AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ

Suhasini about Vishnuvardhan: ವಿಷ್ಣುವರ್ಧನ್ ಕನ್ನಡದ ಮೇರು ನಟರಲ್ಲಿ ಒಬ್ಬರು. ವಿಷ್ಣುವರ್ಧನ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಸುಹಾಸಿನಿ, ವಿಷ್ಣುವರ್ಧನ್ ಪ್ರತಿಭೆಯನ್ನು ಸುಂದರವಾಗಿ ವಿವರಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನೀಕಾಂತ್ ಇಬ್ಬರ ಪ್ರತಿಭೆಯನ್ನೂ ಸೇರಿಸಿದರೆ ವಿಷ್ಣುವರ್ಧನ್ ಎಂದಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಸುಹಾಸಿನಿ ಹೇಳಿರುವುದೇನು? ಇಲ್ಲಿದೆ ಮಾಹಿತಿ...

ರಾಜ್ಯೋತ್ಸವ ವಿಶೇಷ: ‘ಕಮಲ್-ರಜನಿ ಸೇರಿಸಿದರೆ ವಿಷ್ಣುವರ್ಧನ್’; ಸುಹಾಸಿನಿ
Vishnuvardhan
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:Nov 01, 2025 | 11:25 AM

Share

ಕಮಲ್ ಹಾಸನ್ (Kamal Haasan) ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಎಂಥದ್ದು ಅಂತ ಗೊತ್ತು. ಅದೇ ರೀತಿ ರಜನಿಕಾಂತ್ ಕೂಡ ತಮಿಳು ಇಂಡಸ್ಟ್ರಿಯಲ್ಲಿ ಮಾಡಿದ ಸಾಧನೆ ದೊಡ್ಡದು. ಇಬ್ಬರ ಶಕ್ತಿ ಸೇರಿದರೆ ಅದೆಷ್ಟು ದೊಡ್ಡ ಪವರ್ ಆಗುತ್ತದೆ ಎಂಬ ಕಲ್ಪನೆ ಅನೇಕರಿಗೆ ಊಹೆಗೂ ಮೀರಿದ್ದು. ಆದರೆ, ಇವರಿಬ್ಬರು ಸೇರಿದರೆ ವಿಷ್ಣುವರ್ಧನ್ ಎಂದು ಸುಹಾಸಿನಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಸಾಧನೆ ತುಂಬಾನೇ ದೊಡ್ಡದು.

ವಿಷ್ಣುವರ್ಧನ್ ಅವರು ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರೂ ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅವರು ನಟಿಸಿದ ಮೊದಲ ಚಿತ್ರ ‘ನಾಗರಹಾವು’ ಯಾರೂ ಊಹಿಸದಷ್ಟು ದೊಡ್ಡ ಯಶಸ್ಸು ಕಂಡಿತು. ವಿಷ್ಣು ಹೀರೋ ಆಗಲು ಈ ಚಿತ್ರ ಬುನಾದಿ ಹಾಕಿ ಕೊಟ್ಟಿತ್ತು. ಆ ಬಳಿಕ ಅವರು ಸಾಲು ಸಾಲು ಹಿಟ್ ಕೊಟ್ಟರು.

ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪರಭಾಷೆಗಳಲ್ಲೂ ಅವರು ನಟಿಸಿದ್ದಾರೆ. ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್, ತಮಿಳು ನಟ ರಜನಿಕಾಂತ್ ಮೊದಲಾದವರ ಜೊತೆ ನಟಿಸಿದ್ದಾರೆ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ವಿಷ್ಣುವರ್ಧನ್ ಸಾಮರ್ಥ್ಯ ಏನು ಎಂಬುದು ಅವರ ಜೊತೆ ಕೆಲಸ ಮಾಡಿದವರಿಗೆ ತಿಳಿದಿದೆ.

ಇದನ್ನೂ ಓದಿ:ಡಾ ರಾಜ್​​ಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಘೋಷಣೆ

ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಕಂಡವರು ಸುಹಾಸಿನಿ. ‘ಬಂಧನ’ ಸಿನಿಮಾದಲ್ಲಿ ಇವರ ಜೋಡಿ ಸಾಕಷ್ಟು ಗಮನ ಸೆಳೆಯಿತು. ‘ಮುತ್ತಿನ ಹಾರ’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಮೊದಲಾದ ಚಿತ್ರಗಳಲ್ಲಿ ಇವರು ನಟಿಸಿ ಗಮನ ಸೆಳೆದಿದ್ದಾರೆ. ವಿಷ್ಣು ಶಕ್ತಿಯನ್ನು ಹತ್ತಿರದಿಂದ ಕಂಡಿದ್ದರು ಸುಹಾಸಿನಿ. ವಿಷ್ಣು ಬಗ್ಗೆ ಅವರು ಪ್ರೀತಿಯಿಂದ ಮಾತನಾಡಿದ್ದರು.

‘ಕಮಲ್ ಹಾಸನ್, ರಜನಿಕಾಂತ್ ಕಂಬೈನ್ ಮಾಡಿದ್ರೆ ವಿಷ್ಣುವರ್ಧನ್. ಚಿರಂಜೀವಿ ಬಳಿ ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ. ವಿಷ್ಣು ಅವರು ಪ್ರಾಪರ್ ಹೀರೋ’ ಎಂದು ಸುಹಾಸಿನಿ ಅವರು ಹೇಳಿದ್ದರು. ಸುಹಾಸಿನಿ ಅವರಿಹೆ ವಿಷ್ಣು ಬಗ್ಗೆ ಅಪಾರ ಗೌರವ ಇದೆ. ವಿಷ್ಣುವರ್ಧನ್ ನಿಧನದ ಬಳಿಕವೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sat, 1 November 25

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ