ವೈದ್ಯನ ಮನೆಗೆ ಕರೆಸಿ ಹಲ್ಲೆ, ದರೋಡೆ: ನಟಿ ಮತ್ತು ನಟನ ಬಂಧನ

ವೈದ್ಯರೊಬ್ಬರ ಮೇಲೆ ಹಲ್ಲೆ ಮತ್ತು ದರೋಡೆ ಮಾಡಿದ ಪ್ರಕರಣದಲ್ಲಿ ಮಲಯಾಳಂನ ಜನಪ್ರಿಯ ನಟಿ ಹಾಗೂ ನಟರನ್ನು ಬಂಧಿಸಿದ್ದಾರೆ. ಮಲಯಾಳಂ ನಟರಾದ ಬಿಬಿನ್ ಪೆರುಂಪಲ್ಲಿ ಮತ್ತು ನಟಿ ಅತುಲ್ಯಾ ಚಂದ್ರ ಸೇರಿದಂತೆ ಮೂವರನ್ನು ಕೊಚ್ಚಿ ಬಳಿಯ ಕಡವಂತರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಜನರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ತನಿಖೆ ಚಾಲ್ತಿಯಲ್ಲಿದೆ.

ವೈದ್ಯನ ಮನೆಗೆ ಕರೆಸಿ ಹಲ್ಲೆ, ದರೋಡೆ: ನಟಿ ಮತ್ತು ನಟನ ಬಂಧನ
Kerala Police

Updated on: Nov 06, 2026 | 5:50 PM

ಮುಖ್ಯಾಂಶಗಳು

  • ಮಲಯಾಳಂ ನಟ-ನಟಿ ಬಂಧನ
  • ವೈದ್ಯರೊಬ್ಬರ ಮೇಲೆ ಹಲ್ಲೆ ಮತ್ತು ದರೋಡೆ
  • ಬಂಧಿತವಾಗಿರುವ ನಟ-ನಟಿ ಯಾರು?

ವೈದ್ಯರೊಬ್ಬರ ಮೇಲೆ ಹಲ್ಲೆ ಮತ್ತು ದರೋಡೆ ಮಾಡಿದ ಪ್ರಕರಣದಲ್ಲಿ ಮಲಯಾಳಂನ ಜನಪ್ರಿಯ ನಟಿ ಹಾಗೂ ನಟರನ್ನು ಬಂಧಿಸಿದ್ದಾರೆ. ಮಲಯಾಳಂ ನಟರಾದ ಬಿಬಿನ್ ಪೆರುಂಪಲ್ಲಿ ಮತ್ತು ನಟಿ ಅತುಲ್ಯಾ ಚಂದ್ರ ಸೇರಿದಂತೆ ಮೂವರನ್ನು ಕೊಚ್ಚಿ ಬಳಿಯ ಕಡವಂತರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಜನರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ತನಿಖೆ ಚಾಲ್ತಿಯಲ್ಲಿದೆ.

ವೈದ್ಯರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಗೆ ತುರ್ತು ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಅಪಾರ್ಟ್​​ಮೆಂಟ್​​ಗೆ ಕರೆಸಿದ್ದಾರೆ. 41 ವರ್ಷದ ವೈದ್ಯರು ಅಪಾರ್ಟ್​​ಮೆಂಟ್​​ಗೆ ತಲುಪಿದ ಕೂಡಲೇ ಗುಂಪೊಂದು ವೈದ್ಯರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ಹಲ್ಲೆ ನಡೆಸಿದೆ. ಬಳಿಕ ವೈದ್ಯರಿಂದ ಫೋನು, ಸ್ಮಾರ್ಟ್ ವಾಚು ಸೇರಿದಂತೆ 3.50 ಲಕ್ಷ ಮೌಲ್ಯದ ವಸ್ತುಗಳನ್ನು ಕದಿಯಲಾಗಿದೆ ಎಂದು ವೈದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

Loading...

ದೂರಿನ ಅನ್ವಯ ಸೋಮಾರದಂದು ನಟ ಬಿಬಿನ್ ಪೆರುಂಪಲ್ಲಿ ವೈದ್ಯರಿಗೆ ಕರೆ ಮಾಡಿ ಪೊನುರುನ್ನಿ ವಿಯೆತ್ತಿಲದಲ್ಲಿರುವ ಅಪಾರ್ಟ್​​ಮೆಂಟ್ ಕಾಂಪ್ಲೆಕ್ಸ್​ಗೆ ಬರುವಂತೆ ಕರೆದಿದ್ದಾರೆ. ವೈದ್ಯರು ಹೋಗಿ ಚಿಕಿತ್ಸೆ ನೀಡಿದ್ದಾರೆ. ಅದಾದ ಬಳಿಕ ನಟ ಸೇರಿದಂತೆ ಇನ್ನೂ ಕೆಲವರು ವೈದ್ಯರ ಮೇಲೆ ಆರೋಪ ಮಾಡಿದ್ದು, ಚಿಕಿತ್ಸೆ ನೀಡಿದ ಮಹಿಳೆಗೆ ವೈದ್ಯರು ಮಾದಕ ವಸ್ತು ನೀಡಿದ್ದಾರೆ. ಆಕೆಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ದೈಹಿಕ ಹಲ್ಲೆ ಮಾಡಲು ಪ್ರಾರಂಭಿಸಿದರಂತೆ. ಸುಮಾರು 12 ಮಂದಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿರುವ ವೈದ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ:ಮಲಯಾಳಂ ಸ್ಟಾರ್ ನಿರ್ದೇಶಕನ ಜೊತೆ ಕೈಜೋಡಿಸಲಿರುವ ರಿಷಬ್ ಶೆಟ್ಟಿ

ಬಂಧಿತರಾಗಿರುವ ನಟಿ ಅತುಲ್ಯ ಚಂದ್ರ, ಮೋಹನ್​ಲಾಲ್ ಪುತ್ರನ ‘ಡೈಸ್ ಇರೆ’, ಸಮಂತಾ ನಟಿಸಿರುವ ‘ಓಹ್ ಬೇಬಿ’, ‘ಮತ್ತು ವದಲರಾ 2’, ‘ಗಂಗಧರವನ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಬಂಧಿತ ನಟ ಮತ್ತು ನಿರ್ಮಾಪಕ ಸಹ ಆಗಿರುವ ಬಿಬಿನ್ ಪೆರುಂಪಲ್ಲಿ, ‘ಮೈನೆ ಪ್ಯಾರ್ ಕಿಯಾ’, ‘ಕಾಲ’, ‘ಪ್ರೇಮಪಟ್ಟ’, ‘ಎಟಿ-ವೆಲ್​​ಕಮ್​​ ಟು ದಿ ಡಾರ್ಕ್ ಸೈಡ್’ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಈ ಇಬ್ಬರನ್ನೂ ಗುರುವಾರ ಪೊಲೀಸರು ಬಂಧಿಸಿದ್ದು, ಹಲ್ಲೆ, ದರೋಡೆ ಸೇರಿದಂತೆ ಇನ್ನೂ ಕೆಲ ಆರೋಪಗಳನ್ನು ಹೇರಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us