ವಿಜಯ್ ಹಿಟ್ ಸಾಂಗ್ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು
ನಟಿ ಮಮಿತಾ ಬೈಜು 'ಜನ ನಾಯಗನ್' ಹಾಡು ಬಿಡುಗಡೆ ಸಮಾರಂಭದಲ್ಲಿ 'ಎಲ್ಲಾ ಪುಗಳುಮ್' ಗೀತೆ ಹಾಡಿದ್ದು ಭಾರಿ ಟ್ರೋಲ್‌ಗೆ ಒಳಗಾಗಿದೆ. ಅವರ ಗಾಯನ ಶೈಲಿ ಮತ್ತು ವಿಜಯ್ ಅವರ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ 'ಜನ ನಾಯಗನ್' ಸಿನಿಮಾ ರಿಲೀಸ್ ಕೂಡ ಸೆನ್ಸಾರ್ ಸಮಸ್ಯೆಯಿಂದ ಮುಂದಕ್ಕೆ ಹೋಗಿದೆ.

ಮಲಯಾಳಂ ನಟಿ ಮಮಿತಾ ಬೈಜು ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ‘ಪ್ರೇಮುಲು’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ಈಗ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ಅವರ ಸಾಕು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಹಾಡಿದ್ದು, ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಮಮಿತಾ ಅವರು ತಮ್ಮ ಗ್ಲಾಮರ್ ಮೂಲಕ ಗಮನ ಸೆಳೆದವರು. ನಟನೆಯನ್ನು ಕೂಡ ಉತ್ತಮವಾಗಿ ಅವರು ಮಾಡುತ್ತಾರೆ. ಇದಕ್ಕಾಗಿಯೇ ವಿಜಯ್ ಸಿನಿಮಾದಲ್ಲಿ ಆಫರ್ ಸಿಕ್ಕಿತು. ಅವರು ಹಲವು ದಿನ ಸಿನಿಮಾ ಶೂಟ್ ಮಾಡಿದರು ಮತ್ತು ವಿಜಯ್ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡರು. ಈಗ ವಿಜಯ್ ಅವರನ್ನು ಹಾಗೂ ಅವರನ್ನು ಮೆಚ್ಚಿಸಲು ಮಮಿತಾ ಹಾಡು ಹೇಳಿದ್ದರು. ಆದರೆ, ಇದು ಟ್ರೋಲಿಗರಿಗೆ ಆಹಾರ ಆಗಿದೆ.
ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ
ದಳಪತಿ ವಿಜಯ್ ಅಭಿನಯದ ‘ಅಳಗಿಯ ತಮಿಳ ಮಗನ್’ ಸಿನಿಮಾ 2007ರಲ್ಲಿ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ವಿಜಯ್ ಜೊತೆ ಶ್ರಿಯಾ ಶರಣ್, ನಮಿತಾ ಮೊದಲಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ‘ಎಲ್ಲಾ ಪುಗಳುಮ್’ ಎಂಬ ಹಾಡು ಇದೆ. ಈ ಹಾಡು ಗಮನ ಸೆಳೆದಿತ್ತು. ಎಆರ್ ರೆಹಮಾನ್ ಅವರು ಈ ಹಾಡನ್ನು ಕಂಪೋಸ್ ಮಾಡಿದ್ದರು. ಈ ಹಾಡನ್ನು ಮಮಿತಾ ಹಾಡಿದ್ದರು. ಈ ಸಂದರ್ಭದಲ್ಲಿ ವಿಜಯ್ ಅವರ ಭಾವನೆ ಹೇಗಿತ್ತು ಎಂಬುದನ್ನು ಕ್ಯಾಪ್ಚರ್ ಮಾಡಲಾಗಿದೆ. ಅವರು ಸಿಟ್ಟಿನಿಂದ ಇದ್ದಂತೆ ಕಾಣಿಸಿತ್ತು.
View this post on Instagram
View this post on Instagram
View this post on Instagram
ಈ ವಿಡಿಯೋನ ಟ್ರೋಲ್ ಮಾಡಲಾಗುತ್ತಿದೆ. ನಾವು ದೇವರ ಬಳಿ ಕೇಳಿದ್ದು ಏನು ಎಂದು ಹೇಳಿದಾಗ ಒರಿಜಿನಲ್ ಸಾಂಗ್ ಹಾಕಲಾಗಿದೆ. ದೇವರು ಕೊಟ್ಟಿದ್ದು ಏನು ಎಂದಾಗ ಮಮಿತಾ ಹಾಡನ್ನು ಹಾಕಲಾಗಿದೆ. ಸದ್ಯಕ್ಕೆ ಸೆನ್ಸಾರ್ ಸಮಸ್ಯೆಯಿಂದ ‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಯಾವಾಗ ಈ ಸಿನಿಮಾ ತೆರೆಗೆ ಬರುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



