ಮಹೇಶ್ ಬಾಬು ತಲೆಯಲ್ಲಿರೋದು ನಿಜವಾದ ಕೂದಲಲ್ಲ; ಇಲ್ಲಿದೆ ಅಚ್ಚರಿ ವಿವರ

ಮಹೇಶ್ ಬಾಬು ಅವರು ಇಂದು 50ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಯೌವ್ವನದ ಹೊಳಪು ಮತ್ತು ಸ್ಟೈಲಿಶ್ ಕೂದಲು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ತಮ್ಮ ಕುಟುಂಬದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಇದ್ದರೂ, ಮಹೇಶ್ ಬಾಬು ವಿಶೇಷ ತಂತ್ರಜ್ಞಾನದ ಮೂಲಕ ತಮ್ಮ ಕೂದಲನ್ನು ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.

ಮಹೇಶ್ ಬಾಬು ತಲೆಯಲ್ಲಿರೋದು ನಿಜವಾದ ಕೂದಲಲ್ಲ; ಇಲ್ಲಿದೆ ಅಚ್ಚರಿ ವಿವರ
ಮಹೇಶ್ ಬಾಬು
Updated By: ರಾಜೇಶ್ ದುಗ್ಗುಮನೆ

Updated on: Aug 09, 2025 | 8:00 AM

ಮಹೇಶ್ ಬಾಬು ಅವರು ಇಂದು (ಆಗಸ್ಟ್ 8) 50ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈಗಲೂ ಮಹೇಶ್ ಬಾಬು ಹ್ಯಾಂಡ್ಸಮ್ ಆಗಿ ಕಾಣಿಸುತ್ತಾರೆ.  ಅವರಿಗೆ 50 ವರ್ಷ ಆಯಿತು ಎಂದರೆ ಯಾರೆಂದರೆ ಯಾರೂ ನಂಬಲು ಸಾಧ್ಯವೇ ಇಲ್ಲ. ಮಹೇಶ್ ಬಾಬು ಹುಟ್ಟಿದ್ದು 1975ರಲ್ಲಿ. ಪ್ರತಿ ಚಿತ್ರಕ್ಕೆ ಮಹೇಶ್ ಬಾಬು (Mahesh Babu) ಹೇರ್​​ಸ್ಟೈಲ್ ಬೇರೆ ಬೇರೆ ರೀತಿ ಇರುತ್ತದೆ. ಅವರದ್ದು ನಿಜವಾದ ಕೂದಲೋ ಅಥವಾ ಫೇಕ್ ಕೂದಲೋ ಎನ್ನುವ ಬಗ್ಗೆ ಚರ್ಚೆಗಳು ಮೊದಲಿನಿಂದಲೂ ಇವೆ. ಆ ಬಗ್ಗೆ ಇಲ್ಲಿದೆ ಉತ್ತರ.

1999ರಲ್ಲಿ ಮಹೇಶ್ ಬಾಬು ಹೀರೋ ಆಗಿ ಅಭಿನಯಿಸಿದ ಮೊದಲ ಸಿನಿಮಾ ‘ರಾಜಕುಮಾರುಡು’ ರಿಲೀಸ್ ಆಯಿತು. ಆ ಬಳಿಕ ಮಹೇಶ್ ಬಾಬು ಸಿನಿಮಾದಿಂದ ಸಿನಿಮಾಗೆ ಹೇರ್​ಸ್ಟೈಲ್ ಬದಲಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ರಾಜಮೌಳಿ ಸಿನಿಮಾಗಾಗಿ ಉದ್ದನೆಯ ಕೂದಲಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಸಾಕಷ್ಟು ಹೈಲೈಟ್ ಆಗಿದೆ ಎಂದೇ ಹೇಳಬಹುದು.

ಮಹೇಶ್ ಬಾಬು ತಂದೆ ಕೃಷ್ಣ ಅವರ ತಲೆಯಲ್ಲಿ ಕೂದಲು ಇರಲಿಲ್ಲ. ಮಹೇಶ್ ಬಾಬು ಸಹೋದರ ರಮೇಶ್ ಬಾಬು ತಲೆಯಲ್ಲೂ ಕೂದಲು ಇಲ್ಲ. ಅವರ ಇಡೀ ಕುಟುಂಬದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಇದೆ. ಹಾಗಿದ್ದರೂ ಮಹೇಶ್ ಬಾಬುಗೆ ಮಾತ್ರ ಇಷ್ಟು ಒಳ್ಳೆಯ ಕೂದಲು ಇರೋಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರಿಗೆ ಮೂಡಿರಬಹುದು.

ಇದನ್ನೂ ಓದಿ
ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ
ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಮಹೇಶ್ ಬಾಬು ವಿಗ್ ಹಾಕೋದಿಲ್ಲ. ಆದರೆ, ಇದಕ್ಕೆ ಅವರು ಬೇರೆ ತಂತ್ರಜ್ಞಾನ ಬಳಸಿದ್ದಾರೆ. ಮಹೇಶ್ ಬಾಬು ಆಗಾಗ ವಿದೇಶಕ್ಕೆ ಹೋಗಿ ಬರುತ್ತಾರೆ. ಈ ವೇಳೆ ಅವರು ವೈದ್ಯಕೀಯ ಮೊರೆ ಹೋಗುತ್ತಾರೆ. ಮಹೇಶ್ ಬಾಬು ಕ್ಯೂ 6 ತಂತ್ರಜ್ಞಾನ ಬಳಕೆ ಮಾಡಿ ಅವರು ಕೂದಲು ಕಾಣುವಂತೆ ಮಾಡಿಕೊಂಡಿದ್ದಾರೆ. ಈ ತಂತ್ರಜ್ಞಾನದಿಂದ ಕೂದಲ ಪ್ಯಾಚ್​ಗಳನ್ನು ತಲೆಯ ಮೇಲೆ ಫಿಕ್ಸ್ ಮಾಡಲಾಗುತ್ತದೆ. ಇದು ನಿಜವಾದ ಕೂದಲಂತೆ ಕಾಣುತ್ತದೆ.

ಮಹೇಶ್ ಬಾಬು ಅವರ ತಂದೆ ಹಾಗೂ ತಾಯಿ 2022ರಲ್ಲಿ ನಿಧನ ಹೊಂದಿದರು. ಆ ಸಂದರ್ಭದಲ್ಲಿ ಅವರು ತಲೆಬೋಳಿಸಿಕೊಂಡಿರಲಿಲ್ಲ. ಅವರು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಮತ್ತೊಂದು ಕಾರಣ ಎಂದರೆ ಅವರ ಕೂದಲು ಸಂಪೂರ್ಣವಾಗಿ ನೈಜವಾದುದ್ದು ಅಲ್ಲ. ಈ ಕಾರಣಕ್ಕೆ ಅವರು ತಲೆ ಬೋಳಿಸಿಕೊಂಡಿಲ್ಲ.

ಇದನ್ನೂ ಓದಿ: ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ

ಮಹೇಶ್ ಬಾಬು ಅವರು ‘ಎಸ್​ಎಸ್​ಎಂಬ 29’ ಸಿನಿಮಾದ ಭಾಗವಾಗಿದ್ದಾರೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.