AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ಗೆ ಎಚ್ಚರಿಕೆ ನೀಡಿದ ಮೆಗಾ ಫ್ಯಾನ್ಸ್, ಉರಿದು ಬಿದ್ದ ಬನ್ನಿ ಫ್ಯಾನ್ಸ್

ಅಲ್ಲು ಅರ್ಜುನ್ ಹಾಗೂ ಮೆಗಾ ಕುಟುಂಬದ ನಡುವೆ ಮೂಡಿರುವ ಬಿರುಕು ದಿನೇ-ದಿನೇ ಹೆಚ್ಚಾಗುತ್ತಿದೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಇವೆಂಟ್​ನಲ್ಲಿ ಮೆಗಾ ಫ್ಯಾಮಿಲಿ ಅಭಿಮಾನಿಗಳು ಅಲ್ಲು ಅರ್ಜುನ್​ಗೆ ಎಚ್ಚರಿಕೆ ನೀಡುವ ಸಾಲುಗಳಿದ್ದ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದಾರೆ.

ಅಲ್ಲು ಅರ್ಜುನ್​ಗೆ ಎಚ್ಚರಿಕೆ ನೀಡಿದ ಮೆಗಾ ಫ್ಯಾನ್ಸ್, ಉರಿದು ಬಿದ್ದ ಬನ್ನಿ ಫ್ಯಾನ್ಸ್
ಮಂಜುನಾಥ ಸಿ.
|

Updated on: Nov 10, 2024 | 9:35 AM

Share

ಅಲ್ಲು ಅರ್ಜುನ್ ಹಾಗೂ ಮೆಗಾ ಕುಟುಂಬದ ನಡುವೆ ಬಿರುಕು ಮೂಡಿದೆ. ಪವನ್ ಕಲ್ಯಾಣ್​ ಚುನಾವಣೆಗೆ ನಿಂತಿದ್ದಾಗ, ಅಲ್ಲು ಅರ್ಜುನ್ ಎದುರಾಳಿ ಪಕ್ಷದ ಸದಸ್ಯರೊಬ್ಬರ ಪರವಾಗಿ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದು ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ನಡುವೆ ಬಿರುಕಿಗೆ ಕಾರಣವಾಗಿತ್ತು. ಆ ನಂತರ ಪವನ್ ಕಲ್ಯಾಣ್ ಸಹೋದರ ನಾಗಬಾಬು ಮಾಡಿದ ಟ್ವೀಟ್, ಬೆಂಗಳೂರಿಗೆ ಬಂದಿದ್ದಾಗ ಪವನ್ ‘ಪುಷ್ಪ’ ಸಿನಿಮಾ ಬಗ್ಗೆ ಆಡಿದ ಮಾತುಗಳು ಎರಡು ಕುಟುಂಬಗಳ ನಡುವಿನ ಬಿರುಕು ಹೆಚ್ಚು ಮಾಡಿದ್ದವು. ಅಲ್ಲು ಅರ್ಜುನ್ ಸಹ ಪರೋಕ್ಷವಾಗಿ ಮೆಗಾ ಫ್ಯಾಮಿಲಿ ವಿರುದ್ಧ ಮಾತನಾಡಿದ್ದರು. ಈಗ ಮೆಗಾ ಅಭಿಮಾನಿಗಳು, ರಾಮ್ ಚರಣ್​ ಸಿನಿಮಾ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್​ಗೆ ಎಚ್ಚರಿಕೆ ನೀಡಿದ್ದಾರೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ರಾಮ್ ಚರಣ್ ಮತ್ತು ಮೆಗಾ ಕುಟುಂಬದ ಅಭಿಮಾನಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮೆಗಾ ಅಭಿಮಾನಿಗಳು ಹಿಡಿದಿದ್ದ ಪೋಸ್ಟರ್​ಗಳು ಗಮನ ಸೆಳೆದವು. ಹಲವಾರು ಅಭಿಮಾನಿಗಳು ಅಲ್ಲು ಅರ್ಜುನ್ ವಿರುದ್ಧ ಪೋಸ್ಟರ್ ಅನ್ನು ಹಿಡಿದು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ:ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್

‘ಮೆಗಾ ಫ್ಯಾಮಿಲಿಯಲ್ಲಿ ಇರುವುದು ಹುಲಿಗಳು ಮಾತ್ರ, ಅಲ್ಲಿ ನರಿಗಳಿಗೆ ಪ್ರವೇಶವಿಲ್ಲ’ ಎಂದು ಬರೆಯಲಾಗಿದ್ದ ಪೋಸ್ಟರ್ ಅನ್ನು ಕೆಲ ಅಭಿಮಾನಿಗಳು ಹಿಡಿದುಕೊಂಡಿದ್ದರು. ಇನ್ನು ಕೆಲವರು ಅವಾಚ್ಯ ಶಬ್ದಗಳನ್ನು ಸಹ ಅಲ್ಲು ಅರ್ಜುನ್​ಗಾಗಿ ಪೋಸ್ಟರ್​ ಮೇಲೆ ಬರೆದಿದ್ದರು. ‘ಅಲ್ಲು ಅರ್ಜುನ್ ** ಕೂಡ ಕಿತ್ತುಕೊಳ್ಳಲಾಗದು’ ಎಂದು ಕೆಲವರು ಬರೆದಿದ್ದರು. ‘ನಮ್ಮನ್ನು ಯಾರು ತಡೆಯೋರು’ ಎಂಬ ಸಾಲು ಬರೆದ ಪೋಸ್ಟರ್ ಅನ್ನು ಕೆಲವು ಅಭಿಮಾನಿಗಳು ಪ್ರದರ್ಶಿಸಿದರು. ಅಲ್ಲು ಅರ್ಜುನ್ ಈ ಹಿಂದೆ ಹೇಳಿದ್ದ ‘ಚಪ್ಪನು ಬ್ರದರ್’ಗೆ ವಿರುದ್ಧವಾಗಿ ‘ಚಪ್ಪಿಸ್ತಾಮ್ ಬ್ರದರ್’ ಎಂಬ ಪೋಸ್ಟರ್ ಸಹ ಕಾಣಿಸಿತು.

ಈ ಹಿಂದೆ ಅಲ್ಲು ಅರ್ಜುನ್ ಅಭಿಮಾನಿಗಳು, ಚಿತ್ರಮಂದಿರದ ಮುಂದೆ ಕೆಲ ಪೋಸ್ಟರ್​ಗಳನ್ನು ಹಾಕಿ, ಮೆಗಾ ಕುಟುಂಬಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಸ್ವತಃ ಅಲ್ಲು ಅರ್ಜುನ್ ಸಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗಲೂ ಪರೋಕ್ಷವಾಗಿ ಮೆಗಾ ಫ್ಯಾಮಿಲಿಗೆ ಟಾಂಗ್ ಕೊಟ್ಟಿದ್ದರು. ಇದರಿಂದಾಗಿ ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ನಡುವೆ ಬಿರುಕು ಹೆಚ್ಚಾಗಿದೆ. ಇತ್ತೀಚೆಗೆ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಗೆ ಶುಭ ಕೋರುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರಾದರೂ ಈಗ ಮತ್ತೆ ಅದು ಹೆಚ್ಚಾಗಿದೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟಿಕೆಟ್ ಹೆಚ್ಚಳದ ಬಗ್ಗೆ ಸಿನಿಮಾದ ನಿರ್ಮಾಪಕರು ಆಂಧ್ರ ಸರ್ಕಾರದ ಬಳಿ ಮಾತನಾಡಿದ್ದು, ಟಿಕೆಟ್ ದರ ಹೆಚ್ಚಳಕ್ಕೆ ಅವರಿಗೆ ಅನುಮತಿ ದೊರಕಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ