ಕೊರೊನಾ ಕಡಿಮೆ ಆದ ನಂತರ ಮತ್ತೆ ಮುಂದುವರಿಯಲಿದೆ ಸೀಸನ್ 8? ಕೊನೇ ದಿನ ಸೂಚನೆ ಕೊಟ್ರು ಬಿಗ್ ಬಾಸ್

ಕೊರೊನಾ ವೈರಸ್ ಕಾರಣದಿಂದ ಬಿಗ್ ಬಾಸ್ ಅರ್ಧಕ್ಕೆ ನಿಂತಿದೆ. ಹೀಗಾಗಿ ಎಲ್ಲಾ 11 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭಾನುವಾರ ಏನೆಲ್ಲ ಆಯ್ತು ಎಂಬುದನ್ನು ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.

ಕೊರೊನಾ ಕಡಿಮೆ ಆದ ನಂತರ ಮತ್ತೆ ಮುಂದುವರಿಯಲಿದೆ ಸೀಸನ್ 8? ಕೊನೇ ದಿನ ಸೂಚನೆ ಕೊಟ್ರು ಬಿಗ್ ಬಾಸ್
ಬಿಗ್ ಬಾಸ್​ ಕನ್ನಡ ಸೀಸನ್​ 8
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 13, 2021 | 7:15 AM

ಕನ್ನಡ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಭಾನುವಾರ ನಡೆದ ವಿಶೇಷ ದಿನದ ಸಂಚಿಕೆಯನ್ನು ಕಲರ್ಸ್ ಕನ್ನಡ ವಾಹಿನಿ ಮೇ 11 ಹಾಗೂ 12ರಂದು ಪ್ರಸಾರ ಮಾಡಿದೆ. ಸೀಸನ್ ಅರ್ಧಕ್ಕೆ ನಿಲ್ಲುತ್ತಿರುವುದಕ್ಕೆ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ಬೇಸರ ಹೊರ ಹಾಕಿದ್ದಾರೆ. ಕೊನೆಯ ದಿನ ಸೀಸನ್ 8 ಮತ್ತೆ ಆರಂಭವಾಗುವ ಸೂಚನೆಯನ್ನು ಬಿಗ್ ಬಾಸ್ ನೀಡಿದೆ.

ಕೊರೊನಾ ವೈರಸ್ ಕಾರಣದಿಂದ ಬಿಗ್ ಬಾಸ್ ಅರ್ಧಕ್ಕೆ ನಿಂತಿದೆ. ಹೀಗಾಗಿ ಎಲ್ಲಾ 11 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಮೇ 9ರಂದು ಏನೆಲ್ಲ ಆಯ್ತು ಎಂಬುದನ್ನು ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ. ಪ್ರತಿಬಾರಿ ಬಿಗ್ ಬಾಸ್ ಕೊನೆಯ ದಿನ ಗ್ರ್ಯಾಂಡ್ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇರಲಿಲ್ಲ. ಕಿಚ್ಚ ಸುದೀಪ್ ವಾಯ್ಸ್ ಕೇಳಿ ಎಲ್ಲರೂ ಖುಷಿಪಟ್ಟಿದ್ದಾರೆ.

‘ಎಲ್ಲಾ ಕಷ್ಟದ ಸಮಯದಲ್ಲೂ ನಾವು ನೆನಪಿಟ್ಟುಕೊಳ್ಳುವ ಒಂದು ಮಾತಿದೆ. ಒಂದು ಸಲಕ್ಕೆ ಒಂದು ಹೆಜ್ಜೆ ಇಡಬೇಕು. ಅದನ್ನು ಯಾವಾಗಲೂ ನಿಲ್ಲಿಸಬಾರದು. ಈ ಪ್ರಯಾಣ ಪೂರ್ತಿಯಾಗಿಲ್ಲ ಎನ್ನುವ ಬೇಸರ ಬೇಡ. ಹಾಗೆ ನೋಡಿದರೆ ಯಾವ ಪ್ರಯಾಣಕ್ಕೂ ಕೊನೆ ಇಲ್ಲ. ಒಂದರ ಕೊನೆ ಇನ್ನೊಂದರ ಆರಂಭ ಎನ್ನುವುದು ನೆನಪಿರಲಿ. ನಿಂತಿರುವ ಪ್ರಯಾಣ ಯಾವುದೇ ಕ್ಷಣದಲ್ಲಿ ಆರಂಭಿಸಲು ಅವಕಾಶ ಇದೆ ಎಂಬುದು ನೆನಪಿರಲಿ’ ಎಂದು ಬಿಗ್ ಬಾಸ್ ಹೇಳಿದರು.

ನಿಂತಿರುವ ಪ್ರಯಾಣ ಯಾವುದೇ ಕ್ಷಣದಲ್ಲಿ ಆರಂಭಿಸಲು ಅವಕಾಶ ಇದೆ ಎಂಬುದು ನೆನಪಿರಲಿ ಎನ್ನುವ ಮಾತನ್ನು ಹೇಳುತ್ತಿದ್ದಂತೆ ಸ್ಪರ್ಧಿಗಳ ಕಿವಿ ನೆಟ್ಟಗಾಯಿತು. ಕೊರೊನಾ ಕಡಿಮೆ ಆದ ನಂತರದಲ್ಲಿ ಮತ್ತೆ ಬಿಗ್​ ಬಾಸ್​ ಆರಂಭಗೊಳ್ಳಲಿದೆಯೇ ಎನ್ನುವ ಪ್ರಶ್ನೆಯನ್ನು ಇದು ಹುಟ್ಟು ಹಾಕಿತು.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ