
ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ (Shine Tom Chacko) ಅವರ ಜೀವನದಲ್ಲಿ ದುರಂತ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ಅವರ ಮೇಲೆ ಡ್ರಗ್ಸ್ ಸೇವನೆ ಆರೋಪ ಎದುರಾಗಿತ್ತು. ಈಗ ರಸ್ತೆ ಅಪಘಾತದಲ್ಲಿ (Road Accident) ಶೈನ್ ಟಾಮ್ ಚಾಕೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದಕ್ಕಿಂತಲೂ ನೋವಿನ ಸಂಗತಿ ಏನೆಂದರೆ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಅವರ ತಂದೆ (Shine Tom Chacko Father) ಸಿ.ಪಿ. ಚಾಕೊ ಸ್ಥಳದಲ್ಲೇ ಮೃತರಾಗಿದ್ದಾರೆ. ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಮಿಳುನಾಡಿನಲ್ಲಿ ಶುಕ್ರವಾರ (ಜೂನ್ 6) ಬೆಳಗ್ಗೆ ಈ ಘಟನೆ ನಡೆದಿದೆ. ಅಪಘಾತದ ಬಳಿಕ ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಯನ್ನು ದಾಖಲಿಸಲಾಗಿದೆ. ಮುಂಜಾನೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿತು. ಶೈನ್ ಟಾಮ್ ಚಾಕೊ ಅವರು ತಮ್ಮ ಕುಟುಂಬದವರ ಜೊತೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಬಂದು ಗುದ್ದಿದೆ ಎನ್ನಲಾಗಿದೆ.
ಶೈನ್ ಟಾಮ್ ಚಾಕೊ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಅಪಘಾತದಲ್ಲಿ ಜಖಂ ಆಗಿರುವ ಕಾರಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಸದ್ಯದ ಪರಿಸ್ಥಿತಿ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಅಪಘಾತದಲ್ಲಿ ನಿಧನರಾದ ಸಿಪಿ ಚಾಕೊ ಅವರಿಗೆ 70 ವರ್ಷ ವಯಸ್ಸಾಗಿತ್ತು.
Malayalam actor Shine Tom Chacko’s father, CP Chacko passed away in a road accident near Hogenakkal in Tamil Nadu’s Dharmapuri district
Shine was injured in the crash, sustaining a wound on his right hand. Family was travelling from Ernakulam to Bengaluru when their car met with… pic.twitter.com/lZ2aroURfo
— Nabila Jamal (@nabilajamal_) June 6, 2025
ತಂದೆಯನ್ನು ವೈದ್ಯಕೀಯ ತಪಾಸಣೆಗಾಗಿ ತ್ರಿಷುರ್ನಿಂದ ಬೆಂಗಳೂರಿಗೆ ಶೈನ್ ಟಾಮ್ ಚಾಕೊ ಕರೆದುಕೊಂಡು ಬರುತ್ತಿದ್ದರು. ಅವರ ಕಾರು 80ರಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಎದುರಿಗೆ ಚಲಿಸುತ್ತಿದ್ದ ಟ್ರಕ್ ಸಡನ್ ಆಗಿ ಲೇನ್ ಬದಲಾಯಿಸಿದ್ದರಿಂದ ಅಪಘಾತ ಸಂಭವಿಸಿತು ಎನ್ನಲಾಗಿದೆ. ಈ ಅಪಘಾತದಲ್ಲಿ ಶೈನ್ ಟಾಮ್ ಚಾಕೊ ಅವರ ಎಡಗೈ ಮೂಳೆ ಮುರಿದಿದೆ.
ಇದನ್ನೂ ಓದಿ: ಸಿನಿಮಾ ಸೆಟ್ನಲ್ಲಿ ಅನುಚಿತ ವರ್ತನೆ; ಶೈನ್ ಟಾಮ್ ಚಾಕೋ ಮೇಲೆ ಮತ್ತೋರ್ವ ನಟಿ ಆರೋಪ
ಮಲಯಾಳಂ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಶೈನ್ ಟಾಮ್ ಚಾಕೊ ಅವರು ನಟಿಸಿದ್ದಾರೆ. ಇತ್ತೀಚೆಗೆ ಡ್ರಗ್ಸ್ ಕೇಸ್ನಲ್ಲಿ ಅವರ ಹೆಸರು ತಳುಕುಹಾಕಿಕೊಂಡಿತ್ತು. ಅಲ್ಲದೇ ಕೆಲವು ನಟಿಯರು ಕೂಡ ಶೈನ್ ಟಾಮ್ ಚಾಕೊ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಸುದ್ದಿ ಮರೆಯುವ ಮುನ್ನವೇ ಅವರ ಅಪಘಾತದ ಶಾಕಿಂಗ್ ಸುದ್ದಿ ಕೇಳಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:12 pm, Fri, 6 June 25