‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ
Jana Nayagan Postponed: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಸೆನ್ಸಾರ್ ಮಂಡಳಿಯ ತಡೆಯಿಂದಾಗಿ ಮುಂದೂಡಲ್ಪಟ್ಟಿದೆ. ಸಿನಿಮಾ ತಂಡ ಕೆವಿಎನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದು, ಜನವರಿ 9ರಂದು ತೀರ್ಪು ನಿರೀಕ್ಷಿಸಲಾಗಿದೆ. ರಾಜಕೀಯ ಹಸ್ತಕ್ಷೇಪದ ಆರೋಪಗಳು ಕೇಳಿಬಂದಿವೆ. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ಮುಂಗಡ ಬುಕಿಂಗ್ ಹಣ ಹಿಂದಿರುಗಿಸುವ ಸವಾಲು ಎದುರಾಗಿದೆ. ಎಲ್ಲ ಅಡೆತಡೆ ನಿವಾರಣೆಯಾದರೆ ಜನವರಿ 14ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ದಳಪತಿ ವಿಜಯ್ (Thalapathy Vijay) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ರಾಜಕೀಯಕ್ಕೆ ಬರಲು ಅವರು ಅಡಿಯಾಗುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಜನ ನಾಯಗನ್’ಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಇದರ ಹಿಂದೆ ರಾಜಕೀಯದ ಕೆಸರೆರೆಚಾಟ ಇರಬಹುದು ಎಂದು ಕೂಡ ಊಹಿಸಲಾಗುತ್ತಿದೆ.
ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಾಡಿಸಲು ‘ಕೆವಿಎನ್’ ಸಂಸ್ಥೆ ಡಿಸೆಂಬರ್ 18ರಂದೇ ಸಿನಿಮಾ ಸಲ್ಲಿಕೆ ಮಾಡಿತ್ತು. ಸಿನಿಮಾ ನೋಡಿದ ಮಂಡಳಿ 27 ಕಡೆ ಬದಲವಾಣೆ/ಕಟ್ಗೆ ಸೂಚನೆ ನೀಡಿತ್ತು. ಇದನ್ನು ಸಿನಿಮಾ ಪಾಲಿಸಿತ್ತು. ನಂತರ ಸಿನಿಮಾನ ಮರು ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಮಂಡಳಿ ಒಪ್ಪಿಲ್ಲ. ವಿಶೇಷ ಮಂಡಳಿಗೆ ಸಿನಿಮಾ ವೀಕ್ಷಿಸಲು ಶಿಫಾರಸು ಮಾಡಲು ಸೂಚನೆ ನೀಡಿತ್ತು. ಸೆನ್ಸಾರ್ ಮಂಡಳಿಯಿಂದ ಸರಿಯಾದ ರೆಸ್ಪಾನ್ಸ್ ಇಲ್ಲ ಆರೋಪವನ್ನೂ ತಂಡ ಮಾಡಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ತಂಡ ಆಕ್ರೋಶ ಹೊರಹಾಕಿತ್ತು.
View this post on Instagram
ಈ ವಿಷಯವಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ಕ್ಕೆ ನೀಡುವ ಸಾಧ್ಯತೆ ಇದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.ಈ ಬಗ್ಗೆ ಕೆವಿಎನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್
ದಳಪತಿ ವಿಜಯ್ ಕೊನೆಯ ಸಿನಿಮಾ ಎಂಬ ಕಾರಣದಿಂದ ‘ಜನ ನಾಯಗನ್’ ಮೇಲಿನ ನಿರೀಕ್ಷೆ ಹೆಚ್ಚಿತ್ತು. ರಿಲೀಸ್ಗೂ ಮೊದಲೇ ಮುಂಗಡ ಟಿಕೆಟ್ ಬುಕಿಂಗ್ನಿಂದ ಸಿನಿಮಾ ಕೋಟಿ ಕೋಟಿ ಬಿಸ್ನೆಸ್ ಮಾಡಿತ್ತು. ಆದರೆ, ಈಗ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಆ ಹಣವನ್ನು ಪ್ರೇಕ್ಷಕನಿಗೆ ಮರಳಿ ನೀಡಬೇಕಾದ ಸವಾಲು ಇದೆ. ಒಂದೊಮ್ಮೆ ವಾರದ ಒಳಗೆ ಎಲ್ಲವೂ ಕ್ಲಿಯರ್ ಆದರೆ, ಜನವರಿ 14ರಂದೇ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Thu, 8 January 26




