Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗಿಂತಲೂ ಕಿರಿಯ ನಟನ ಅಪ್ಪಟ ಅಭಿಮಾನಿಯಂತೆ ಸೂಪರ್ ಸ್ಟಾರ್ ಮಹೇಶ್ ಬಾಬು

Mahesh Babu: ನಟ ಮಹೇಶ್ ಬಾಬು ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಹಾಲಿವುಡ್ ನಟರನ್ನೂ ಮೀರಿಸುವ ಅಂದವುಳ್ಳ ಮಹೇಶ್ ಬಾಬು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲ ಸಿನಿಮಾ ನಟರೂ ಸಹ ಮಹೇಶ್ ಬಾಬು ಅವರ ಅಭಿಮಾನಿಗಳು. ಆದರೆ ಮಹೇಶ್ ಬಾಬು ಯಾರ ಅಭಿಮಾನಿ? ಇಲ್ಲಿದೆ ಉತ್ತರ...

ತನಗಿಂತಲೂ ಕಿರಿಯ ನಟನ ಅಪ್ಪಟ ಅಭಿಮಾನಿಯಂತೆ ಸೂಪರ್ ಸ್ಟಾರ್ ಮಹೇಶ್ ಬಾಬು
Mahesh Babu
Follow us
ಮಂಜುನಾಥ ಸಿ.
|

Updated on:Mar 13, 2025 | 6:38 PM

ಮಹೇಶ್ ಬಾಬು, ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ನೋಡಲು ಯಾವ ಹಾಲಿವುಡ್ ಹೀರೋಗಳಿಗೂ ಕಡಿಮೆ ಇಲ್ಲದ ಮಹೇಶ್ ಬಾಬು, ಭಾರತದ ಅತ್ಯಂತ ಸುಂದರ ನಟರಲ್ಲಿ ಮೊದಲಿಗರು. ತೆಲುಗು ಬಿಟ್ಟು ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಿರದ ಮಹೇಶ್ ಬಾಬು, ಇದೇ ಮೊದಲ ಬಾರಿಗೆ ರಾಜಮೌಳಿ ಜೊತೆಗೂಡಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಮಹೇಶ್ ಬಾಬುಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಹಲವು ಸಿನಿಮಾ ನಟರೂ ಸಹ ಮಹೇಶ್ ಬಾಬು ಅಭಿಮಾನಿಗಳು. ಆದರೆ ಮಹೇಶ್ ಬಾಬು ಬಹುವಾಗಿ ಮೆಚ್ಚಿಕೊಳ್ಳುವ ನಟ ಯಾರು ಗೊತ್ತೆ?

ಸ್ಟಾರ್ ನಟರು ಸಾಮಾನ್ಯವಾಗಿ ಕಿರಿಯ ನಟರನ್ನು ತಮ್ಮ ಮೆಚ್ಚಿನ ಎಂದು ಹೇಳುವುದಿಲ್ಲ. ತಮಗಿಂತಲೂ ಹಿರಿಯ ನಟರನ್ನೊ ಅಥವಾ ಬ್ಲಾಕ್ ಆಂಡ್ ವೈಟ್ ಕಾಲದ ನಟರನ್ನು ತಮ್ಮ ಮೆಚ್ಚಿನ ನಟ ಎಂದು ಬಿಡುತ್ತಾರೆ. ಅನವಶ್ಯಕವಾಗಿ ಕಿರಿಯ ನಟರಿಗೆ ಬಿಲ್ಡಪ್ ಕೊಡುವುದೇಕೆ ಎಂಬ ಉದ್ದೇಶ ಅವರದ್ದಿರಬಹುದು. ಆದರೆ ಮಹೇಶ್ ಬಾಬು ಹಾಗಲ್ಲ, ಅವರಿಗೆ ತಮಗಿಂತಲೂ ಕಿರಿಯ ನಟನೊಬ್ಬನ ನಟನೆ ಎಂದರೆ ಬಹಳ ಇಷ್ಟವಂತೆ. ಈ ಬಗ್ಗೆ ಸ್ವತಃ ಆ ನಟನ ಮುಂದೆಯೇ ಈ ವಿಷಯ ಹೇಳಿಕೊಂಡಿದ್ದರಂತೆ.

ನಟ ಮಹೇಶ್ ಬಾಬುಗೆ ಬಾಲಿವುಡ್​ ನಟ ರಣ್​ಬೀರ್ ಕಪೂರ್ ನಟನೆಯೆಂದರೆ ಬಹಳ ಇಷ್ಟವಂತೆ. ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ನನಗೆ ರಣ್​ಬೀರ್ ಕಪೂರ್ ನಟನೆ ಬಹಳ ಇಷ್ಟ. ಅವರೊಬ್ಬ ಅತ್ಯದ್ಭುತವಾದ ನಟ. ಭಾರತದಲ್ಲೇ ಅದ್ಭುತವಾದ ನಟ ಅವರು ಎಂದಿದ್ದಾರೆ. ಪಾರ್ಟಿಯೊಂದರಲ್ಲಿ ಅವರು ಸಿಕ್ಕಿದ್ದಾಗ ನಾನೇ ಈ ವಿಷಯವನ್ನು ಅವರಿಗೆ ಹೇಳಿದ್ದೆ, ಆದರೆ ಆಗ ಅವರು ನನ್ನ ಮಾತನ್ನು ನಂಬಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ

ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸಿನಿಮಾ. ಸಿನಿಮಾದ ಚಿತ್ರೀಕರಣ ಇದೀಗ ಒಡಿಸ್ಸಾನಲ್ಲಿ ನಡೆಯುತ್ತಿದೆ. ಇನ್ನು ನಟ ರಣ್​ಬೀರ್ ಕಪೂರ್ ಪ್ರಸ್ತುತ ರಾಮಾಯಣ ಆಧರಿಸಿದ ಸಿನಿಮಾ ಹಾಗೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆಂಡ್ ವಾರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Thu, 13 March 25