ಮನೆಯಲ್ಲೇ ವರ್ಕೌಟ್​ ಮಾಡಿ ಫಿಟ್ ಆಗಿದ್ದಾರೆ 49ರ ಪ್ರಾಯದ ನಟಿ ಮಂದಿರಾ ಬೇಡಿ

ಎಲ್ಲೆಲ್ಲೂ ಕೊರೊನಾ ವೈರಸ್​ ಹರಡುತ್ತಿರುವ ಈ ಕಷ್ಟದ ಕಾಲದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾಗಿ ಮನೆಯಲ್ಲೇ ವರ್ಕೌಟ್​ ಮಾಡುವುದು ಅನಿವಾರ್ಯ ಆಗಿದೆ.

ಮನೆಯಲ್ಲೇ ವರ್ಕೌಟ್​ ಮಾಡಿ ಫಿಟ್ ಆಗಿದ್ದಾರೆ 49ರ ಪ್ರಾಯದ ನಟಿ ಮಂದಿರಾ ಬೇಡಿ
ಮಂದಿರಾ ಬೇಡಿ
Edited By:

Updated on: May 07, 2021 | 3:55 PM

ಧಾರಾವಾಹಿ, ಸಿನಿಮಾ, ವೆಬ್​ ಸಿರೀಸ್​ ಕಿರುತೆರೆ ಕಾರ್ಯಕ್ರಮಗಳ ನಿರೂಪಣೆ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ತೊಡಗಿಕೊಂಡವರು ನಟಿ ಮಂದಿರಾ ಬೇಡಿ. ಸೋಶಿಯಲ್​ ಮೀಡಿಯಾದಲ್ಲೂ ಅವರು ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಸದ್ಯ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಅದಕ್ಕೆ ಕಾರಣ ಅವರು ಫಿಟ್ನೆಸ್​ ಕುರಿತಂತೆ ಹಂಚಿಕೊಳ್ಳುವ ವಿಡಿಯೋ ಮತ್ತು ಮಾಹಿತಿಗಳು. ಸದ್ಯ ಎಲ್ಲರಂತೆ ಮಂದಿರಾ ಬೇಡಿ ಕೂಡ ಮನೆಯಲ್ಲೇ ಲಾಕ್ ಆಗಿದ್ದಾರೆ. ಮನೆಯಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮಂದಿರಾ ಬೇಡಿ ಅವರಿಗೆ ಫಿಟ್ನೆಸ್​ ಬಗ್ಗೆ ಅಪಾರ ಕಾಳಜಿ. ಈಗ ಅವರಿಗೆ 49ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ವ್ಯಾಯಾಮದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇರುವುದೇ ಅದಕ್ಕೆಲ್ಲ ಕಾರಣ. ಸದ್ಯ ಕೊರೊನಾ ವೈರಸ್​ ಹರಡುವ ಭೀತಿಯಿಂದಾಗಿ ಅನೇಕ ಕಡೆಗಳಲ್ಲಿ ಜಿಮ್​ಗಳು ಮುಚ್ಚಿವೆ, ಹಾಗಾಗಿ ಮನೆಯಲ್ಲೇ ವರ್ಕೌಟ್​ ಮಾಡುವುದು ಅನಿವಾರ್ಯ ಆಗಿದೆ.

ಇತ್ತೀಚೆಗೆ ಮಂದಿರಾ ಬೇಡಿ ಶೇರ್​ ಮಾಡಿಕೊಂಡಿರುವ ಒಂದು ವಿಡಿಯೋ ಗಮನ ಸೆಳೆಯುತ್ತಿದೆ. ಸಿಂಪಲ್​ ಆಗಿ ಮನೆಯಲ್ಲಿ ಯಾವೆಲ್ಲ ವರ್ಕೌಟ್​ ಮಾಡಬೇಕು ಎಂಬುದನ್ನು ಈ ವಿಡಿಯೋ ಮೂಲಕ ತಿಳಿಸಲು ಮಂದಿರಾ ಪ್ರಯತ್ನಿಸಿದ್ದಾರೆ.

ಎಲ್ಲೆಲ್ಲೂ ಕೊರೊನಾ ವೈರಸ್​ ಹರಡುತ್ತಿರುವ ಈ ಕಷ್ಟದ ಕಾಲದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಇದೆ. ಪ್ರತಿ ಕ್ಷಣವೂ ನಕಾರಾತ್ಮಕ ಸುದ್ದಿಗಳು ಕೇಳಿಬರುತ್ತಿವೆ. ಎಲ್ಲ ಕಡೆಯಿಂದ ಸಾವು-ನೋವು ವರದಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಫಿಟ್ನೆಸ್​ ಕಡೆಗೆ ಗಮನ ನೀಡಿದರೆ ಒಳಿತು ಎಂಬುದನ್ನು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ಗಳ ಮೂಲಕ ಮಂದಿರಾ ಬೇಡಿ ತಿಳಿಸಿಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ಲಾಕ್​ಡೌನ್​ ಕಾರಣದಿಂದ ರನ್ನಿಂಗ್​ ಮಾಡಲು ಹೊರಗಡೆ ಪಾರ್ಕ್​ನಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಮಂದಿರಾ ದೂರಿಲ್ಲ. ಅದರ ಬದಲು ಕಳೆದೊಂದು ವರ್ಷದಿಂದ ಮನೆಯೊಳಗೆ, ಇರುವ ಸ್ವಲ್ಪ ಜಾಗದಲ್ಲೇ ಹೇಗೆ ಓಡಬಹುದು ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. ಆ ವಿಡಿಯೋಗಳನ್ನು ಕೂಡ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ಇದನ್ನೂ ಓದಿ:

 ಈ ಕಷ್ಟದಲ್ಲೂ ಅಕ್ಷಯ್​ ಕುಮಾರ್​ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್​ ಖನ್ನಾ ಕೊಟ್ರು ಖಡಕ್​ ಉತ್ತರ

ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us