ಲಾಕ್ಡೌನ್ನಲ್ಲಿ ಮನರಂಜನೆ ನೀಡೋಕೆ ಬರ್ತಿವೆ ‘ಕಥಾಸಂಗಮ’ ಹಾಗೂ ‘ರಾಮಾರ್ಜುನ’
ದೇಶದಲ್ಲಿ ಕೊರೊನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಹೀಗಾಗಿ ಜನರನ್ನು ಮನರಂಜಿಸೋಕೆ ವಾಹಿನಿಗಳು ಮುಂದಾಗಿವೆ.

ಕೊರೊನಾ ವೈರಸ್ ನಿಯಂತ್ರಿಸೋಕೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರೆಲ್ಲರೂ ಮನೆಯಲ್ಲೇ ಕೂತಿದ್ದಾರೆ. ಈ ಸಂದರ್ಭದಲ್ಲಿ ವೀಕ್ಷಕರಿಗೆ ಮನರಂಜನೆ ನೀಡೋಕೆ ಜೀ ಕನ್ನಡ ವಾಹಿನಿ ಮುಂದಾಗಿದೆ. ‘ರಾಮಾರ್ಜುನ’ ಹಾಗೂ ‘ಕಥಾಸಂಗಮ’ ಸಿನಿಮಾಗಳ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡಲು ವಾಹಿನಿ ನಿರ್ಧರಿಸಿದೆ.
ಕಿರಣ್ ರಾಜ್ ಕೆ., ಚಂದ್ರಜಿತ್ ಬೆಳ್ಳಿಯಪ್ಪ, ಶಶಿ ಕುಮಾರ್ ಪಿ., ರಾಹುಲ್ ಪಿ.ಕೆ., ಜಮದಗ್ನಿ ಮನೋಜ್, ಕರಣ್ ಅನಂತ್, ಜಯಶಂಕರ್ ನಿರ್ದೇಶನದ ವಿವಿಧ ಕಥೆಗಳ ಸಂಗಮವೇ ‘ಕಥಾಸಂಗಮ’. ಈ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ಹರಿಪ್ರಿಯಾ, ರಿಷಭ್ ಶೆಟ್ಟಿ, ಕಿಶೋರ್, ರಾಜ್ ಬಿ. ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಅವಿನಾಶ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಹರಿ ಸಮಸ್ತಿ ಮುಂತಾದವರು ಕಥಾ ಸಂಗಮದಲ್ಲಿ ನಟಿಸಿದ್ದಾರೆ. ಇದೇ ಶನಿವಾರ (ಮೇ 15) ರಾತ್ರಿ 7 ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಅನೀಶ್ ತೇಜೇಶ್ವರ್ ನಟನೆ ಜತೆಗೆ ನಿರ್ದೇಶನವನ್ನೂ ಮಾಡಿರುವ ‘ರಾಮಾರ್ಜುನ’ ಸಿನಿಮಾ ವಿಮೆ, ವೈದ್ಯಕೀಯ ಹಾಗೂ ರಾಜಕೀಯ ಮಾಫಿಯಾದ ಕಥೆಯನ್ನು ಹೇಳುತ್ತದೆ. ನಾಯಕ ಒಬ್ಬ ವಿಮಾ ಏಜೆಂಟ್. ಪ್ರತಿಯೊಬ್ಬರೂ ವಿಮೆ ಪಡೆಯಬೇಕೆನ್ನುವುದು ಅವನ ಬಯಕೆ. ಜನರ ಸಮಸ್ಯೆಗಳಿಗೆ ಒಂದೇ ಫೋನ್ ಕರೆಗೆ ಸ್ಪಂದಿಸುತ್ತಿರುತ್ತಾನೆ. ಆದರೆ ಆ ಪ್ರದೇಶದಲ್ಲಿ ಇನ್ನೂ ಸತ್ತಿರದ 20 ಮಂದಿಯ ಹಿಂದೆ ಬಹುದೊಡ್ಡ ಇನ್ಷೂರೆನ್ಸ್ ಹಗರಣವಿರುತ್ತದೆ. ಇದು ನಾಯಕನಿಗೆ ಗೊತ್ತಾಗುತ್ತದೆ. ನಂತರ ಆತ ಏನು ಮಾಡುತ್ತಾನೆ ಎನ್ನುವುದೇ ಸಿನಿಮಾದ ಕಥೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ರವಿ ಕಾಳೆ, ಶರತ್ ಲೋಹಿತಾಶ್ವ ನಟಿಸಿದ್ದಾರೆ. ಇದೇ ಭಾನುವಾರ ರಾತ್ರಿ 7ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಸೆಟಲ್ ಆದರೂ ಕೊವಿಡ್ ಸಮಯದಲ್ಲಿ ಕನ್ನಡಿಗರ ಕಷ್ಟಕ್ಕೆ ಮಿಡಿದ ದರ್ಶನ್ ‘ಶಾಸ್ತ್ರಿ’ ಸಿನಿಮಾ ನಟಿ
ಬಿಗ್ ಬಾಸ್ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್ ಪ್ರಪೋಸಲ್; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ