
ಮೋಹನ್ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಮರಕ್ಕಾರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರ ಇಂದು (ಡಿ.02) ಬಿಡುಗಡೆಯಾಗಿದೆ. ಚಿತ್ರದ ಅದ್ದೂರಿತನಕ್ಕೆ ಹಾಗೂ ದೃಶ್ಯ ವೈಭವಕ್ಕೆ ಜನರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೊತೆಗೆ ಚಿತ್ರ ಕಟ್ಟಿಕೊಟ್ಟ ಬಗೆಯನ್ನು ಇಷ್ಟಪಟ್ಟಿದ್ದಾರೆ. ಇಂತಿಪ್ಪ ‘ಮರಕ್ಕಾರ್’ ಬಿಡುಗಡೆಗೂ ಮುನ್ನವೇ ದಾಖಲೆಯೊಂದು ಬರೆದಿತ್ತು. ಹೌದು. ನಿನ್ನೆ (ಡಿ.01) ಮೋಹನ್ಲಾಲ್ ಟ್ವೀಟ್ ಮೂಲಕ ಚಿತ್ರ ಸೃಷ್ಟಿಸಿದ ಅಪೂರ್ವ ದಾಖಲೆಯ ಕುರಿತು ಮಾಹಿತಿ ಹಂಚಿಕೊಂಡರು. ಕೇವಲ ಪ್ರಿ-ಬುಕ್ಕಿಂಗ್ ಮೂಲಕ ಚಿತ್ರವು ₹ 100 ಕೋಟಿ ಕ್ಲಬ್ ಸೇರಿದೆ. ಅಲ್ಲದೇ ಈ ದಾಖಲೆ ರಚಿಸಿದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ‘ಮರಕ್ಕಾರ್’ ಪಾತ್ರವಾಗಿದೆ. ಮೋಹನ್ಲಾಲ್ ಟ್ವೀಟ್ ಮೂಲಕ ಅಂಕಿಅಂಶವನ್ನು ವಿವರಿಸಿದ್ದಾರೆ. ಚಿತ್ರವು ವಿಶ್ವಾದ್ಯಂತ 4,100 ಸ್ಕ್ರೀನ್ಗಳಲ್ಲಿ ತೆರೆಕಾಣುತ್ತಿದ್ದು, ದಿನವೊಂದಕ್ಕೆ 16,000 ಪ್ರದರ್ಶನ ಕಾಣಲಿದೆ. ಈ ಮೂಲಕ ಚಿತ್ರವು ಬಿಡುಗಡೆಗೂ ಮುನ್ನ ಬುಕ್ಕಿಂಗ್ನಿಂದಲೇ ₹ 100 ಕೋಟಿ ಬಾಚಿಕೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.
16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ನೌಕಾಪಡೆಯನ್ನು ಕಟ್ಟಿ ಹೋರಾಡಿದ ‘ಕುಂಜಲಿ ಮರಕ್ಕಾರ್ IV’ ಕತೆಯನ್ನು ಚಿತ್ರವು ಒಳಗೊಂಡಿದೆ. ಪ್ರಿಯದರ್ಶನ್ ನಿರ್ದೇಶಿಸಿರುವ ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ವರ್ಷ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಕೊನೆಗೆ ಸರ್ಕಾರ ಹಾಗೂ ಚಿತ್ರರಂಗದ ಗಣ್ಯರ ಮಧ್ಯಸ್ಥಿಕೆಯಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಈ ನಡೆ ಇದೀಗ ಫಲ ನೀಡಿದ್ದು, ಚಿತ್ರತಂಡ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ. ಅಲ್ಲದೇ ಭಾನುವಾರದವರೆಗೆ ಚಿತ್ರದ ಟಿಕೇಟ್ಗಳು ಈಗಾಗಲೇ ಮುಂಗಡವಾಗಿ ಬುಕ್ಕಿಂಗ್ ಆಗಿದೆ ಎನ್ನಲಾಗಿದೆ.
ಮೋಹನ್ಲಾಲ್ ಹಂಚಿಕೊಂಡಿರುವ ಟ್ವೀಟ್:
നാളെ ചരിത്ര ദിവസം കുഞ്ഞാലിയുടെയും മലയാള സിനിമയുടെയും #MarakkarFromDec2
Worldwide releasing in 4100 screens with 16000 shows per day.#MarakkarArabikadalinteSimham#MarakkarLionoftheArabianSea pic.twitter.com/BvWS0BeBU0
— Mohanlal (@Mohanlal) December 1, 2021
‘ಮರಕ್ಕಾರ್’ ಚಿತ್ರವು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅದ್ದೂರಿ ಬಜೆಟ್ ಚಿತ್ರವಾಗಿದೆ. ಚಿತ್ರಕ್ಕೆ ಸುಮಾರು ₹ 100 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಚಿತ್ರವು ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಇದನ್ನೂ ಓದಿ:
Marakkar Trailer: ‘ಮರಕ್ಕಾರ್’ ದೃಶ್ಯ ವೈಭವಕ್ಕೆ ಫಿದಾ ಆದ ಫ್ಯಾನ್ಸ್; ನೂತನ ಕನ್ನಡ ಟ್ರೈಲರ್ ಇಲ್ಲಿದೆ
ಯಶ್-ರಾಧಿಕಾ ಪಂಡಿತ್ ಪುತ್ರಿ ಆಯ್ರಾ ಹುಟ್ಟುಹಬ್ಬ; 3ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಸ್ಟಾರ್ ಕಿಡ್