರುಣ್ ರಾಜ್ ತಿಳಿಸಿದ್ದಾರೆ. ಕಳರಿಪಯಟ್ಟು, ಖಡ್ಗ ಯುದ್ಧ, ಕುದುರೆ ಸವಾರಿ ಸೇರಿದಂತೆ ಹಲವು ಸವಾಲಿನ ಸನ್ನಿವೇಶಗಳನ್ನು ಅವರು ನಿಭಾಯಿಸಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ರಿಷಬ್ ಶೆಟ್ಟಿ
ರಿಷಬ್
ರಾಜೇಶ್ ದುಗ್ಗುಮನೆ
|

Updated on: Sep 05, 2025 | 11:51 AM

Share

‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್​ಗೆ ಇನ್ನು ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಈ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಮೊದಲ ಭಾಗ ಹಿಟ್ ಆಗಿದ್ದರಿಂದ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹೊಂಬಾಳೆ ಫಿಲ್ಮ್ಸ್​ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಚಿತ್ರವನ್ನು ರಿಷಬ್ (Rishab Shetty) ಅವರು ನಿರ್ದೇಶಿಸಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ದೊಡ್ಡ ರಿಸ್ಕ್ ಒಂದನ್ನು ತೆಗೆದುಕೊಂಡಿದ್ದಾರೆ.

‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ರಿಷಬ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಕೈಗೆ ಎತ್ತಿಕೊಂಡರು. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಕಾರಣದಿಂದ ರಿಷಬ್ ಅವರು ಹೆಚ್ಚು ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಸ್ಟಂಟ್​ಗಳನ್ನು ಸ್ವತಃ ರಿಷಬ್ ಅವರೇ ಮಾಡಿದ್ದಾರಂತೆ.

ಈ ಚಿತ್ರದ ಸ್ಟಂಟ್ ಕೊರಿಯೋಗ್ರಾಫ್ ಅರುಣ್ ರಾಜ್ ಈ ವಿಚಾರ ರಿವೀಲ್ ಮಾಡಿದ್ದಾರೆ. ‘ನಾವು ರಿಷಬ್​ಗೆ ಬಾಡಿ ಡಬಲ್ (ಕಷ್ಟದ ಸ್ಟಂಟ್​ಗಳಲ್ಲಿ ಬೇರೆ ವ್ಯಕ್ತಿ ಬಳಕೆ ಮಾಡೋದು) ಮಾಡಿಲ್ಲ. ಅವರು ಹಲವು ಕಷ್ಟದ ಸ್ಟಂಟ್​ಗಳನ್ನು ಮಾಡಿದ್ದಾರೆ. ಕಳರಿಪಯಟ್ಟುನ ಅವರೇ ಕಲಿತಿದ್ದಾರೆ. ಖಡ್ಗದ ಫೈಟ್, ಹಾರ್ಸ್​ ರೈಡ್ ಮಾಡಿದ್ದಾರೆ. ನಾನು ಸಾಕಷ್ಟು ನಟನರ ಜೊತೆ ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ಮಾಡುತ್ತೇನೆ ಎಂದು ಅವರು ಹೇಳಲ್ಲ. ಸರಿಯಾಗಿ ಮೂಡಿಬರುವವರೆಗೂ ಮಾಡುತ್ತೇನೆ ಎಂಬುದು ಅವರ ಮನಸ್ಥಿತಿ’ ಎಂದಿದ್ದಾರೆ.

ಇದನ್ನೂ ಓದಿ
Image
ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
Image
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
Image
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
Image
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಸಾಮಾನ್ಯವಾಗಿ ಕಷ್ಟದ ಸ್ಟಂಟ್​ಗಳನ್ನು ಮಾಡುವಾಗ ಪೆಟ್ಟಾದರೆ ಕಷ್ಟ ಎಂಬ ಭಯದಿಂದ ಡ್ಯೂಪ್ ಬಳಕೆ ಮಾಡಲಾಗುತ್ತದೆ. ಇದು ಬಹುತೇಕ ಸಿನಿಮಾಗಳಲ್ಲಿ ನಡೆದಿದೆ. ಆದರೆ, ರಿಷಬ್ ಆ ರೀತಿ ಅಲ್ಲ. ಅವರು ಈ ಚಿತ್ರಕ್ಕಾಗಿ ದೊಡ್ಡ ಚಾಲೆಂಜ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್​ 1’ ಎದುರು ಸಿನಿಮಾ ರಿಲೀಸ್ ಮಾಡೋ ದೊಡ್ಡ ನಿರ್ಧಾರ ತೆಗೆದುಕೊಂಡ ಸ್ಟಾರ್ ಹೀರೋ

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಇದೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.