Thangalaan: ಆ ಸಿನಿಮಾ ಚಿತ್ರೀಕರಣ ಮುಗಿಸಿ ಐದು ವೈದ್ಯರಿಂದ ಚಿಕಿತ್ಸೆ ಪಡೆದೆ: ಮಾಳವಿಕ ಮೋಹನನ್

Thangalaan: ಕೋಲಾರದ ಬಿಸಿಲು, ದೂಳಿನಲ್ಲಿ ಶೂಟಿಂಗ್ ಮಾಡಿ ಅನಾರೋಗ್ಯಕ್ಕೆ ಗುರಿಯಾಗಿದ್ದ ನಟಿ ಮಾಳವಿಕಾ ಮೋಹನನ್, ಶೂಟಿಂಗ್ ಬಳಿಕ ಐದು ವೈದ್ಯರಿಂದ ಚಿಕಿತ್ಸೆ ಪಡೆದ ಬಗ್ಗೆ ಮಾತನಾಡಿದ್ದಾರೆ.

Thangalaan: ಆ ಸಿನಿಮಾ ಚಿತ್ರೀಕರಣ ಮುಗಿಸಿ ಐದು ವೈದ್ಯರಿಂದ ಚಿಕಿತ್ಸೆ ಪಡೆದೆ: ಮಾಳವಿಕ ಮೋಹನನ್
Follow us
ಮಂಜುನಾಥ ಸಿ.
|

Updated on: Jul 26, 2024 | 10:36 AM

ಸೆಟ್​ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದು ನಟ-ನಟಿಯರಿಗೆ ಬಹಳ ಸುಲಭದ ಕೆಲಸ, ಎಸಿ, ಮಳೆ, ದೂಳಿನಿಂದ ರಕ್ಷಣೆ ಎಲ್ಲವೂ ಇರುತ್ತದೆ. ಆದರೆ ಔಟ್​ಡೋರ್ ಶೂಟಿಂಗ್ ಎಂದರೆ ನಟ-ನಟಿಯರಿಗೆ ಬಹುತೇಕ ನರಕವೇ. ಅದರಲ್ಲೂ ಆಕ್ಷನ್ ದೃಶ್ಯಗಳು ಔಟ್​ಡೋರ್​ನಲ್ಲಿ ಶೂಟ್ ಆದರೆ ಕತೆ ಮುಗಿಯಿತೆಂದೇ ಲೆಕ್ಕ. ಇಂದಿನ ಬಹುತೇಕ ಬಜೆಟ್ ಸಿನಿಮಾಗಳು ಸೆಟ್​ಗಳಲ್ಲಿಯೇ ಚಿತ್ರೀಕರಣಗೊಳ್ಳುತ್ತವೆ. ಆದರೆ ಇಂದಿಗೂ ಹಲವು ನಿರ್ದೇಶಕರು ತಮ್ಮ ಸಿನಿಮಾಗಳನ್ನು ಔಟ್​ಡೋರ್​ನಲ್ಲಿಯೇ ಚಿತ್ರೀಕರಣ ಮಾಡುತ್ತಾರೆ. ಅದರಲ್ಲಿ ಒಬ್ಬರು ಪಾ ರಂಜಿತ್.

ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಾಲನ್’ ಸಿನಿಮಾದ ಚಿತ್ರೀಕರಣ ಕರ್ನಾಟಕದ ಕೋಲಾರದಲ್ಲಿ ನಡೆಯಿತು. ಬಹುದಿನಗಳು ಇದೇ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಯ್ತು. ಇದು ಪೀರಿಯಡ್ ಡ್ರಾಮಾ ಆಗಿದ್ದರಿಂದ ಬಿಸಿಲು, ದೂಳಿನಲ್ಲಿ ನಟ-ನಟಿಯರು ಗಂಟೆಗಟ್ಟಲೆ ಮೇಕಪ್ ಧರಿಸಿ ಕೂತಿರಬೇಕಿತ್ತು. ಈ ಸಿನಿಮಾದಲ್ಲಿ ನಟಿಸಿರುವ ನಟಿ ಮಾಳವಿಕ ಮೋಹನನ್, ಸಿನಿಮಾದ ಚಿತ್ರೀಕರಣ ಮುಗಿಸಿದ ಮೇಲೆ ಐದು ಬೇರೆ ಬೇರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕಾಯ್ತಂತೆ. ಚಿತ್ರೀಕರಣದ ಸಮಯದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

‘ಕೋಲಾರದಲ್ಲಿ ಹಲವು ದಿನಗಳ ಕಷ್ಟದ ಶೂಟ್ ಮುಗಿಸಿದ ಬಳಿಕ ನನ್ನ ಆರೋಗ್ಯ ಹದಗೆಟ್ಟಿತು. ಐದು ವೈದ್ಯರುಗಳ ಬಳಿ ನಾನು ಚಿಕತ್ಸೆ ಪಡೆಯಬೇಕಾಗಿ ಬಂತು. ಚರ್ಮ, ಕಣ್ಣು ತಜ್ಞರನ್ನು ಸಹ ಭೇಟಿ ಮಾಡಿ ಪರೀಕ್ಷೆಗೆ ಒಳಪಟ್ಟೆ’ ಎಂದು ಮಾಳವಿಕಾ ಮೋಹನನ್ ಹೇಳಿಕೊಂಡಿದ್ದಾರೆ. ‘ಕೋಲಾರದ ಬಿಸಿಲಿಗೆ ನಾನು ಬಳಲಿಬಿಟ್ಟಿದ್ದೆ. ಪ್ರತಿ ದಿನ ಐದು ಗಂಟೆ ಕಾಲ ಮೇಕಪ್​ಗಾಗಿ ಕುಳಿತುಕೊಳ್ಳುತ್ತಿದ್ದೆ. ಅದಾದ ಬಳಿಕವೂ ಬಹುತೇಕ ನಾನು ಬಿಸಿಲಿನಲ್ಲಿಯೇ ಇರಬೇಕಿತ್ತು. ಅಲ್ಲಿ ವಿಪರೀತ ದೂಳು ಬೇರೆ ಆ ದೂಳಿನಲ್ಲಿಯೇ ಚಿತ್ರೀಕರಣ ಮಾಡಬೇಕಿತ್ತು’ ಎಂದು ನೆನಪು ಮಾಡಿಕೊಂಡಿದ್ದಾರೆ ಮಾಳವಿಕ.

ಇದನ್ನೂ ಓದಿ:ಈ ಪರಭಾಷೆ ನಟ-ನಟಿಯರ ವಿದ್ಯಾರ್ಹತೆ ಏನು? ಪ್ರಭಾಸ್, ವಿಕ್ರಂ ಓದಿರುವುದೆಷ್ಟು?

‘ಒಂದು ದಿನ ಮೇಕಪ್ ಎಲ್ಲ ಧರಿಸಿ ಕುಳಿತಿದ್ದೆ. ಆಗ ಸೆಟ್​ನಲ್ಲಿ ಒಂದು ದೊಡ್ಡ ಎಮ್ಮೆ ಕಾಣಿಸಿತು. ಅದನ್ನು ತೋರಿಸಿದ ನಿರ್ದೇಶಕ ರಂಜಿತ್, ಎಮ್ಮೆ ಹೇಗಿದೆ ಎಂದು ಕೇಳಿದರು. ಚೆನ್ನಾಗಿದೆ, ದಷ್ಟಪುಷ್ಟವಾಗಿದೆ ಎಂದೆ. ಹೋಗಿ ಅದರ ಮೇಲೆ ಕುಳಿತುಕೊಳ್ಳಿ ಎಂದರು. ನನಗೆ ಮೊದಲು ನಂಬಲಾಗಲಿಲ್ಲ. ಬಳಿಕ ಮತ್ತೊಮ್ಮೆ ರಂಜಿತ್ ಅದನ್ನೇ ಹೇಳಿದಾಗ ನಾನು ಗಾಬರಿಯಾದೆ. ಇಲ್ಲಿಯವರೆಗೆ ನಾನು ಎಮ್ಮೆಯನ್ನು ಮುಟ್ಟಿರಲೂ ಇಲ್ಲ. ಈಗ ಹೋಗಿ ಎಮ್ಮೆ ಮೇಲೆ ಕುಳಿತುಕೊಳ್ಳುವುದು ಹೇಗೆ ಎಂದು ಆತಂಕ ಪಟ್ಟೆ. ಭಯದಲ್ಲೇ ಆ ಶಾಟ್ ಮುಗಿಸಿದೆ’ ಎಂದಿದ್ದಾರೆ ಮಾಳವಿಕಾ ಮೋಹನನ್.

ಮಾಳವಿಕಾ ಮೋಹನನ್, ‘ತಂಗಾಲನ್’ ಸಿನಿಮಾದಲ್ಲಿ ‘ಆರತಿ’ ಹೆಸರಿನ ವಿಚಿತ್ರ ಹೆಂಗಸಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ನಡೆಯುವ ಪ್ರದೇಶದಲ್ಲಿ ವಾಸವಿರುವ ಜನಾಂಗವನ್ನು ಕಾಡುವ ದೆವ್ವದ ರೀತಿಯ ಪಾತ್ರವದು. ‘ತಂಗಾಲನ್’ ಸಿನಿಮಾದಲ್ಲಿ ವಿಕ್ರಂ ನಾಯಕರಾಗಿ ನಟಿಸಿದ್ದಾರೆ. ಸಿನಿಮಾವನ್ನು ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಕೋಲಾರದ ಚಿನ್ನದ ಗಣಿಯ ಕುರಿತ ಕತೆ ಒಳಗೊಂಡಿದೆ. ಮೊದಲ ಬಾರಿಗೆ ಬ್ರಿಟೀಷರು ಆ ಭಾಗದಿಂದ ಚಿನ್ನ ಹೇಗೆ ತೆಗೆದರು, ಅದಕ್ಕಾಗಿ ಸ್ಥಳೀಯರ ಮೇಲೆ ಎಂಥಹಾ ದೌರ್ಜನ್ಯ ಮಾಡಿದರು ಎಂಬುದು ಸಿನಿಮಾದ ಕತೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!