ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ; ಶಾಕಿಂಗ್ ವಿಡಿಯೋ ವೈರಲ್

ಮೆಕ್ಸಿಕೋದ 23 ವರ್ಷದ ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ವ್ಯಾಲೆರಿಯಾ ಮಾರ್ಕೆಜ್ ಅವರನ್ನು ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೌಂದರ್ಯವೇ ಅವರ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮೆಕ್ಸಿಕೋದಲ್ಲಿ ಮಹಿಳೆಯರ ಮೇಲಿನ ಹಿಂಸೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ; ಶಾಕಿಂಗ್ ವಿಡಿಯೋ ವೈರಲ್
ವ್ಯಾಲೆರಿಯಾ

Updated on: May 16, 2025 | 8:24 AM

ಸುಂದರವಾಗಿರುವ ಕಾರಣಕ್ಕೆ ಕೆಲವರು ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಕೇಳಿರಬಹುದು. ಸಾರ್ವಜನಿಕವಾಗಿ ಓಡಾಡುವಾಗ ಯುವತಿಯರು ಈ ರೀತಿಯ ಕಿರುಕುಳ ಅನುಭವಿಸಿದರ ಬಗ್ಗೆ ಹಲವು ಕಡೆಗಳಲ್ಲಿ ವರದಿ ಆಗಿರುತ್ತದೆ. ಆದರೆ, ಮೆಕ್ಸಿಕೋದಲ್ಲಿ ಸುಂದರುವಾಗಿರುವ ಕಾರಣಕ್ಕೆ 23 ವರ್ಷದ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಟಿಕ್​ಟಾಕ್ (Tik Tok) ಲೈವ್ ಸ್ಟ್ರೀಮಿಂಗ್ ಮಾಡುವಾಗಲೇ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ದುರ್ದೈವಿ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು. ಅಲ್ಲಿ ವ್ಯಾಲೆರಿಯಾ ಖುಷಿಯಿಂದ ಲೈವ್​​ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಸಲೂನ್​ಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ಮೊಬೈಲ್​ನ ವಶಕ್ಕೆ ಪಡೆದಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ
‘ನೀವು ಹೇಗೆ ಎಂದು ಎಲ್ಲರಿಗೂ ಗೊತ್ತು’; ಚೈತ್ರಾಗೆ ನೇರವಾಗಿ ಹೇಳಿದ ಅಭಿಮಾನಿ
ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ
17ನೇ ವಯಸ್ಸಿಗೆ ನಟನೆ; ಸಲ್ಲುಗಿಂತ ಹೆಚ್ಚು ಸಂಭಾವನೆ ಪಡೆದ ಮಾಧುರಿ
ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ ರಕ್ಷಕ್ ಬುಲೆಟ್; ತಂದೆಯೇ ಕಾರಣ

ಸೌಂದರ್ಯವೇ ಮುಳುವಾಯ್ತು?

ವ್ಯಾಲೆರಿಯಾ ಅವರಿಗೆ ಸೌಂದರ್ಯವೇ ಮುಳುವಾಯಿತಾ ಎನ್ನುವ ಪ್ರಶ್ನೆ ಮೂಡಿದೆ. ಸೌಂದರ್ಯದ ಕಾರಣಕ್ಕೆ ಅಥವಾ ಹೆಣ್ಣು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕೊಲ್ಲೋದು ಮೆಕ್ಸಿಕೋದಲ್ಲಿ ಸಾಮಾನ್ಯವಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಮೆಕ್ಸಿಕೋದಲ್ಲಿ ಈ ರೀತಿ ನಿತ್ಯ 10 ಯುವತಿ/ಮಹಿಳೆಯರ ಕೊಲೆ ಆಗುತ್ತದೆ ಎಂಬುದು ಶಾಕಿಂಗ್ ವಿಚಾರ. ವ್ಯಾಲೆರಿಯಾ ಸಾವಿಗೂ ಇದೇ ಕಾರಣ ಎನ್ನಲಾಗುತ್ತಿದೆ.

ಗೊತ್ತೇ ಆಗಲಿಲ್ಲ..

ವ್ಯಾಲೆರಿಯಾ ಅವರು ಗೊಂಬೆಯನ್ನು ಇಟ್ಟುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಅವರ ಹೊಟ್ಟೆಗೆ ಶೂಟ್ ಮಾಡಲಾಗಿದೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರು ಅಸುನೀಗಿದ್ದಾರೆ. ಆ ಬಳಿಕ ಯಾರೋ ಒಬ್ಬರು ಅವರ ಮೊಬೈಲ್ ತೆಗೆದುಕೊಂಡು ಲೈವ್​ಸ್ಟ್ರೀಮ್​ನ ನಿಲ್ಲಿಸಿದ್ದಾರೆ. ಉಡುಗೊರೆ ಕೊಡೋ ನೆಪದಲ್ಲಿ ಬಂದ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ

ವ್ಯಾಲೆರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈಗತಾನೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇನ್​ಸ್ಟಾಗ್ರಾಮ್ ಹಾಗೂ ಟಿಕ್​ಟಾಕ್ ಸೇರಿ ಅವರಿಗೆ 2 ಲಕ್ಷ ಹಿಂಬಾಲಕರು ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Fri, 16 May 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us