AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾನ ರಿಲೀಸ್ ಮಾಡಲು ಮುಂದಾದ ಕಮಲ್ ಹಾಸನ್

ಕಮಲ್ ಹಾಸನ್ ಅವರ ಬಹುನಿರೀಕ್ಷಿತ ‘ಮರುಧನಾಯಗಂ’ ಸಿನಿಮಾ 1996ರಲ್ಲಿ ಶುರುವಾಗಿ ಹಣಕಾಸಿನ ಕಾರಣಗಳಿಂದ ಸ್ಥಗಿತಗೊಂಡಿತ್ತು. ಕ್ವೀನ್ ಎಲಿಜಬೆತ್ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಲಾಂಚ್ ಆಗಿದ್ದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಿಷ್ಣುವರ್ಧನ್ ಸಹ ಇದ್ದರು. ಈಗ ಕಮಲ್ ಹಾಸನ್ ಇದನ್ನು ಮತ್ತೆ ತೆರೆಗೆ ತರುವ ಚಿಂತೆಯಲ್ಲಿದ್ದಾರೆ.

ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾನ ರಿಲೀಸ್ ಮಾಡಲು ಮುಂದಾದ ಕಮಲ್ ಹಾಸನ್
ಕಮಲ್-ವಿಷ್ಣು
ರಾಜೇಶ್ ದುಗ್ಗುಮನೆ
|

Updated on: Nov 21, 2025 | 11:29 AM

Share

ಕಮಲ್ ಹಾಸನ್ ಅವರು ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 1996ರಲ್ಲಿ ‘ಇಂಡಿಯನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಇದಾದ ಬಳಿಕ ಅವರು ನಿರ್ದೇಶನಕ್ಕೆ ಇಳಿದರು. ಈ ಚಿತ್ರಕ್ಕೆ ‘ಮರುಧನಾಯಗಂ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ಸಿನಿಮಾದಲ್ಲಿ ಕಮಲ್ ಜೊತೆ ವಿಷ್ಣುವರ್ಧನ್ ಕೂಡ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ಎರಡು ವರ್ಷ ನಡೆಯಿತು. ನಂತರ ಸಿನಿಮಾ ರಿಲೀಸ್ ಆಗದೆ ನಿಂತು ಹೋಯಿತು. ಈಗ ಇದನ್ನು ರಿಲೀಸ್ ಮಾಡುವ ಬಗ್ಗೆ ಕಮಲ್ ಹಾಸನ್ ಯೋಚಿಸಿದ್ದಾರೆ.

‘ಮರುಧನಾಯಗಂ’ ಸಿನಿಮಾ ಆಗಿನ ಕಾಲಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಮದ್ರಾಸ್ ಫಿಲ್ಮ್ ಸಿಟಿಯಲ್ಲಿ  ಈ ಸಿನಿಮಾದ ಲಾಂಚ್ ನಡೆಯಿತು. ಕ್ವೀನ್ ಎಲಿಜಬೆತ್ ಹಾಗೂ ಅಂದಿನ ತಮಿಳುನಾಡು ಸಿಯಂ ಕರುಣಾನಿಧಿ ಅತಿಥಿಯಾಗಿ ಬಂದಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿತ್ತು. ವಿಷ್ಣುವರ್ಧನ ಕೂಡ ಸಿನಿಮಾದಲ್ಲಿ ಇದ್ದರು. ಅವರು ವಾಜಿದ್ ಖಾನ್ ಹೆಸರಿನ ಪಾತ್ರ ಮಾಡಿದ್ದರು.

ಈ ಚಿತ್ರಕ್ಕೆ ಎರಡು ವರ್ಷ ಶೂಟಿಂಗ್ ಮಾಡಲಾಯಿತು. ಆದರೆ, ಇದಕ್ಕೆ ಹಣ ಹಾಕಿದವರಲ್ಲಿ ಒಬ್ಬರಾದ ಹಾಲಿವುಡ್ ನಿರ್ಮಾಣ ಸಂಸ್ಥೆ ಹಿಂದಕ್ಕೆ ಸರಿಯಿತು. ಚಿತ್ರದ ಬಜೆಟ್ 50 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. ಆಗಿನ ಕಾಲದಲ್ಲಿ ಟಿಕೆಟ್ ಬೆಲೆ 10-20 ರೂಪಾಯಿ ಇತ್ತು. ಈ ಟಿಕೆಟ್ ಬೆಲೆಯಲ್ಲಿ ಬಜೆಟ್ ರಿಕವರಿ ಮಾಡೋದು ಅಸಾಧ್ಯ ಎನಿಸಿತ್ತು. ವಿಶೇಷ ಎಂದರೆ ಈ ಸಿನಿಮಾಗೆ ನಾಯಕಿ ಆಗಿ ಐಶ್ವರ್ಯಾ ರೈ ಅಥವಾ ‘ಟೈಟಾನಿಕ್’ ಸಿನಿಮಾ ನಾಯಕಿ ಕೇಟ್ ವಿನ್ಸ್ಲೆಟ್​ನ ಆಯ್ಕೆ ಮಾಡುವ ಆಲೋಚನೆಯಲ್ಲಿ ಕಮಲ್ ಇದ್ದರು. ಈ ಚಿತ್ರದ ಪ್ರೀ ಪ್ರೊಡಕ್ಷನ್​ಗೆ ಕಮಲ್ ಸಾಕಷ್ಟು ಹಣ ವ್ಯಯ ಮಾಡಿದ್ದರು.

ಈ ಸಿನಿಮಾ ಮುಂದುವರಿಯಲೇ ಇಲ್ಲ. ಈ ಸಿನಿಮಾ ನಿಂತಿದೆ ಎಂದು ಘೋಷಣೆ ಮಾಡಿದರು. ಈ ಸಿನಿಮಾನ ಪೂರ್ಣಗೊಳಿಸಲು ಅವರು ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ. ಈ ಸಿನಿಮಾ ಬರೋದೇ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಈ ಸಿನಿಮಾನ ಪೂರ್ಣಗೊಳಿಸುವ ಎಲ್ಲಾ ಸಾಧ್ಯತೆ ಇದೆ’ ಎಂದು ಕಮಲ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ

ಇತ್ತೀಚೆಗೆ ‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಎತ್ತಿನ ಮೇಲೆ ಬರೋ ದೃಶ್ಯ ಇದೆ. ಈ ದೃಶ್ಯವನ್ನು ಕಮಲ್ ಅವರು ‘ಮರುಧನಾಯಗಂ’ ಸಿನಿಮಾದಲ್ಲೇ ಟ್ರೈ ಮಾಡಿದ್ದರು. ಅದರ ಪೋಸ್ಟರ್ ವೈರಲ್ ಆಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ