ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ಮನೋಜ್ ಬಾಜಪಾಯಿ ಅವರು ಇತರ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ, ದುಬಾರಿ ವಸ್ತುಗಳನ್ನು ಖರೀದಿಸುವ ಬದಲು, ಕುಟುಂಬದೊಂದಿಗೆ ಐಷಾರಾಮಿ ಪ್ರವಾಸಗಳನ್ನು ಆದ್ಯತೆ ನೀಡುತ್ತಾರೆ. "ಮನೆ ಮತ್ತು ಕಾರುಗಳು ನಾನು ಖರೀದಿಸಿದ ದುಬಾರಿ ವಸ್ತುಗಳು" ಎಂದು ಅವರು ಹೇಳಿದ್ದಾರೆ. ಉಳಿದ ಹಣವನ್ನು ಕುಟುಂಬದ ಸೌಕರ್ಯದ ಪ್ರವಾಸಗಳಿಗೆ ವಿನಿಯೋಗಿಸುತ್ತಾರೆ.

ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?
ಮನೋಜ್
Updated By: ರಾಜೇಶ್ ದುಗ್ಗುಮನೆ

Updated on: Jul 05, 2025 | 8:08 AM

ಸೆಲೆಬ್ರಿಟಿಗಳು ಯಾವಾಗಲೂ ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಈ ಕಾರಣದಿಂದಲೇ ಬಂದ ಹಣವನ್ನು ಮನೆ ಹಾಗೂ ಕಾರುಗಳ ಮೇಲೆ ಹೂಡಿಕೆ ಮಾಡುತ್ತಾರೆ. ಆದರೆ, ಮನೋಜ್​ ಬಾಜ್​​ಪಾಯಿ ಅವರು ಇದಕ್ಕೆ ಭಿನ್ನ ಎನಿಸಿಕೊಂಡಿದ್ದಾರೆ. ಅವರು ದುಬಾರಿ ವಸ್ತುಗಳನ್ನು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರಿಸಿದಿಲ್ಲ. ಅವರು ಹಣವನ್ನು ಪ್ರವಾಸದ ಮೇಲೆ ಹಾಕುತ್ತಾರೆ. ಯಾವಾಗಲೂ ಟ್ರಿಪ್ ಐಷಾರಾಮಿ ಆಗಿ ಇರಬೇಕು ಎಂದು ಬಯಸುತ್ತಾರೆ.

‘ಮನೆ ಹಾಗೂ ಕಾರುಗಳು ನಾನು ಖರೀದಿಸಿದ ದುಬಾರಿ ವಸ್ತುಗಳು’ ಎಂದು ಮನೋಜ್ ಸಂದರ್ಶನ ಒಂದರಲ್ಲಿ ಹೇಳಿದರು. ಈ ವಸ್ತುಗಳನ್ನು ಬಹುತೇಕ ಸೆಲೆಬ್ರಿಟಿಗಳನ್ನು ಖರೀದಿ ಮಾಡುತ್ತಾರೆ. ಆದರೆ, ಮನೋಜ್ ಅವರು ಉಳಿದ ಹಣವನ್ನು ಟ್ರಿಪ್ ಮೇಲೆ ಹೂಡಿಕೆ ಮಾಡುತ್ತಾರೆ.

ಇದನ್ನೂ ಓದಿ
ನಂಬಲೇ ಬೇಕು.. ಸ್ಕ್ವಿಡ್ ಗೇಮ್ ನಟನಿಗೆ ಕನ್ನಡದ ಈ ಚಿತ್ರ ಎಂದರೆ ಸಖತ್ ಇಷ್ಟ
ಗೆಳತಿಯ ತುಟಿಗೆ ಮುತ್ತು; ಸೆನ್ಸೇಷನ್ ಸೃಷ್ಟಿ ಮಾಡಿದ ಸಂಯುಕ್ತಾ ಹೆಗಡೆ
ಕನ್ನಡದ ಬಗ್ಗೆ ವಿವಾದ ಮಾಡಿಕೊಂಡ ಕಮಲ್​ಗೆ ಹೊಸ ನಿರ್ಬಂಧ ಹೇರಿದ ಕೋರ್ಟ್
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ನಾನು ಕುಟುಂಬವನ್ನು ಟ್ರಿಪ್​ಗೆ ಕರೆದುಕೊಂಡು ಹೋದಾಗ ಅವರನ್ನು ಸಾಕಷ್ಟು ಕಂಫರ್ಟ್​ ಆಗಿ ಇಡಲು ಪ್ರಯತ್ನಿಸುತ್ತೇನೆ. ಒಳ್ಳೆಯ ಜಾಗದಲ್ಲಿ ನಾವು ಅವರನ್ನು ಇರಿಸುತ್ತೇನೆ. ಇದಕ್ಕೆ ಅವರು ಹೆಚ್ಚಿನ ಹಣ ಚಾರ್ಜ್ ಮಾಡುತ್ತಾರೆ ನಿಜ. ಆದರೆ, ನನಗೆ ಆ ಬಗ್ಗೆ ಚಿಂತೆ ಇಲ್ಲ. ಯಾವುದಾದರೂ ವಿಚಾರದಲ್ಲಿ ಕಾಂಪ್ರಮೈಸ್ ಆಗಬೇಕು ಎಂದರೆ ನನಗೆ ತೊಂದರೆ ಇಲ್ಲ. ಆದರೆ, ಕುಟುಂಬಕ್ಕೆ ಆ ರೀತಿ ಆಗಬಾರದು’ ಎಂಬುದು ಮನೋಜ್ ಉದ್ದೇಶ. ಮನೋಜ್ ಸಾಕಷ್ಟು ಕಷ್ಟ ನೋಡಿದವರು. ಈಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಮನೋಜ್ ಬಾಜ್​ಪಾಯಿ ಅವರು ಈ ಮೊದಲು ವಿವಾಹ ಆಗಿದ್ದರು. ಆದರೆ, ನಟಿಗೆ ಆರ್ಥಿಕ ಸಮಸ್ಯೆ ಉಂಟಾದಾಗ ಅವರು ಮನೋಜ್​​ನ ಬಿಟ್ಟು ಹೋದರು. ಮನೋಜ್ ಅವರು ಆಗಿನ್ನೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಈಗ ಶಬಾನಾ ರಾಜಾ ಅವರನ್ನು ಮನೋಜ್ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಕುಟುಂಬದ ಬಗ್ಗೆ ಹೆಚ್ಚು ಪ್ರೀತಿ ಹಾಗೂ ಗೌರವ ಇದೆ. ಯಾರಿಗೂ ತಮ್ಮಿಂದ ಕಷ್ಟ ಆಗಬಾರದು ಎಂಬುದು ಅವರ ಉದ್ದೇಶ.

ಇದನ್ನೂ ಓದಿ: ‘ನಿನ್ನ ಕೊಂದು ತೆಗೆಯುತ್ತಾರೆ’; ಸುಶಾಂತ್ಗೆ ಎಚ್ಚರಿಸಿದ್ದ ಮನೋಜ್ ಬಾಜಪೇಯಿ

ಮನೋಜ್ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸೀರಿಸ್​ನಲ್ಲಿ ಬ್ಯುಸಿ ಇದ್ದಾರೆ. ಈ ಸರಣಿ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನವೆಂಬರ್ ವೇಳೆಗೆ ಸೀರಿಸ್ ಬಿಡುಗಡೆ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.