ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ

|

Updated on: Jun 28, 2024 | 2:27 PM

ಬೆಂಗಳೂರಿನ ಎಚ್​​ಎಸ್​ಆರ್ ಲೇಔಟ್​ನಲ್ಲಿ ಮೈಕಲ್ ಅಜಯ್ ಫುಡ್ ಟ್ರಕ್ ಹೊಂದಿದ್ದಾರೆ. ಇಲ್ಲಿ ವಿವಿಧ ರೀತಿಯ ಬರ್ಗರ್​​ನ ಅವರು ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಕೆಚಪ್​ಗಳನ್ನು ಈ ಬರ್ಗರ್ ತಯಾರಿಸಲು ಬಳಕೆ ಮಾಡುತ್ತಾರೆ ಅನ್ನೋದು ವಿಶೇಷ.

ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ
ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿ ಸಾಕಷ್ಟು ಜನಪ್ರಿಯತೆ ಪಡೆದರು ಮೈಕಲ್ ಅಜಯ್ ಅವರು. ‘ಬಿಗ್ ಬಾಸ್​’ಗೆ ಎಂಟ್ರಿ ಪಡೆಯುವುದಕ್ಕೂ ಮೊದಲು ಅವರು ಮಾಡೆಲ್ ಆಗಿದ್ದರು. ಈಗ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈಗ ಅವರು ಹೋಟೆಲ್ ಒಂದನ್ನು ಆರಂಭಿಸುತ್ತಿದ್ದಾರೆ. ಅದರ ಉದ್ಘಾಟನೆ ನಡೆಯುತ್ತಿದೆ. ಇದಕ್ಕೆ ಬಿಗ್ ಬಾಸ್​​ನ ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಭಾಗಿ ಆಗುತ್ತಿದ್ದಾರೆ.

ಬೆಂಗಳೂರಿನ ಎಚ್​​ಎಸ್​ಆರ್ ಲೇಔಟ್​ನಲ್ಲಿ ಮೈಕಲ್ ಅವರು ಫುಡ್ ಟ್ರಕ್ ಹೊಂದಿದ್ದಾರೆ. ಇಲ್ಲಿ ವಿವಿಧ ರೀತಿಯ ಬರ್ಗರ್​​ನ ಅವರು ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಕೆಚಪ್​ಗಳನ್ನು ಈ ಬರ್ಗರ್ ತಯಾರಿಸಲು ಬಳಕೆ ಮಾಡುತ್ತಾರೆ ಅನ್ನೋದು ವಿಶೇಷ. ಮೈಕಲ್ ಅವರು ಫಿಟ್ನೆಸ್ ಫ್ರೀಕ್. ಈ ಕಾರಣದಿಂದಲೇ ಅವರು ತಯಾರಿಸೋ ಬರ್ಗರ್​ನಲ್ಲಿ ಮೈದಾ ಬಳಕೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬರ್ಗರ್​ ಸಂಪೂರ್ಣ ಆರೋಗ್ಯಕರ ಅನ್ನೋದು ಅವರ ಹೇಳಿಕೆ.

ಈಗ ಇದೇ ಫುಡ್​ಟ್ರಕ್ ಸಮೀಪ್ ಬರ್ಗರ್ ಶಾಪ್ ಒಂದನ್ನು ಓಪನ್ ಮಾಡುತ್ತಿದ್ದಾರೆ. ಇದಕ್ಕೆ ಅವರು BYOB ಎಂದು ಹೆಸರು ಇಟ್ಟಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಈ ಶಾಪ್ ಓಪನ್ ಇರಲಿದೆ. ಇದರ ಉದ್ಘಾಟನೆ ಇಂದು (ಜೂನ್ 28) ಸಂಜೆ 5 ಗಂಟೆಗೆ ನಡೆಯಲಿದೆ. ವಿನಯ್ ಗೌಡ, ಕಾರ್ತಿಕ್ ಮಹೇಶ್, ಸ್ನೇಹಿತ್, ನೀತು ಮೊದಲಾದವರು ಈ ಹೋಟೆಲ್ ಉದ್ಘಾಟನೆಗೆ ಆಗಮಿಸಲಿದ್ದಾರೆ. ಅವರ ಬೆಂಬಲ ಸಿಗುತ್ತಿರುವುದರಿಂದ ಮೈಕಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ:  ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ವಿನಯ್-ಮೈಕಲ್

ಮೈಕಲ್ ಅವರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ಅವರು ‘ಕಿಲ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮೈಕಲ್ ಅಜಯ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಅಳೆದು ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:22 pm, Fri, 28 June 24