ಫೇಸ್ಬುಕ್ ಲೈವ್ನಲ್ಲಿ ಬಂದಿದ್ದ ತಮಿಳು ನಟಿ ಹಾಗೂ ಮಾಡೆಲ್ ಮೀರಾ ಮಿಥುನ್ ಕಣ್ಣೀರು ಹಾಕಿದ್ದರು. ಅಷ್ಟೇ ಅಲ್ಲ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದರು. ನಂತರ ಅವರು ಶಾಂತರಾಗಿದ್ದರು. ಈಗ ಮೀರಾ ಟ್ವಿಟರ್ನಲ್ಲಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಯ್ಫ್ರೆಂಡ್ಗೆ ಲಿಪ್ಲಾಕ್ ಮಾಡಿರುವುದು ಕಂಡು ಬಂದಿದೆ. ಮೀರಾ ಮಿಥುನ್ ತೋಟಕ್ಕಲ್ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದವರು. ನಟನೆ ಜತೆಗೆ ಮೀರಾ ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿದ್ದಾರೆ. ತಮಿಳು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಇವರು ಸ್ಪರ್ಧಿಯಾಗಿದ್ದರು. ಜೋಡಿ ನಂಬರ್ 1 ರಿಯಾಲಿಟಿ ಶೋನಲ್ಲೂ ಕಂಟೆಸ್ಟಂಟ್ ಆಗಿ ಕಾಣಿಸಿಕೊಂಡಿದ್ದರು. ಮೀರಾ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ ಎಂದೇ ಹೇಳಬಹುದು. ಈಗ ಅವರು ಟ್ವಿಟರ್ ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ.
#Venom @CruzeSamie ♾️🤗 #MeeraMitun pic.twitter.com/nZQkhkFYvO
— Meera Mitun (@meera_mitun) May 10, 2021
ಮೀರಾ ಮಿಥುನ್ ಬಾಯ್ಫ್ರೆಂಡ್ ಜತೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 14 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಅವರು ಲಿಪ್ಲಾಕ್ ಮಾಡಿದ್ದಾರೆ. ಇಬ್ಬರೂ ಮುತ್ತಿನ ಸುರಿಮಳೆ ಸುರಿಸಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಮೀರಾ ಮಿಥುನ್ ಫೇಸ್ಬುಕ್ ಲೈವ್ ಬಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದರು. ‘ನನಗೆ ಜೀವಿಸೋಕೆ ಕೊಡುತ್ತಿಲ್ಲ. ಎಲ್ಲರೂ ನನ್ನ ಜೀವನ ಹಾಳು ಮಾಡುತ್ತಿದ್ದಾರೆ. ನನಗೆ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಬೆದರಿಕೆಗಳು ಬರುತ್ತಿವೆ’ ಎಂದು ಆರೋಪಿಸಿದ್ದರು.
ಇದನ್ನೂ ಓದಿ: Salman Khan: ಟೈಗರ್ ಶ್ರಾಫ್ ಪ್ರೇಯಸಿ ದಿಶಾಗೆ ಸಲ್ಮಾನ್ ಕಿಸ್ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್