‘ಆರ್​​ಆರ್​ಆರ್​’ನಲ್ಲಿ ಮಲ್ಲಿ ಪಾತ್ರ ಮಾಡಿದ ಈ ಬಾಲಕಿ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ವಿಚಾರ

ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್​ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು.

‘ಆರ್​​ಆರ್​ಆರ್​’ನಲ್ಲಿ ಮಲ್ಲಿ ಪಾತ್ರ ಮಾಡಿದ ಈ ಬಾಲಕಿ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ವಿಚಾರ
ಟ್ವಿಂಕಲ್ ಶರ್ಮ
Updated By: ರಾಜೇಶ್ ದುಗ್ಗುಮನೆ

Updated on: Mar 30, 2022 | 6:32 PM

ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದೆ. ಈ ಚಿತ್ರ ಈಗಾಗಲೇ ವಿಶ್ವ ಮಟ್ಟದಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಬಾಲಿವುಡ್​ ಒಂದರಲ್ಲೇ ಈ ಚಿತ್ರದ ಗಳಿಕೆ 100 ಕೋಟಿ ದಾಟಿದೆ. ಈ ಚಿತ್ರದಲ್ಲಿ ಬುಡಗಕಟ್ಟು ಜನಾಂಗದ ಹುಡುಗಿ ಮಲ್ಲಿ (Malli) ಎಲ್ಲರ ಗಮನ ಸೆಳೆದಿದ್ದಳು. ಒಂದರ್ಥದಲ್ಲಿ ಈ ಪಾತ್ರ ಸಿನಿಮಾದ ಜೀವಾಳ. ಸಿನಿಮಾದ ಕಥೆ ಆರಂಭವಾಗುವುದೇ ಇಲ್ಲಿಂದ. ಸಿನಿಮಾದಲ್ಲಿ ಮಲ್ಲಿ ಪಾತ್ರ ಸಾಕಷ್ಟು ಗಮನಸೆಳೆದಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ಹುಡುಗಿ ಯಾರು? ಅವಳ ಹೆಸರು ಏನು? ಅವಳು ಎಲ್ಲಿಯವಳು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ಕೋಮರಮ್ ಭೀಮ್ (ಜ್ಯೂ.ಎನ್​ಟಿಆರ್​)​ ಬುಡಗಕಟ್ಟು ಜನಾಂಗದವನು. ಅದೇ ಜನಾಂಗದ ಹುಡುಗಿ ಮಲ್ಲಿ. ಅವಳನ್ನು ಬ್ರಿಟಿಷರು ಅಪಹರಣ ಮಾಡಿಕೊಂಡು ಹೋಗುತ್ತಾರೆ. ಅವಳನ್ನು ಕರೆದುಕೊಂಡು ಬರೋಕೆ ಭೀಮ್​ ಹೋಗುತ್ತಾನೆ. ಅಲ್ಲಿಂದ ನಿಜವಾದ ಕಥೆ ಶುರುವಾಗುತ್ತದೆ. ಮಲ್ಲಿ ಪಾತ್ರ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿತ್ತು. ಇವಳ ಹೆಸರು ಟ್ವಿಂಕಲ್ ಶರ್ಮಾ. ಇವಳು ಚಂಡೀಗಢದವಳು.

ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್​ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈ ಪಾತ್ರಕ್ಕಾಗಿ 160 ಮಕ್ಕಳನ್ನು ಆಡಿಷನ್ ಮಾಡಲಾಗಿತ್ತು. ಈ ಪೈಕಿ ಟ್ವಿಂಕಲ್​ ಶರ್ಮಾ ಅಂತಿಮವಾಗಿ ಆಯ್ಕೆ ಆದರು. ಈ ಪಾತ್ರಕ್ಕೆ ಆಯ್ಕೆ ಆಗುವಾಗ ಆಕೆ 8ನೇ ಕ್ಲಾಸ್​ನಲ್ಲಿದ್ದಳು. ಈಗ ಅವಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’ ಸೇರಿ ಹಲವು ಟಿವಿ ಶೋಗಳಲ್ಲಿ ಆಕೆ ಸ್ಪರ್ಧಿಸಿದ್ದಾಳೆ. ಫ್ಲಿಪ್​ಕಾರ್ಟ್​ನಲ್ಲಿ ಮಕ್ಕಳನ್ನು ಒಳಗೊಂಡ ಜಾಹೀರಾತೊಂದು ಬಂದಿತ್ತು. ಅದರಲ್ಲಿ ಟ್ವಿಂಕಲ್ ಆ್ಯಕ್ಟ್ ಮಾಡಿದ್ದರು. ರಾಜಮೌಳಿ ಫ್ಲಿಪ್​ಕಾರ್ಟ್​ ಜಾಹೀರಾತನ್ನು ನೋಡಿದ್ದರು. ಮಲ್ಲಿ ಪಾತ್ರಕ್ಕೆ ಟ್ವಿಂಕಲ್​ ಸರಿಹೊಂದಬಹುದು ಅನಿಸಿತು. ಆ ಬಳಿಕ ಟ್ವಿಂಕಲ್​ಗೆ ಆಡಿಷನ್​ಗೆ ಆಹ್ವಾನ ನೀಡಿದರು ರಾಜಮೌಳಿ. 160 ಮಂದಿಯಲ್ಲಿ ಅವಳನ್ನು ಅಂತಿಮವಾಗಿ ಆಯ್ಕೆ ಮಾಡಿದರು. ಟ್ವಿಂಕಲ್​ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು