11 ವರ್ಷದ ಬಳಿಕ ಜಪಾನಿನಲ್ಲಿ ಬಿಡುಗಡೆ ಆಗಲಿದೆ ‘ಮನಂ’

Manam Telugu movie: ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರುಗಳು ಒಟ್ಟಿಗೆ ನಟಿಸಿದ್ದ ಮೂರು ತಲೆಮಾರಿನ ಕತೆಯನ್ನೇ ಹೊಂದಿದ್ದ ‘ಮನಂ’ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಅದೀಗ ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೊಮ್ಮೆ ಜಪಾನ್​ನಲ್ಲಿ ಬಿಡುಗಡೆ ಆಗುತ್ತಿದೆ. ಜಪಾನ್​ನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

11 ವರ್ಷದ ಬಳಿಕ ಜಪಾನಿನಲ್ಲಿ ಬಿಡುಗಡೆ ಆಗಲಿದೆ ‘ಮನಂ’
Manam Movie

Updated on: Aug 02, 2025 | 9:09 PM

ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರುಗಳು ಒಟ್ಟಿಗೆ ನಟಿಸಿರುವ ‘ಮನಂ’ (Manam) ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ದೊಡ್ಡ ಹಿಟ್ ಆಗಿತ್ತು. ಯಾವುದೇ ಫೈಟ್​ಗಳು, ಅಬ್ಬರದ ಡೈಲಾಗ್​ಗಳು ಇಲ್ಲದೆಯೂ ಸಹ ಈ ಸಿನಿಮಾ ಪ್ರೇಕ್ಷಕರನ್ನು ಆತ್ಮೀಯವಾಗಿ ತಟ್ಟಿತ್ತು. ತೆಲುಗು ಚಿತ್ರರಂಗದ ಲಿಜೆಂಡರಿ ನಟ ಎಎನ್​ಆರ್ ಅವರು ನಟಿಸಿದ ಕೊನೆಯ ಸಿನಿಮಾ ಸಹ ಇದಾಗಿತ್ತು. ಇದೀಗ ಈ ಸಿನಿಮಾ 11 ವರ್ಷದ ಬಳಿಕ ಜಪಾನ್​ ದೇಶದಲ್ಲಿ ಬಿಡುಗಡೆ ಆಗುತ್ತಿದೆ.

ಜಪಾನ್​​ನಲ್ಲಿ ನಟ ನಾಗಾರ್ಜುನಗೆ ಭಾರಿ ಜನಪ್ರಿಯತೆ ಇದೆ. ರಣ್​ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಜಪಾನ್​​ನಲ್ಲಿ ದೊಡ್ಡ ಹಿಟ್ ಆಗಿದೆ. ಆ ಸಿನಿಮಾದ ಬಳಿಕ ನಾಗಾರ್ಜುನ ಅವರನ್ನು ಜಪಾನ್​​ನಲ್ಲಿ ಅಭಿಮಾನಿಗಳು ‘ನಾಗ ಸಮಾ’ ಎಂದು ಕರೆಯುತ್ತಾರೆ. ಜಪಾನಿನಲ್ಲಿ ಸಮಾ ಎಂದರೆ ಗೌರವಯುತವಾಗಿ ಕರೆಯುವ ಪದವಾಗಿದೆ. ಸಮ ಎಂದರೆ ದೈವತ್ವಕ್ಕೆ ಹತ್ತಿರವಾದವನು ಎಂಬ ಅರ್ಥವೂ ಇದೆ.

ಜಪಾನಿನಲ್ಲಿ ನಾಗಾರ್ಜುನ ಅವರಿಗೆ ಇರುವ ಜನಪ್ರಿಯತೆಯನ್ನು ಎನ್​ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಇದೀಗ ಅವರ ‘ಮನಂ’ ಸಿನಿಮಾವನ್ನು ಅಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಪಾನಿನಲ್ಲಿ ಹಲವು ದಶಕಗಳಿಂದಲೂ ಭಾರತದ ಸಿನಿಮಾಗಳು ವಿಶೇಷವಾಗಿ ದಕ್ಷಿಣದ ಸಿನಿಮಾಗಳು ಅದ್ಭುತ ಪ್ರದರ್ಶನ ಕಾಣುತ್ತಾ ಬಂದಿವೆ. ರಜನೀಕಾಂತ್​, ಜಪಾನಿನ ಬಹುದೊಡ್ಡ ಸ್ಟಾರ್ ನಟ. ನಟ ಸುದೀಪ್ ಅವರಿಗೂ ಸಹ ಅಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಮಹಾರಾಜ’, ‘ದೇವರ’, ‘ಆರ್​ಆರ್​ಆರ್’ ಸಿನಿಮಾಗಳು ಭಾರಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿವೆ.

ಇದನ್ನೂ ಓದಿ:ಅಕ್ಕಿನೇನಿ ನಾಗಾರ್ಜುನನಿಂದ 14 ಬಾರಿ ಕೆನ್ನೆಗೆ ಹೊಡಿಸಿಕೊಂಡಿದ್ದ ‘ಸೂರ್ಯವಂಶ’ ನಟಿ

‘ಮನಂ’ ಸಿನಿಮಾ ಮೂರು ತಲೆಮಾರಿನ ಕತೆಯನ್ನು ಹೊಂದಿರುವ ಸಿನಿಮಾ ಆಗಿದ್ದು, ಆ ಮೂರು ಪಾತ್ರದಲ್ಲಿ ಅಕ್ಕಿನೇನಿ ಕುಟುಂಬದ ಮೂರು ತಲೆಮಾರಿನ ನಟರು ನಟಿಸಿರುವುದು ವಿಶೇಷ. ಅಕ್ಕಿನೇನಿ ನಾಗೇಶ್ವರ ರಾವ್, ಅವರ ಪುತ್ರ ಅಕ್ಕಿನೇನಿ ನಾಗಾರ್ಜುನ ಹಾಗೂ ಅವರ ಪುತ್ರ ಅಕ್ಕಿನೇನಿ ನಾಗ ಚೈತನ್ಯ ಅವರುಗಳು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಮಂತಾ, ಶ್ರೆಯಾ ಸಿರಿನ್ ನಟಿಸಿದ್ದರು. ಸಿನಿಮಾದಲ್ಲಿ ನಾಗಾರ್ಜುನ ಕೊನೆಯ ಪುತ್ರ ಅಕ್ಕಿನೇನಿ ಅಖಿಲ್ ಸಹ ಕಾಣಿಸಿಕೊಂಡಿದ್ದರು. ಸಿನಿಮಾ ಅನ್ನು ವಿಕ್ರಂ ಕೆ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ